ನಿರುದ್ಯೋಗ ಸಮಸ್ಯೆಗೆ ಮೋದಿ ಸರ್ಕಾರ ಎಚ್ಚರಗೊಳ್ಳುತ್ತದೆಯೇ? ಯೋಜನೆ ಫಲಿಸುತ್ತದೆಯೆ?

ಕಳೆದ ಹಲವಾರು ತಿಂಗಳುಗಳಿಂದ ಭಾರತದ ನಗರ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. 2018 ರಲ್ಲಿ ಸರಾಸರಿ 7% ಇದ್ದ ನಿರುದ್ಯೋಗ ಪ್ರಮಾಣ 2019 ರಲ್ಲಿ 8% ಕ್ಕಿಂತ ಹೆಚ್ಚಾಗಿದೆ. ಅಲ್ಲದೆ, ಇತ್ತೀಚಿನ ಲಾಕ್‌ಡೌನ್ ಸಮಯದಲ್ಲಿ ನಂಬಲಾಗದ ಮಟ್ಟಕ್ಕೆ ಏರಿಕೆಯಾಗಿದ್ದು ಶೇ.26 ಕ್ಕೆ ಜಿಗಿದಿದೆ. 2020ರ ಜೂನ್‌ನಲ್ಲಿ ಸುಮಾರು 12% , ಜುಲೈನಲ್ಲಿ 9.2% , ಮತ್ತು ಆಗಸ್ಟ್‌ನಲ್ಲಿ ಇದು ಸುಮಾರು 10% ಎಂದು ಅಂದಾಜಿಸಲಾಗಿದೆ. ಈ ಎಲ್ಲ ಅಂಕಿಅಂಶಗಳು CMIE ನ ಸಮೀಕ್ಷೆಗಳಿಂದ ತಿಳಿದು ಬದಿದೆ. ಅಲ್ಲದೆ, ಈ ನಗರ ಪ್ರದೇಶದ ಪ್ರಮಾಣವು ಗ್ರಾಮೀಣ ಪ್ರದೇಶಗಳಿಗಿಂತ ಸ್ಥಿರವಾಗಿ ಹೆಚ್ಚಾಗಿದೆ. [ಕೆಳಗಿನ ಚಾರ್ಟ್ ನೋಡಿ]

unemp chart

ಆದರೆ, ಈ ಬಿಕ್ಕಟ್ಟಿನ ಬಗ್ಗೆ ಮೋದಿ ಸರ್ಕಾರ ತೀವ್ರ ಮೌನ ವಹಿಸಿದೆ. ಸರ್ಕಾರದ ಪ್ರಚಾರ ಯಂತ್ರೋಪಕರಣಗಳ, ರಾಜ್‌ಮಾಟಾಜ್‌ಗಳ ಮೂಲಕ – ‘ಅಡ್ರಸ್‌ ಟು ನೇಷನ್’ (ರಾಷ್ಟ್ರವನ್ನುದ್ದೇಶಿತ ಭಾಷಣ), ಮ್ಯಾನ್ ಕಿ ಬಾಟ್ಸ್, ವೆಬ್ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಸೇನೆಗಳ ಮೂಲಕ ನಗರ ನಿರುದ್ಯೋಗಿಗಳನ್ನು, ವಿಶೇಷವಾಗಿ ವಿದ್ಯಾವಂತ ಯುವಕರವನ್ನು ಯಾಮಾರಿಸಲಾಗುತ್ತಿದೆ.

ಆದರೂ, ಚಾರ್ಟ್ ತೋರಿಸಿದಂತೆ ತಣ್ಣಗಾಗುತ್ತಿರುವ ಬಿಕ್ಕಟ್ಟು ಮುಂದುವರೆದಿದೆ. ಇತ್ತೀಚೆಗೆ, ಜನಪ್ರಿಯ ಗ್ರಾಮೀಣ ಯೋಜನೆ (ನರೇಗಾ) ಮಾದರಿಯಲ್ಲಿ ನಗರ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ಚಿಂತಿಸುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬಗ್ಗೆ ಸರ್ಕಾರ ಕಳೆದ ವರ್ಷದಿಂದ ಚಿಂತಿಸುತ್ತಿದೆ. ಇದಕ್ಕಾಗಿ 30,000 ಕೋಟಿಗಳನ್ನು ಖರ್ಚು ಮಾಡಲು ಮುಂದಾಗಿದೆ. ಇದನ್ನು ಸಣ್ಣ ನಗರಗಳಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ ನಿರುದ್ಯೋಗ: ಉದ್ಯೋಗ ಸೃಷ್ಟಿಗೆ MNREGA ಒಂದೇ ಮಾರ್ಗವಾ?

2020ರ ಜನವರಿಯಿಂದ ಏಪ್ರಿಲ್ ತ್ರೈಮಾಸಿಕದ ಹೊತ್ತಿಗೆ, ನಗರ ಕಾರ್ಮಿಕ ಸಂಖ್ಯೆ (ನಿರುದ್ಯೋಗಿಗಳಾಗಿದ್ದು ಕೆಲಸ ಮಾಡುತ್ತಿರುವವರೂ ಸೇರಿ) 14.5 ಕೋಟಿ ಎಂದು ಸಿಎಮ್‌ಐಇ ಅಂದಾಜಿಸಿದೆ. ಅದರಲ್ಲಿ ಸುಮಾರು 11.7 ಕೋಟಿ ಉದ್ಯೋಗಿಗಳಾಗಿದ್ದಾರೆ. ಉಳಿದ 2.8 ಕೋಟಿ ಜನರಲ್ಲಿ 1.7 ಕೋಟಿ ಜನರು ನಿರುದ್ಯೋಗಿಗಳಾಗಿದ್ದು, ಸಕ್ರಿಯವಾಗಿ ಉದ್ಯೋಗ ಹುಡುಕುತ್ತಿದ್ದಾರೆ. ಇನ್ನೂ 1.1 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಇವರು ಕೆಲಸ ಮಾಡಲು ಸಿದ್ಧರಿದ್ದಾರೆ. ಆದರೆ ನಿರಾಶೆಗೊಂಡಿದ್ದಾರೆ. ಅವರು ಸಕ್ರಿಯವಾಗಿ ಕೆಲಸ ಹುಡುಕುತ್ತಿಲ್ಲ. ಈ ವರ್ಗದ ನಿರುದ್ಯೋಗವನ್ನು ‘ಹೆಚ್ಚಿನ ನಿರುದ್ಯೋಗ’ ಎಂದು CMIE ಕರೆಯುತ್ತದೆ. ಇದು ನಗರಗಳಲ್ಲಿ ವಾಸ್ತವ ಸಂಗತಿಯ ಚಿತ್ರಣವಾಗಿದೆ.

ನಗರ ಪ್ರದೇಶಗಳಲ್ಲಿನ ಈ 2.8 ಕೋಟಿ ನಿರುದ್ಯೋಗಿಗಳಲ್ಲಿ ಸುಮಾರು 60% ರಷ್ಟು ಜನರು 29 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗದ್ದಾರೆ.

ಲಾಕ್‌ಡೌನ್ ಪರಿಣಾಮ 

ನಮಗೆ ತಿಳಿದಿರುವಂತೆ, ಈ ವರ್ಷ ಮಾರ್ಚ್ 24 ರಂದು ಮೋದಿ ಘೋಷಿಸಿದ ಯಾವುದೇ ಯೋಜನೆಯಿಲ್ಲ ಕೆಟ್ಟ ಕಲ್ಪನೆಯ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಯು ಹಳ್ಳಹಿಡಿಯುವಂತಹ ದುರಂತಕ್ಕೆ ಕಾರಣವಾಯಿತು. (ಲಾಕ್‌ಡೌನ್‌ಗೂ ಮುನ್ನವೇ ಆರ್ಥಿಕತೆ ಕುಸಿದಿತ್ತು. ಲಾಕ್‌ಡೌನ್‌ ನಂತರ ಮತ್ತಷ್ಟು ದುರಂತಹ ಹಂತ ತಲುಪಿತು). ವಿಶೇಷವಾಗಿ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳು ಹೆಚ್ಚಾಗಿ ನಗರ ಪ್ರದೇಶಗಳದ್ದು, ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳಲು ಕಾರಣವಾಯಿತು.

Lockdown 4.0: Here's how States classify red, orange, green, containment  and buffer zones | India News | Manorama

ಲಾಕ್‌ಡೌನ್‌ನಿಂದಾಗಿ ನಗರಗಳು ಮತ್ತು ಪಟ್ಟಣಗಳಲ್ಲಿನ ನಿರುದ್ಯೋಗ ಪ್ರಮಾಣವು ಮೇ ತಿಂಗಳಲ್ಲಿ ಸುಮಾರು 26% ಕ್ಕೆ ಏರಿಕೆಗೊಂಡಿತು. ಹಾಗೂ, ಗ್ರಾಮೀಣ ಪ್ರದೇಶಗಳಲ್ಲಿ ಮೊದಲೇ 22% ರಷ್ಟಿತ್ತು.  ಅನೇಕ ವಲಸೆ ಕಾರ್ಮಿಕರು ಈಗಾಗಲೇ ತಮ್ಮ ಗ್ರಾಮಗಳಿಗೆ ತೆರಳಿದ್ದರು ಎಂಬ ಅಂಶದ ಹೊರತಾಗಿಯೂ ಈ ಪ್ರಮಾಣದ ನಿರುದ್ಯೋಗ ಹಳ್ಳಿಗಳಲ್ಲಿ ಮೊದಲೇ ಇತ್ತು.

ಅಂದಿನಿಂದ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಆಗಸ್ಟ್‌ನಲ್ಲಿ ಸುಮಾರು 10% ಕ್ಕೆ ಇಳಿದಿದೆ ಎಂದು ವರದಿಯಾಗಿದೆ. ಇದು ಪರಿಸ್ಥಿತಿ “ಸುಧಾರಿಸಿದೆ” ಎಂಬ ಅರ್ಥದಲ್ಲಿ ಹೇಳಲಾಗುತ್ತಿದೆ. ಆದರೆ ನಗರ ಪ್ರದೇಶದ ಜನರು ಕೆಲಸ ಮಾಡುತ್ತಿರುವ ಈ ಹೊಸ ‘ಉದ್ಯೋಗ’ ಯಾವುದು?

ಹೆಚ್ಚಿನ ಕೈಗಾರಿಕೆಗಳು ಮುಚ್ಚಲ್ಪಟ್ಟವು ಅಥವಾ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆಗಳು ಮತ್ತು ಕಚೇರಿಗಳನ್ನು ಸಹ ಮುಚ್ಚಲಾಗಿದೆ ಅಥವಾ ಭಾಗಶಃ ತೆರೆಯಲಾಗುತ್ತದೆ. ಆದ್ದರಿಂದ ಯಾವುದೇ ಉದ್ಯೋಗಗಳಿಲ್ಲ. ಲಾಕ್‌ಡೌನ್‌ನಲ್ಲಿ ಕಳೆದುಹೋದ ಎಲ್ಲಾ ಉದ್ಯೋಗಗಳು ಇನ್ನೂ ಹಿಂತಿರುಗಿಲ್ಲ. ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ವಲಯ ಮತ್ತು ವೈಯಕ್ತಿಕ ಸೇವೆಗಳು, ಸಣ್ಣ ಚಿಲ್ಲರೆ ವ್ಯಾಪಾರ ಇತ್ಯಾದಿ ರೀತಿಯ ಅಸಂಘಟಿತ ವಲಯವು ನಾಶವಾಗಿದೆ. ಅವುಗಳಲ್ಲಿ ಕನಿಷ್ಠ ಅರ್ಧದಷ್ಟು, ಮತ್ತೆ ಚೇತರಿಸಿಕೊಳ್ಳುವುದಿಲ್ಲ ಎಂದು ಅಂದಾಜಿಸಲಾಗಿದೆ.

ಆದ್ದರಿಂದ, ಈ ದಿನಗಳಲ್ಲಿ ಜನರು ಮಾಡುತ್ತಿರುವ ಉದ್ಯೋಗಗಳು ಬಹಳ ಕಡಿಮೆ ವೇತನದ್ದಾಗಿವೆ.

ಪ್ರಸ್ತಾವಿತ ನಗರ ಯೋಜನೆ

ನಗರ ಉದ್ಯೋಗಕ್ಕಾಗಿ ಉದ್ದೇಶಿತ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇದೂವರೆಗೂ ಸರ್ಕಾರ ಪ್ರಕಟಿಸಿಲ್ಲ. ಇದನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ((MGNREGS) ಮಾದರಿಯಲ್ಲಿ ರೂಪಿಸಿದರೆ, ಇದರ ಅರ್ಥ ಹೆಚ್ಚಾಗಿ ನಾಗರಿಕ ಕಾರ್ಯಗಳು (ನಿರ್ಮಾಣ, ರಸ್ತೆ ಕಾಮಗಾರಿ, ಇತ್ಯಾದಿ) ರೀತಿಯ ಉದ್ಯೋಗಗಳಾಗಿರುತ್ತವೆ. MGNREGS (ನರೇಗಾ)ನ ಮಾನದಂಡಗಳಿಗೆ ಅನುಗುಣವಾಗಿ, ಪ್ರತಿ ಮನೆಗೆ ತಿಂಗಳಲ್ಲಿ ಸುಮಾರು ಒಂದು ವಾರದ ಕೆಲಸ ಲಭ್ಯವಿರುತ್ತದೆ. ಇದಕ್ಕಾಗಿ ವೇತನವು ದಿನಕ್ಕೆ ಸುಮಾರು 200 ರೂ ಆಗಿರಬಹುದು, ಅಂದರೆ ತಿಂಗಳಿಗೆ ಸುಮಾರು 1,400 ರೂ. ಈ ವೇತನವನ್ನು ನಗರ ಪ್ರದೇಶಗಳಲ್ಲಿ ವಿದ್ಯಾವಂತ ಯುವಜನರು ತೆಗೆದುಕೊಳ್ಳುತ್ತಾರೆಯೇ ಎಂಬುದು ಅನುಮಾನ.

Sai Kripa Labour Supplier, Kota Junction - Placement Services (Candidate)  in Kota-Rajasthan, Kota-rajasthan - Justdial

ನಗರ ನಿರುದ್ಯೋಗ ಸಮಸ್ಯೆಗೆ ಪರಿಹಾರದ ಯೋಜನೆಯನ್ನು ಸರ್ಕಾರ ಇನ್ನೂ ಘೋಷಿಸಿಲ್ಲ. ಇದಕ್ಕೂ ಸ್ವಲ್ಪ ಸಮಯಬೇಕಾಗುತ್ತದೆ. ಅಲ್ಲದೆ, ಘೋಷಿಸಿದ ನಂತರವೂ ಅದು ಜಾರಿಯಾಗಲು ಕಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

ನಗರಗಳಲ್ಲಿ ನರೇಗಾ ರೀತಿಯ ಉದ್ಯೋಗವು ಅನೇಕರಿಗೆ ಒಂದು ರೀತಿಯ ತಾತ್ಕಾಲಿಕ ಪರಿಹಾರವಾಗಿ ಕಂಡರೂ ನಗರ ಪ್ರದೇಶಗಳಲ್ಲಿರುವ 2.8 ಕೋಟಿ ನಿರುದ್ಯೋಗಿಗಳಿಗೆ ಯಾವುದೇ ರೀತಿಯ ನಿಜವಾದ ಪರಿಹಾರವನ್ನು ನೀಡುವುದು ಅಸಂಭವವಾಗಿದೆ. ಈ ನಿರುದ್ಯೋಗಿಗಳ ನಿರೀಕ್ಷೆಗಳನ್ನು ಭೌತಿಕ ದೃಷ್ಟಿಯಿಂದ ಅಥವಾ ಮಹತ್ವಾಕಾಂಕ್ಷೆಯ ದೃಷ್ಟಿಯಿಂದ ಪೂರೈಸುವ ಸಾಧ್ಯತೆಯೂ ಸರ್ಕಾರದ ಯೋಜನೆಯಲ್ಲಿಲ್ಲ.

ಸರ್ಕಾರವು ಮಾಡಬೇಕಾಗಿರುವುದಂದರೆ,  ಎಲ್ಲಾ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ನೀಡುವುದು, ಅವರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸುವುದು ಮತ್ತು ಕೈಗಾರಿಕಾ ಚಟುವಟಿಕೆಯನ್ನು ಪ್ರಾರಂಭಿಸಲು ಹಣವನ್ನು ಒದಗಿಸುವುದು. ಅದರೆ, ಖಾಸಗೀಕರಣದ ಗೀಳಿನಲ್ಲಿರುವ ಸರ್ಕಾರ, ಇಂತಹ ಯೋಜನೆಗಳಿಂದ ಹಿಂದೆ ಸರಿದೇ ಇದೆ.

ಏತನ್ಮಧ್ಯೆ, ನಗರ ಪ್ರದೇಶಗಳು ಇನ್ನೂ ಕೊರೊನಾ ವೈರಸ್‌ನಿಂದಾಗಿ ತತ್ತರಿಸುತ್ತಿವೆ. ಬಡ ಜನರು ಬದುಕುಳಿಯಬೇಕಾಗಿರುವುದರಿಂದ ಸೋಂಕಿಗೆ ಒಳಗಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ದೂರವೇ ಉಳಿದಿದ್ದಾರೆ.  ಮೋದಿ ಆಡಳಿತದಲ್ಲಿ ತೆಗೆದುಕೊಳ್ಳಲಾದ ಕ್ರೂರ ನೀತಿಗಳಲ್ಲಿ ಲಾಕ್‌ಡೌನ್‌ ಎಂಬುದೂ ಒಂದಾಗಿದೆ.


ಇದನ್ನೂ ಓದಿ: ಕೋವಿಡ್ ಲಾಕ್ ಡೌನ್ ನಿರ್ಮಿಸಿದ ನಿರುದ್ಯೋಗ-ಹಸಿವಿನ ತಾಕಲಾಟದಲ್ಲೂ ಸಾಮರಸ್ಯದ ಬೆಸುಗೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights