ಕೊರೊನಾ ನೆಪವೊಡ್ಡಿ ಪ್ರಶ್ನಾವೇಳೆ ಕೈಬಿಟ್ಟಿರುವ ಮೋದಿ ಸರ್ಕಾರ, ವಿದ್ಯಾರ್ಥಿಗಳನ್ನು ಉತ್ತರಿಸುವಂತೆ ಒತ್ತಡ ಹೇರುತ್ತಿದೆ: ಓವೈಸಿ

ಕೊರೊನಾ ನೆಪವೊಡ್ಡಿ ಮುಂಬರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪ್ರಶ್ನಾವೇಳೆಯನ್ನು ಕೈಬಿಟ್ಟ ಕೇಂದ್ರ ಸರ್ಕಾರ, ಜೆಇಇ ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತರಗಳನ್ನು ನೀಡುವಂತೆ ವಿದ್ಯಾರ್ಥಿಗಳನ್ನು ಒತ್ತಡ ಹೇರುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಆರೋಪಿಸಿದ್ದಾರೆ.

“ಒಂದು ಕಡೆ ಕೊರೊನಾ ಕಾರಣ ಹೇಳುತ್ತಿರುವ ನರೇಂದ್ರ ಮೋದಿ ಅವರು ಪ್ರಶ್ನೆ ಗಂಟೆಯಲ್ಲಿ ಉತ್ತರಗಳನ್ನು ನೀಡುವುದಿಲ್ಲ ಎಂದು ಹೇಳಿದ್ದು, ಮತ್ತೊಂದೆಡೆ ನೀವು ಜೆಇಇ ಮತ್ತು ನೀಟ್‌ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗಳನ್ನು ಕೇಳುತ್ತಿದ್ದಾರೆ. ಇದು ಅವರ ಆಡಳಿತ” ಎಂದು ಓವೈಸಿ ಪ್ರಶ್ನಾವೇಳೆಯವನ್ನು ಕೈಬಿಟ್ಟಿರುವುದರ ಬಗ್ಗೆ ವ್ಯಂಗ್ಯವಾಡಿದ್ದಾರೆ.

“ನಾವು ಕೊರೊನಾ ಬಿಕ್ಕಟ್ಟಿನ ಬಗ್ಗೆ ಪ್ರಶ್ನೆಗಳನ್ನು ಎತ್ತಬಹುದೇ ಮತ್ತು ಪೂರ್ವ ಲಡಾಖ್‌ನಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಚರ್ಚೆ ನಡೆಸಬಹುದೇ ಎಂದು ನಮಗೆ ಗೊತ್ತಾಗುತ್ತಿಲ್ಲ. ಏಕೆಂದರೆ ಯಾವುದೇ ಪ್ರಶ್ನಾವೇಳೆ ಇಲ್ಲ” ಎಂದು ಓವೈಸಿ ಹೇಳಿದ್ದಾರೆ.

ಬಹುಮತ ಹೊಂದಿರುವ ಸರ್ಕಾರವು ತನ್ನ ವಿವೇಚನಾರಹಿತ ಸುಗ್ರೀವಾಜ್ಞೆಗಳನ್ನು ತರಬಹುದು ಮತ್ತು ಅವುಗಳನ್ನು ಕಾನೂನುಗಳನ್ನಾಗಿ ಮಾಡಬಹುದೆಂದು ಭಾವಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಹಲವಾರು ದೇಶಗಳ ಪ್ರಧಾನಿಗಳು ಕೊರೊನಾ ವೈರಸ್ ಸಂಬಂಧಿತ ವಿಷಯಗಳ ಬಗ್ಗೆ ಪತ್ರಿಕಾ ಸಭೆ ನಡೆಸುತ್ತಿದ್ದಾರೆ. ಆದರೆ, ಮೋದಿ ಕೇವಲ ವೀಡಿಯೊ ಸಂದೇಶಗಳನ್ನು ಹೊರಹಾಕುತ್ತಾರೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಡಿಸ್‌ಲೈಕ್, ಕಮೆಂಟ್‌ಗಳನ್ನು ಅಳಿಸಬಹುದು, ನಮ್ಮ ಧ್ವನಿಯನ್ನಲ್ಲ: ಮೋದಿ ವಿರುದ್ಧ ರಾಹುಲ್ ಕಿಡಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights