ಡ್ರಗ್ಸ್‌ ಮಾಫಿಯಾದಲ್ಲಿ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ; ಆದಿತ್ಯ ಆಳ್ವ ಬಂಧನಕ್ಕೆ ವಿಶೇಷ ತಂಡ

ಸ್ಯಾಂಡಲ್‌ವುಡ್‌ನಿಂದ ಶುರುವಾದ ಡ್ರಗ್ಸ್‌ ಮಾಫಿಯಾದ ನಂಟು ಈಗ ಬಾಲಿವುಡ್‌ ಅಂಗಳದಲ್ಲಿಯೂ ವ್ಯಾಪಿಸಿರುವುದಾಗಿ ಸುದ್ದಿಯಾಗುತ್ತಿದೆ. ಈ ನಡುವೆ ಕನ್ನಡ ಚಿತ್ರರಂದ ಡ್ರಗ್ಸ್‌ ದಂದೆಯಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ, ವಿವೇಕ್ ಒಬೆರಾಯ್ ಅವರ ಬಾಮೈದ ಆದಿತ್ಯ ಆಳ್ವ ಅವರ ಹೆಸರೂ ಕೇಳಿಬಂದಿದ್ದು, ಪೊಲೀಸರು ಆದಿತ್ಯ ಆಳ್ವಗಾಗಿ ಶೋಧ ನಡೆಸುತ್ತಿದ್ದಾರೆ.

ಆದಿತ್ಯ ಆಳ್ವ ಅವರನ್ನು ಡ್ರಗ್ಸ್‌ ದಂದೆ ಪ್ರಕರಣದ ಆರನೇ ಆರೋಪಿಯಾಗಿ ಪೊಲೀಸರು ದಾಖಲಿದ್ದಾರೆ. ಆದಿತ್ಯ ಬಂಧನಕ್ಕೆ ಮುಂದಾಗಿರುವ ಪೊಲೀಸರು ಅವರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಸದಾಶಿವ ನಗರದಲ್ಲಿ ವಾಸವಾಗಿದ್ದ ಆಳ್ವ ಅವರ ಮನೆ ಖಾಲಿಯಾಗಿದ್ದು, ಆಳ್ವ ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅವರ ಬಂಧನಕ್ಕಾಗಿ ಸಿಸಿಬಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಡ್ರಗ್ಸ್‌ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ದಿಲ್ಲಿ ಮೂಲದ ವೀರೇನ್‌ ಖನ್ನಾ ಎಂಬಾತ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ನಡೆಸುತ್ತಿದ್ದು,  ಮುಂಬಯಿ, ಬೆಂಗಳೂರು, ದಿಲ್ಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸೆಲೆಬ್ರಿಟಿಗಳಾಗಿಯೇ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಇದರಲ್ಲಿ ವಿವಿಧ ರಾಜ್ಯಗಳ ಚಿತ್ರರಂಗ ಕಲಾವಿದರು ಭಾಗಿಯಾಗುತ್ತಿದ್ದರು ಎಂದು ತನಿಖೆ ತಿಳಿದು ಬಂದಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಪಾರ್ಟಿಗಳಿಗೆ ಹೋದಾಗ ಸ್ನೇಹಿತ ರವಿಶಂಕರ್ ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ನಟಿ ರಾಗಿಣಿ ತಿಳಿಸಿದ್ದಾರೆ. ರಾಗಿಣಿ ಅವರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಡ್ರಗ್ಸ್‌ ಮಾಫಿಯಾ; ನಟಿ ರಾಗಿಣಿ ಬಂಧನದ ಬೆನ್ನಲ್ಲೇ 12 ಮಂದಿ ವಿರುದ್ಧ FRI

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights