11 ವರ್ಷದ ಬಾಲಕನಿಂದ 10 ವರ್ಷದ ಬಾಲಕಿ ಕೊಲೆ; ಆನ್‌ಲೈನ್‌ ಗೇಮ್ ಕಾರಣ

ಹನ್ನೊಂದು ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕಿಯನ್ನು ಕಲ್ಲುಗಳಿಂದ ಹೊಡೆದು ಕೊಂದಿರುವ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆಸಿದೆ.

ಬಾಲಕ ಮತ್ತು ಬಾಲಕಿ ಜೊತೆಯಾಗಿ ಆನ್‌ಲೈನ್‌ ಗೇಮ್‌ ಆಡುತ್ತಿದ್ದರು. ಗೇಮ್‌ನಲ್ಲಿ ಬಾಲಕಿಯು ಆತನನ್ನು ನಿರಂತರವಾಗಿ ಸೋಲಿಸುತ್ತಿದ್ದರಿಂದ ಕೋಪಗೊಂಡ ಬಾಲಕ ಆಕೆಗೆ ಕಲ್ಲುಗಳಿಂದ ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.

ಬಲಕ ಮತ್ತು ಬಾಲಕಿ, ಇಂಧೋರ್‌ನ ಉಪನಗರ ಲಾಸುಡಿಯಾದಲ್ಲಿನ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಸೋಮವಾರ, ಆನ್‌ಲೈನ್ ಗೇಮ್‌ನಲ್ಲಿ ಬಾಲಕಿಯಿಂದ ನಿರಂತರವಾಗಿ ಸೋತು ಕೋಪಗೊಂಡ ಬಾಲಕ, ಆಕೆಯ್ನು ಹತ್ತಿರದ ಮೈದಾನಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದು, ಅವಳ ತಲೆ ಮತ್ತು ಮುಖಕ್ಕೆ ಕಲ್ಲುಗಳಿಂದ ಹೊಡೆದಿದ್ದಾನೆ. ಇದರಿಂದಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಡಿಐಜಿ ಹರಿನಾರಾಯಣಚಾರಿ ಮಿಶ್ರಾ ಹೇಳಿದ್ದಾರೆ.

11-year-old girl takes Class 12 exam in Madhya Pradesh - The Hindu

ಬಾಲಕಿ 5ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಳು, ಮಧ್ಯಾಹ್ನದ ಹೊತ್ತಿಗೆ ಅವಳು ಕಾಣೆಯಾಗಿದ್ದಾಳೆಂದು ಕುಟುಂಬಸ್ಥರಿಗೆ ಗೊತ್ತಾಗಿ, ಹುಡುಕಲು ಪ್ರಾರಂಭಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಬೆಳಗ್ಗೆ 10.30ಕ್ಕೆ ಬಾಲಕನೊಂದಿಗೆ ಮೈದಾನದ ಕಡೆಗೆ ಹೋಗುತ್ತಿದ್ದಳು ಎಂದು ಹೇಳಿದ್ದಾರೆ. ಮೈದಾನಕ್ಕೆ ಬಂದು ನೋಡಿದಾಗ ಬಾಲಕಿಯ ಶವ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಸಾವನ್ನಪ್ಪಿದ ಬಳಿಕ ಆತ ತನ್ನ ಮನೆಗೆ ಓಡಿಹೋಗಿ ಬಚ್ಚಲು ಮನೆಯಲ್ಲಿ ಗಂಟೆಗಟ್ಟಲೇ ಬಚ್ಚಿಟ್ಟುಕೊಂಡಿದ್ದ. ಬಾಲಕನ ಕುಟುಂಬವು ಸಹ ಬಾಲಕ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಬಾಲಕನ ಮೇಲೆ ಪೊಲೀಸರಿಗೆ ಯಾವುದೇ ಸಂಶಯ ಇರಲಿಲ್ಲ. ಆದರೆ, ಬಾಲಕ ಮನೆಯಲ್ಲಿಯೇ ಇದ್ದು, ಬಚ್ಚಲು ಮನೆಯಿಂದ ಹೊರಬರುತ್ತಿಲ್ಲ ಎಂದು ಹೇಳಿದ ನಂತರ, ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದು, ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.


ಇದನ್ನೂ ಓದಿ: ಗಡಿಯಲ್ಲಿ ಭಾರತ ನಿಯಮ ಉಲ್ಲಂಘಸಿಲ್ಲ; ಚೀನಾ ಗುಂಡು ಹಾರಿಸಿ ಪ್ರಚೋದಿಸುತ್ತಿದೆ: ಭಾರತ ಪ್ರತ್ಯುತ್ತರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights