14 ರಾಜ್ಯಗಳಿಗೆ 6,195 ಕೋಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ 14 ರಾಜ್ಯಗಳಿಗೆ 6,195.08 ಕೋಟಿ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್‌ 10 ರಂದು ಅನುದಾನ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುತ್ತದೆ ಎಂದು ಹೇಳಿದೆ.

ಆದಾಯ ಕೊರತೆ ಹಂಚಿಕೆ ಅನುದಾನದ ಕುರಿತು ಹಣಕಾಸು ಸಚಿವಾಲಯವು ರಾಜ್ಯಗಳ ಪಟ್ಟಿ ಬಿಡುಗಡೆ  ಮಾಡಿದ್ದು, 14 ರಾಜ್ಯಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕವನ್ನು ಕೈಬಿಡಲಾಗಿದೆ.

ಈ ಕುರಿತು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ‌ ಕಚೇರಿಯ ಟ್ವಿಟರ್ ಖಾತೆಯಲ್ಲಿ ಯಾವ ರಾಜ್ಯಗಳಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

ಅನುದಾನ ಪಡೆದುಕೊಂಡ ಪಟ್ಟಿಯಲ್ಲಿ ಕೇರಳ ಹೆಚ್ಚು ಪಾಲು ಪಡೆದಿದ್ದು, ಕೇರಳಕ್ಕೆ 1,276.91 ಕೋಟಿ ನೀಡಲಾಗಿದೆ.  ಆಂಧ್ರಪ್ರದೇಶ – 491.41, ಅಸ್ಸಾಂ- 631.58,  ಹಿಮಾಚಲ ಪ್ರದೇಶ – 952.58, ಮಣಿಪುರ- 235.33,  ಮೇಘಾಲಯ- 40.91,  ಮಿಜೋರಾಂ- 118.50, ನಾಗಾಲ್ಯಾಂಡ್- 326.41, ಪಂಜಾಬ್- 638.25, ತಮಿಳುನಾಡು- 335.41,  ತ್ರಿಪುರ- 269.66, ಉತ್ತರಾಖಂಡ- 423.00, ಪಶ್ಚಿಮ ಬಂಗಾಳ- 417.75,  ಸಿಕ್ಕಿಂ- 37.33 ಕೋಟಿ ರೂಗಳು ದೊರೆತಿವೆ.

 


ಇದನ್ನೂ ಓದಿ: ನೈಜ ಪತ್ರಿಕೋದ್ಯಮ ಮತ್ತು ಟಿಆರ್‌ಪಿ ಗೀಳಿನ ಬಕೆಟ್‌ ಮಾಧ್ಯಮಗಳ ನಡುವಿನ ವ್ಯತ್ಯಾಸ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights