ಭಾರತದ ಜಿಡಿಪಿ ಕುಸಿತಕ್ಕೆ ಮೋದಿಯ ಗಬ್ಬರ್ ಸಿಂಗ್‌ ಟ್ಯಾಕ್ಸ್‌ ಕಾರಣ: ರಾಹುಲ್‌ ಗಾಂಧಿ ಟೀಕೆ

ದೇಶದ ಜಿಡಿಪಿಯು ಐತಿಹಾಸಿಕ ಕುಸಿತ ಕಂಡಿದೆ. ದೇಶದ ಆರ್ಥಿಕತೆ ನೆಲಕಚ್ಚಿದೆ. ಈ ಮಹಾ ಕುಸಿತಕ್ಕೆ ಪ್ರಧಾನಿ ಮೋದಿ ಸರ್ಕಾರದ ಗಬ್ಬರ್ ಸಿಂಗ್‌ ಟ್ಯಾಕ್ಸ್‌ (ಜಿಎಸ್‌ಟಿ) ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವ್ಯಂಗ್ಯವಾಗಿ ಆರೋಪಿಸಿದ್ದಾರೆ.

ಅಸರ್ಪಕವಾದ ಜಿಎಸ್‌ಟಿ ಜಾರಿಗೊಳಿಸಿರುವ ಮೋದಿ ನೇತೃತ್ವದ ಸರ್ಕಾರ, ಅದನ್ನು ನಿರ್ವಹಿಸುವಲ್ಲಿಯೂ ವಿಫಲವಾಗಿದೆ.

ಜಿಎಸ್‌ಟಿ ಇಂದಾಗಿ ಲಕ್ಷಾಂತರ ಸಣ್ಣ ಕೈಗಾರಿಕೆಗಳ ಮೇಲೆ ಹೊಡೆತ ಕಂಡಿದ್ದು, ಲಕ್ಷಾಂತರ ಜನರು ಉದ್ಯೋಗಗಳನ್ನು ಕಸಿದುಕೊಂಡಿದೆ. ಯುವಜನರ ಮತ್ತು ರಾಜ್ಯಗಳ ಆರ್ಥಿಕತೆಯ ಭವಿಷ್ಯ ಹಾಳು ಮಾಡಿದೆ ಎಂದು ಆರೋಪಿಸಿ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ.

ಜಿಎಸ್‌ಟಿ ಎಂಬುದು ತೆರಿಕೆ ವ್ಯವಸ್ಥೆಯಲ್ಲ. ಅದು ಬಡವರು ಮತ್ತು  ಅಸಂಘಟಿತ ವಲಯದ ಮೇಲೆ ದಾಳಿ ನಡೆಸುವ ಘನ ಘೋರ ಕ್ರಮವಾಗಿದೆ ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.


ಇದನ್ನೂ ಓದಿ: ಸರ್ಕಾರದಲ್ಲಿ ಮೂಲಸೌಲಭ್ಯಕ್ಕೂ ಹಣವಿಲ್ಲ; ರಾಜ್ಯಕ್ಕೆ ಸಾಲದ ಹೊರೆ ಹೇರಲು ಬಿಎಸ್‌ವೈ ನಿರ್ಧಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights