ಪರೀಕ್ಷೆ ಬರೆಯಲು ಬೈಕ್‌ನಲ್ಲೇ 1,200 ಕಿ.ಮೀ ಪ್ರಯಾಣ ಮಾಡಿದ ಗರ್ಭಿಣಿ!

ಕೊರೊನಾ ಸಂಕಷ್ಟದಿಂದಾಗಿ ಸಂಚಾರಕ್ಕೆ ರೈಲು ಬಸ್ಸುಗಳು ಸರ್ಪಕವಾಗಿ ದೊರೆಯದ ಕಾರಣ, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಗರ್ಭಿಣಿಯು ಪರೀಕ್ಷೆ ಬರೆಯವುದಾಗಿ ಆಕೆಯನ್ನು ಬೈಕ್‌ನಲ್ಲಿ ಕೋರಿಸಿಕೊಂಡು ಆಕೆಯ ಪತಿ  1200 ಕಿ.ಮೀ ದೂರ ಸಂಚರಿಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಆ ದಂಪತಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅವರ ಬಗೆಗೆ ಮೆಚ್ಚುಗೆ ಮತ್ತು ಕನಿಕರ ವ್ಯಕ್ತವಾಗುತ್ತಿದೆ.

ಜಾರ್ಖಂಡ್‌ ಮೂಲದ ಮಹಿಳೆಯು ಆಕೆಯ ಪತಿಯ ಜೊತೆಗೆ ಮಧ್ಯಪ್ರದೇಶದಲ್ಲಿ ವಾಸವಾಗಿದ್ದರು. ಶಿಕ್ಷಕಿ ಆಗುವ ಕನಸು ಹೊತ್ತಿದ್ದ ಆಕೆ, ಅದಕ್ಕಾಗಿ ಶಿಕ್ಷಕರ ಹುದ್ದೆಗೆ ನೇಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆಕೆಯ ಪತಿ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗ ಕಳೆದುಜಕೊಂಡಿದ್ದರಿಂದಾಗಿ ತಮ್ಮ ಮೂಲ ಸ್ಥಾನವಾದ  ಜಾರ್ಖಂಡ್‌ನ ಗೊಡ್ಡ ಜಿಲ್ಲೆಯ ತೋಲಾ ಗ್ರಾಮಕ್ಕೆ ಮರಳಿ ಹೋಗಿದ್ದರು.

ಶಿಕ್ಷಕ ವೃತ್ತಿಯ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆಕೆಗೆ ಮಧ್ಯಪ್ರದೇಶದ ಗ್ವಾಲಿಯರ್‌ನ ಡಿ.ಇಡಿ ಕೇಂದ್ರದಲ್ಲಿ ಪರೀಕ್ಷೆ ಇದಿದ್ದರಿಂದಾಗಿ ಹಾಗೂ ಅನ್‌ಲಾಕ್‌-4 ಆರಂಭವಾಗಿದ್ದರೂ ಸಮರ್ಪಕವಾಗಿ ಬಸ್‌ ಮತ್ತು ರೈಲುಗಳ ವ್ಯವಸ್ಥೆ ಸಿಗದ ಕಾರಣದಿಂದಾಗಿ ಆಗಸ್ಟ್‌ 28ರಂದು ಸ್ಕೂಟರ್‌ನಲ್ಲಿ ಪತ್ನಿಯನ್ನು ಕರೆದುಕೊಂಡು ಹೊರಟು ಆ. 30ರಂದು ಬೆಳಗ್ಗೆ ಪರೀಕ್ಷಾ ಕೇಂದ್ರ ತಲುಪಿ, ಪರೀಕ್ಷೆ ಬರೆಯಲು ಯಶಸ್ವಿಯಾಗಿದ್ದಾರೆ.

ಬುಡಕಟ್ಟು ಸಮುದಾಯದ ಧನಂಜಯ್‌ ಕುಮಾರ್‌(27) ಮತ್ತು ಅವರ ಪತ್ನಿ ಸೋನಿ ಹೆಂಬ್ರಮ್‌ (22) ದಂಪತಿಗಳು ಪರೀಕ್ಷೆ ಬರೆಯಲೇಬೇಕೆಂಬ ಛಲದಿಂದ ಮಳೆ, ಗಾಳಿ ನಡುವೆಯೂ ಗರ್ಭಿಣಿ ಮಹಿಳೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದು, ಪರೀಕ್ಷೆ ಬರೆದಿದ್ದಾರೆ.

ವಿಡಿಯೋ ವೈರಲ್‌ ಅದ ನಂತರ, ವಿಷಯ ತಿಳಿದ ಗ್ವಾಲಿಯರ್‌ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಅವರು ಆ ದಂಪತಿಗಳಿಗೆ 5,000 ರೂ ನೆರವು ನೀಡಿದ್ದಾರೆ. ಅವರ ವಸತಿ ಹಾಗೂ ಊಟದ ವೆಚ್ಚವನ್ನೂ ಭರಿಸುವುದಾಗಿ ತಿಳಿಸಿದ್ದಾರೆ. ಆಕೆ ಗರ್ಭಿಣಿಯಾಗಿರುವುದರಿಂದ ಅವರಿಗೆ ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗಳನ್ನೂ ಮಾಡಿಸಲಾಗಿದ್ದು, ಊರು ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.


ಇದನ್ನೂ ಓದಿ: ದೇವರ ಆಟ ಗೊತ್ತಿಲ್ಲ; ದೆವ್ವಗಳು ದೇಶ ಆಳುತ್ತಿವೆ: ದೇವನೂರು ಮಹಾದೇವ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights