ಇಂಡೋನೇಷ್ಯಾದ ಅಭಿಮಾನಿಗಳಿಂದ ಮರುಸೃಷ್ಟಿಯಾದ ‘ಬೋಲೆ ಚುಡಿಯನ್..’ ಹಾಡು : ವೀಡಿಯೋ ವೈರಲ್!

ಅಂತರ್ಜಾಲದಲ್ಲಿ ಹಲವಾರು ವೀಡಿಯೊಗಳಿವೆ. ಅಲ್ಲಿ ಜನರು ಬಾಲಿವುಡ್ ಚಲನಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸುತ್ತಾರೆ ಮತ್ತು ಒಂದೊಂಮ್ಮೆ ಇವು ವೈರಲ್ ಆಗುತ್ತವೆ. ಇಂಡೋನೇಷ್ಯಾದ ಬಾಲಿವುಡ್ ಅಭಿಮಾನಿಗಳ ಗುಂಪೊಂದು ‘ಕಭಿ ಖುಷಿ ಕಭಿ ಘಾಮ್’ ಚಿತ್ರದ ಹಿಟ್ ಹಾಡನ್ನು ಮರುಸೃಷ್ಟಿಸಿದೆ. ಈ ಮೂಲಕ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ವೀಡಿಯೊವನ್ನು ಇಂಡೋನೇಷ್ಯಾದ ನರ್ತಕಿ, ಯೂಟ್ಯೂಬರ್ ಮತ್ತು ಬಾಲಿವುಡ್‌ನ ಅಪಾರ ಅಭಿಮಾನಿ ‘ವಿನಾ ಫ್ಯಾನ್’ ಹಂಚಿಕೊಂಡಿದ್ದಾರೆ. ವಿನಾ ಫ್ಯಾನ್ ಮತ್ತು ಅವರ ಗುಂಪು ತಮ್ಮ ಹೊಸ ವೀಡಿಯೊದಲ್ಲಿ ಕರಣ್ ಜೋಹರ್ ಚಿತ್ರದ ಹಿಟ್ ಸಾಂಗ್ ‘ಬೋಲೆ ಚುಡಿಯನ್’ ಅನ್ನು ಮರುಸೃಷ್ಟಿಸಿದ್ದಾರೆ. ಈ ಹಾಡು ಒಂದೇ, ಇದರಲ್ಲಿರುವ ಡ್ಯಾನ್ಸ ಕೂಡ ಒಂದೇ. ಸೆಟ್, ಹೇರ್ ಸ್ಟೈಲ್ ಹಾಗೂ ಉಡುಪುಗಳು ಕೂಡ ಒಂದೇ ರೀತಿಯಾಗಿವೆ. ಆದರೆ ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುವು ಮುಖಗಳು ಮಾತ್ರ ಬೇರೆ ಬೇರೆಯಾಗಿವೆ.

ವೀಡಿಯೊದಲ್ಲಿ ಕರೀನಾ ಕಪೂರ್ ಖಾನ್ ಪಾತ್ರವನ್ನು ವಿನಾ ನಿರ್ವಹಿಸಿದ್ದಾರೆ. ಅವರ ಗುಂಪಿನ ಸದಸ್ಯರು ಇತರ ತಾರೆಯರ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ರಿಮೇಕ್ ಆವೃತ್ತಿಯು ಪ್ರತಿ ಪಾತ್ರ ಮೂಲ ವೀಡಿಯೊದಿಂದ ಶಾಟ್-ಬೈ-ಶಾಟ್ ದೃಶ್ಯಗಳನ್ನು ಮರುಸೃಷ್ಟಿಸುತ್ತಿದೆ. ವೀಡಿಯೊ ನಿಜವಾಗಿಯೂ ಶ್ಲಾಘನೀಯ ಎಂದು ನಾವು ಹೇಳಬೇಕಾಗಿದೆ.

ವಿಡಿಯೋ ನೋಡಿ:

ಈ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ಯೂಟ್ಯೂಬ್‌ನಲ್ಲಿ 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕರಣ್ ಜೋಹರ್ ಮತ್ತು ಚಿತ್ರದ ತಾರೆಯರಾದ ಶಾರುಖ್ ಖಾನ್, ಕಾಜೋಲ್ ಮತ್ತು ಹೃತಿಕ್ ರೋಶನ್ ಅವರನ್ನು ಜನರು ಟ್ಯಾಗ್  ಮಾಡುವುದರೊಂದಿಗೆ ಇದನ್ನು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ನೆಟಿಜನ್‌ಗಳು ವೀಡಿಯೊವನ್ನು ಇಷ್ಟಪಟ್ಟು ಸೃಷ್ಟಿಕರ್ತರ ಪ್ರತಿಭೆಯನ್ನು ಮೆಚ್ಚಿದ್ದಾರೆ.

ಕೆಲವು ಪ್ರತಿಕ್ರಿಯೆಗಳನ್ನು ನೋಡಿ:

ವೀಡಿಯೊವು 111 ಕೆ ಗಿಂತ ಹೆಚ್ಚು ಲೈಕ್‌ಗಳನ್ನು ಹೊಂದಿದೆ ಮತ್ತು 22 ಕೆ ಕಾಮೆಂಟ್‌ಗಳನ್ನು ಹೊಂದಿದೆ.

ವಿನಾ ಫ್ಯಾನ್ ಬಾಲಿವುಡ್ ಹಾಡನ್ನು ಮರುಸೃಷ್ಟಿಸುವುದು ಇದೇ ಮೊದಲಲ್ಲ. ಹಿಂದೆ ಅವರು ಕಮ್ಲಿ ತುಮ್ಹೆ ಜೋ ಮೈನೆ ದೇಖಾ, ಜಾರಾ ಸಾ ಜೂಮ್ ಲೂನ್ ಮೇನ್, ಚೋರಿ ಚೋರಿ ಚುಪ್ಕೆ ಚುಪ್ಕೆ ಮತ್ತು ಇನ್ನೂ ಅನೇಕ ಹಾಡುಗಳ ನೃತ್ಯ ಸಹ ಮಾಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights