ವಿಡಿಯೋ: ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯ ಬಗ್ಗೆ ಪ್ರಶ್ನಿಸಿದ ವೈದ್ಯರನ್ನೇ ಬಂಧಿಸಿದ ಜಿಲ್ಲಾಧಿಕಾರಿ

ಕೊರೊನಾ ಸೋಂಕು ನಿಯಂತ್ರಣ ಕುರಿತ ಸಮಾಲೋಚನಾ ಸಭೆಯಲ್ಲಿ ಕೊರೊನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿದೆ ಎಂದು ಹೇಳಿದ ವೈದ್ಯಕೀಯ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿ ಮತ್ತು ಬಂಧಿಸುವಂತೆ ಗುಂಟೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಗುಂಟೂರಿನ ಸರಸಾರೋಪೇಟ್‌ನಲ್ಲಿರುವ ಟೌನ್‌ಹಾನ್‌ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ನಂದೇಂಡ್ಲಾ ಪ್ರಾಥಮಿಕ ಆರೋಗ್ಯದ ಕೇಂದ್ರದ ಡಾ. ಸೋಮ್ಲಾ ನಾಯಕ್‌ ಅವರು ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದೆ ಎಂದು ಹೇಳಿದ್ದು, ಅವರ ಮಾತು ಕೇಳಿ ತಾಳ್ಮೆ ಕಳೆದುಕೊಂಡ ಜಿಲ್ಲಾಧಿಕಾರಿ ಸ್ಯಾಮ್ಯುಯೆಲ್‌ ಆನಂದ್‌ ಕುಮಾರ್ ಅವರು ವೈದ್ಯರನ್ನು ಅಮಾನತು ಮತ್ತು ಬಂಧನಕ್ಕೆ ಆದೇಶಿಸಿದ್ದಾರೆ.

ಡಾ. ಸೋಮ್ಲಾ ನಾಯಕ್‌ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಹಾಸಿಗೆಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಸಿದ ಜಿಲ್ಲಾಧಿಕಾರಿ, ಇದು ಸುಳ್ಳು, ಈ ಬಗ್ಗೆ ಜಿಲ್ಲಾ ವೈದ್ಯಕೀಯ ಆರೋಗ್ಯಾಧಿಕಾರಿ (ಡಿಎಂಹೆಚ್‌ಒ) ಅವರೊಂದಿಗೆ ಚರ್ಚಿಸಿದ್ದೀರ ಎಂದು ಪ್ರಶ್ನಿಸಿದರು. ಆ ಮೂಲಕ ಇಬ್ಬರ ನಡುವಿನ ವಾದ ಆರಂಭವಾಯಿತು. ಇದರಿಂದಾಗಿ ನಾವೆಲ್ಲವೂ ಬೇಸರಗೊಂಡಿದ್ದೇವೆ ಎಂದು ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬಂಧನಕ್ಕೊಳಗಾಗಿದ್ದ ಯುಪಿ ಡಾಕ್ಟರ್ ಕಫೀಲ್ ಖಾನ್ ಮಧ್ಯರಾತ್ರಿ ಜೈಲಿನಿಂದ ಬಿಡುಗಡೆ..

ಸಭೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈದ್ಯರು ಮತ್ತು ಜಿಲ್ಲಾಧಿಕಾರಿಯವರ ನಡುವಿನ ಚರ್ಚೆಯ ವಿಡಿಯೋ ವೈರಲ್‌ ಆಗಿದೆ.

ಡಾ.ಸೋಮ್ಲಾ ನಾಯಕ್ ಅವರು, ಕಳೆಸ್ಥರದಲ್ಲಿ ವೈದ್ಯರು ಉತ್ತಮವಾಗಿ ಸೇವೆ ಸಲ್ಲಿಸಿದರೂ, ನಾನಾ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದರೂ, ಅವರ ಪ್ರಯತ್ನಗಳನ್ನು ಗುರುತಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ,  “ಏನು ಅಸಂಬದ್ಧ. ಈ ವೈದ್ಯ ಎಲ್ಲಿಂದ ಬಂದಿದ್ದಾರೆ? ಅವನನ್ನು ಕರೆದುಕೊಂಡು ಹೋಗಿ, ಅರೆಸ್ಟ್‌ ಮಾಡಿ. ನನ್ನನ್ನು ಕೇಳಲು ಅವರಿಗೆ ಎಷ್ಟು ಧೈರ್ಯ – ನಾನು ಯಾರು? ವಿಪತ್ತು ನಿರ್ವಹಣಾ ವಿಭಾಗಗಳ ಅಡಿಯಲ್ಲಿ ಅವರನ್ನು ಬಂಧಿಸಿ. ಅವನನ್ನು ಕರೆದುಕೊಂಡು ಹೋಗಿ” ಎಂದು ಕಿರುಚಾಡಿದ್ದಾರೆ. ಅವರ ಆವೇಶದಿಂದಾಗಿ ವೈದ್ಯರು ತಮ್ಮ ಫೈಲ್‌ಗಳನ್ನು ತೆಗೆದುಕೊಂಡು ಸಭಾಂಗಣದಿಂದ ಹೊರ ನಡೆದಿದ್ದಾರೆ.

Andhra doctor arrested for arguing with Collector Samuel Anand Kumar,  released later - IBTimes India

ಡಾ.ಸೋಮ್ಲಾ ನಾಯಕ್ ಅವರನ್ನು ಅಮಾನತುಗೊಳಿಸುವಂತೆ ಡಿಎಂಹೆಚ್ಒ ಡಾ.ಜೆಜೆ ಯಾಸ್ಮಿನ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದು, ಅವರನ್ನು ಬಂಧಿಸುವಂತೆ ನಸಾರೋಪೇಟ್‌ ಡಿಎಸ್‌ಪಿ ವೀರಾ ರೆಡ್ಡಿ ಅವರಿಗೆ ಹೇಳಿದ್ದಾರೆ. ಪೊಲೀಸ್‌ ಅಧಿಕಾರಿಗಳು ವೈದ್ಯರನ್ನು ಬಂಧಿಸಿದ್ದು, ನಂತರ ಬಿಡುಗಡೆ ಮಾಡಿದ್ದಾರೆ.

ಡಾ. ಸೋಮ್ಲಾ ನಾಯಕ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಕಚೇರಿಯಿಂದ ಆಧೀಕೃತ ಸೂಚನೆ ಬಂದಿಲ್ಲ. ಹಾಗಾಗಿ ಅವರ ವಿರುದ್ಧ ಯಾವ ರೀತಿಯಲ್ಲೂ ಕ್ರಮ ಕೈಗೊಂಡಿಲ್ಲ ಎಂದು ಗುಂಟೂರು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿರೋಧ ಪಕ್ಷಗಳು ಸರ್ಕಾರವನ್ನು ತೀವ್ರವಾಗಿ ಟೀಕಿಸಿವೆ.  ಟಿಡಿಪಿಯ ಎಂಎಲ್‌ಸಿ ನಾರಾ ಲೋಕೇಶ್‌ ಅವರು ವಿಡಿಯೋವನ್ನು ಟ್ವೀಟ್‌ ಮಾಡಿದ್ದು, ಇದು ಜಗಮ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಬುಡಕಟ್ಟು ಅಧಿಕಾರಿ ಮೇಲೆ ನಡೆಸಿರುವ ದೌರ್ಜನ್ಯ. ಆಸ್ಪತ್ರೆಗೆ ಕನಿಷ್ಟ ಸೌಲಭ್ಯಗಳನ್ನೂ ಒದಗಿಸದೆ ಕೊರೊನಾ ಹೆಚ್ಚಳಕ್ಕೆ ವೈದ್ಯರನ್ನು ದೂಷಿಸಲಾಗುತ್ತಿದೆ ಎಂದು ಪ್ರಶ್ನಿಸಿರುವ ಡಾ, ಸೋಮ್ಲಾ ನಾಯಕ್  ಅವರನ್ನು ಬಂಧಿಸಲಾಗಿದೆ. ಅವರ ಬಂಧನವನ್ನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.

ಅಲ್ಲದೆ, ಆಂಧ್ರಪ್ರದೇಶ ಸರ್ಕಾರಿ ವೈದ್ಯರ ತಂಡವು ಘಟನೆಯನ್ನು ಖಂಡಿಸಿದ್ದು, ಬಂಧನ ಆದೇಶವನ್ನು ಹಿಂತೆಗೆದುಕೊಳ್ಳದಿದ್ದರೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.  ಘಟನೆಯ ಬಗ್ಗೆ ಗುಂಟೂರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಸಿದರೂ, ಅವರು ಕರೆ ಸ್ವೀಕರಿಸಿಲ್ಲ ಎಂದು ದಿ ನ್ಯೂಸ್‌ ಮಿನಿಟ್ ವರದಿ ಮಾಡಿದೆ.


ಇದನ್ನೂ ಓದಿ: ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ: ಭಾರತ್ ಸೇನಾ ಸಂಘದ ಕಾರ್ಯಕರ್ತನ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights