ಭಾರತದಲ್ಲಿ ಹೆಚ್ಚಾದ ಕೊರೊನಾ ಹಾವಳಿ : 47 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – 94,372 ಹೊಸ ಕೇಸ್!

ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಂಕ್ಯೆ ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಳದಲ್ಲಿ ಅಮೇರಿಕಾ ನಂತರ ಸ್ಥಾನದಲ್ಲಿ ಭಾರತ ಲಗ್ಗೆ ಇಟ್ಟಿದ್ದು ಈವರೆಗೆ 47 ಲಕ್ಷ ಜನರಿಗೆ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 94,372 ಹೊಸ ಪ್ರಕರಣಗಳು ದಾಖಲಾಗಿವೆ.

ಒಂದೇ ದಿನದ 94,372 ಪ್ರಕರಣಗಳು ಭಾರತದ ಕೊರೋನವೈರಸ್ ಸಂಖ್ಯೆಯನ್ನು 47,54,356 ಕ್ಕೆ ತಳ್ಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. 24 ಗಂಟೆಗಳಲ್ಲಿ 1,114 ಹೆಚ್ಚಿನ ಸಾವುನೋವುಗಳೊಂದಿಗೆ ದೇಶದಲ್ಲಿ ಈವರೆಗಿನ ಸಾವಿನ ಸಂಖ್ಯೆ 78,586 ಕ್ಕೆ ಏರಿದೆ.

ದೇಶದಲ್ಲಿ 37,02,595 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸಾಂಕ್ರಾಮಿಕ ರೋಗದಿಂದ ಮಹಾರಾಷ್ಟ್ರ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿ ಉಳಿದಿದೆ.  ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಮೂರು ರಾಜ್ಯಗಳು ಹೆಚ್ಚು ಕೊರೊನಾ ಬಾದಿತ ರಾಜ್ಯಗಳಾಗಿವೆ. ಅಮೇರಿಕಾದ ನಂತರ ದೇಶವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.

Leave a Reply

Your email address will not be published. Required fields are marked *