ಬಂಡಾಯ ನಾಯಕರನ್ನು ಹಣಿಯುತ್ತಿದೆಯೇ ಕಾಂಗ್ರೆಸ್‌? ಯುಪಿ ಚುನಾವಣಾ ಸಮಿತಿಗಳಲ್ಲಿ ಪತ್ರ ಬರೆದವರಿಗಿಲ್ಲ ಸ್ಥಾನ

ಉತ್ತರ ಪ್ರದೇಶ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಸಮಯವಿರುವಾಗಲೇ ಕಾಂಗ್ರೆಸ್‌ ಚುನಾವಣಾ ಸಿದ್ದತೆಯನ್ನು ಆರಂಭಿಸಿದೆ. ಇದಕ್ಕಾಗಿ ಈಗಾಗಲೇ ಏಳು ಸಮಿತಿಗಳನ್ನು ರಚಿಸಿದೆ. ಆದರೆ, ಆ ಯಾವುದೇ ಸಮಿತಿಗಳಲ್ಲಿ ನಾಯಕತ್ವ ಬದಲಾವಣೆಗಾಗಿ  ಕಾಂಗ್ರೆಸ್  ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಪತ್ರ ಬರೆದಿದ್ದವರ ಪೈಕಿ ಯಾರಿಗೂ ಸ್ಥಾನ ನೀಡಲಾಗಿಲ್ಲ.

ಉತ್ತರ ಪ್ರದೇಶದ ಚುನಾವಣೆಗಾಗಿ ಪ್ರಣಾಳಿಕೆ, ಸದಸ್ಯತ್ವ, ಯೋಜನಾ ಅನುಷ್ಠಾನ, ಪಂಚಾಯಿತಿ ಚುನಾವಣೆ, ಮಾಧ್ಯಮ ಸೇರಿದಂತೆ ಸದ್ಯ ಏಳು ಸಮಿತಿಗಳು ರಚನೆಯಾಗಿವೆ. ಈ ಪೈಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಜನರ ಪೈಕಿ ಉತ್ತರ ಪ್ರದೇಶದವರೇ ಆಗಿರುವ ಜಿತಿನ್ ಪ್ರಸಾದ್ ಮತ್ತು ರಾಜ್ ಬಬ್ಬರ್ ಅವರಿಗೆ ಯಾವುದೇ ಸಮಿತಿಯಲ್ಲೂ ಸ್ಥಾನ ನೀಡಲಾಗಿಲ್ಲ.

ಅಲ್ಲದೆ,  ಪತ್ರ ಬರೆದವರಲ್ಲಿ ಒಬ್ಬರಾದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದ, ಹಾಗೂ ಕಾಂಗ್ರೆಸ್‌ನ ಉತ್ತರಪ್ರದೇಶ ಘಟಕದ ಮಾಜಿ ಅಧ್ಯಕ್ಷರೂ ಆಗಿದ್ದ ನಿರ್ಮಲ್ ಖತ್ರಿಗೆ ತರಬೇತಿ ಸಮಿತಿ ಹಾಗೂ ನಸೀಬ್ ಪಠಾಣ್ ಅವರಿಗೆ ಯೋಜನೆ ಅನುಷ್ಠಾನ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಜಿತಿನ್ ಪ್ರಸಾದ್ ಅವರಿಗೆ ಈ ಸಮಿತಿಗಳಲ್ಲಿ ಸ್ಥಾನ ನೀಡದೇ ಇರುವುದಕ್ಕೆ ಈಗಲೇ ಆಕ್ಷೇಪ ವ್ಯಕ್ತಪಡಿಸುವುದು ಉತ್ತಮವಲ್ಲ, ಇನ್ನೂ ಹಲವು ಸಮಿತಿಗಳು ರಚಿಸುವ ಅಗತ್ಯವಿದೆ. ಆ ಸಮಿತಿಗಳಲ್ಲಿ ಅವರಿಗೆ ಸ್ಥಾನ ನೀಡುವ ಸಾಧ್ಯತೆಯಿಂದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮೂಲಗಳು ಹೇಳಿವೆ.

ಜಿತಿನ್ ಪ್ರಸಾದ್
ಜಿತಿನ್ ಪ್ರಸಾದ್

ಜಿತಿನ್ ಪ್ರಸಾದ್‌ ಅವರು ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದರು. ಅಲ್ಲದೆ, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ವಿಚಾರಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಮಾಡಿದ್ದು, ಸುದ್ದಿಯಾಗಿದ್ದರು.

ಇದಲ್ಲದೆ, ಉತ್ತರ ಪ್ರದೇಶ ರಾಜಕೀಯದಲ್ಲಿ ಕೊಂಚ ದೂರ ಸರಿದಿರುವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾದ ಆರ್‌ಪಿಎನ್‌ ಸಿಂಗ್ ಮತ್ತು ರಾಜೀವ್ ಶುಕ್ಲಾ ಅವರಿಗೂ ಸಮಿತಿಗಳಲ್ಲಿ ಸ್ಥಾನ ದೊರೆತಿಲ್ಲ.


ಇದನ್ನೂ ಓದಿ: ಕನ್ಹಯ್ಯ ಕುಮಾರ್ ಪೌರತ್ವ ರದ್ದುಗೊಳಿಸಲು ಪಿಐಎಲ್‌ ಸಲ್ಲಿಸಿದ್ದ ಅರ್ಜಿದಾರನಿಗೆ 25,000 ದಂಡ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights