ಹರಿಯಾಣ : 786 ಹಚ್ಚೆ ಹೊಂದಿದ್ದಕ್ಕಾಗಿ ಹುಡುಗನ ಕೈ ಕಟ್ : ನ್ಯಾಯಕ್ಕಾಗಿ ಸಹೋದರನ ಪರದಾಟ..!

ಹರಿಯಾಣದ ಪಾಣಿಪತ್‌ನಿಂದ ಬಂದಿರುವ ಈ ಪ್ರಕರಣ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇರಾಮ್ ಸಲ್ಮಾನಿ ಎಂಬ ಯುವಕನ ಸಹೋದರನ ಕೈಯಲ್ಲಿ 786 ಹಚ್ಚೆ ಹಾಕಿದ್ದಕ್ಕಾಗಿ ಕಠಿಣ ಶಿಕ್ಷೆ ನೀಡಲಾಗಿದೆ. ಈ ವಿಷಯ ತಿಳಿದ ನಂತರ ಜನರು ತಲ್ಲಣಗೊಂಡಿದ್ದಾರೆ.  ಕೈಯಲ್ಲಿ 786 ಹಚ್ಚೆ ಬರೆದಿದ್ದರಿಂದ ತನ್ನ ಸಹೋದರನ ಕೈಯನ್ನು ಕತ್ತರಿಸಲಾಗಿದೆ ಎಂದು ಇರಾಮ್ ಸಲ್ಮಾನಿ ಆರೋಪಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಇದರ ಹಿಂದೆ ಕೋಮು ಹಿಂಸಾಚಾರದ ಕೋನವಿಲ್ಲ ಎಂದು ಹೇಳುತ್ತಿದ್ದಾರೆ.

“ನನ್ನ ಸಹೋದರ ಕೆಲಸ ಹುಡುಕಿಕೊಂಡು ಪಾಣಿಪತ್‌ಗೆ ಹೋಗುತ್ತಿದ್ದ. ಅವನಿಗೆ ವಾಸಿಸಲು ಸ್ಥಳವಿಲ್ಲ. ಆದ್ದರಿಂದ ಅವನು ರಾತ್ರಿಯನ್ನು ಉದ್ಯಾನವನದಲ್ಲಿ ಕಳೆಯಲು ನಿರ್ಧರಿಸಿದ. ಅವನ ಹೆಸರನ್ನು ತಿಳಿದ ನಂತರ ಕೆಲವರು ಅವನನ್ನು ಉದ್ಯಾನದಲ್ಲಿ ಮಲಗಲು ಅನುಮತಿಸಲಿಲ್ಲ. ಇಬ್ಬರು ನನ್ನ ಸಹೋದರನನ್ನು ಹೊಡೆದರು. ತನ್ನ ಸಹೋದರನನ್ನು ಉದ್ಯಾನವನದಲ್ಲಿ ಹೊಡೆದ ನಂತರ ಮೂರ್ಚೆ ಹೋದನು ಎಂದು ಇರಾಮ್  ಹೇಳಿದನು. ನಂತರ ಅವನು ನೀರನ್ನು ಹುಡುಕಿಕೊಂಡು ಹತ್ತಿರದ ಮನೆಗೆ ಹೋದನು”.

ಆಗ “ಅವನನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ಹೊಡೆಯಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಮನೆಯಲ್ಲಿದ್ದು ಒಟ್ಟು 6 ಜನರು ಅವನನ್ನು ಲಾಠಿಗಳಿಂದ ಹೊಡೆದು ತಲೆಗೆ ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ. ಅವನ ತಲೆ ರಕ್ತಸ್ರಾವವಾಗಲು ಪ್ರಾರಂಭವಾಯಿತು , ಆದರೆ ಯಾರೂ ಕೇಳಲು ಸಿದ್ಧರಿರಲಿಲ್ಲ. ಅಲ್ಲಿನ ಜನರು ನನ್ನ ಸಹೋದರನ ಕೈಯಲ್ಲಿ 786 ಹಚ್ಚೆ ನೋಡಿ ಕೈ ಕತ್ತರಿಸಿದ್ರುದಾರೆ. ನಂತರ ಕೈ ಕತ್ತರಿಸುವ ಮೂಲಕ ಅವರೆಲ್ಲರೂ ನನ್ನ ಸಹೋದರನನ್ನು ಕಿಶಾಪುರ ರೈಲ್ವೆ ಗೇಟ್ ಬಳಿ ಎಸೆದಿದ್ದಾರೆ. ಅವರು ಅವನು ನಿಧನ ಹೊಂದಿದ್ದಾನೆಂದು ಭಾವಿಸಿದ್ದರು. ಬೆಳಿಗ್ಗೆ ಅವರು ಪ್ರಜ್ಞೆ ಬಂದಾಗ ಕುಟುಂಬ ಮತ್ತು ಕೆಲವರು ಅವನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು ” ಎಂದು ಇರಾಮ್ ಆರೋಪಿಸಿದ್ದಾರೆ . ಈ ಸಂದರ್ಭವನ್ನು ರೈಲಿನಿಂದ ಬಿದ್ದು ತನ್ನ ಸಹೋದರನ ಕೈಯನ್ನು ಕಟ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. “ನನ್ನ ಸಹೋದರನಿಗೆ ನನಗೆ ನ್ಯಾಯ ಬೇಕು. ರಾಜ್ಯ ಸರ್ಕಾರದ ಒತ್ತಡದಲ್ಲಿ ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ನನ್ನ ಸಹೋದರನ ಕೈಯನ್ನು ರೈಲಿನಲ್ಲಿ ಕತ್ತರಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.  ಅವರು ನೈಜ ಸಂಗತಿಗಳನ್ನು ಮರೆಮಾಡುತ್ತಿದ್ದಾರೆ” ಸಹೋದರ ಆರೋಪಿಸಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights