IPL ಹಂಗಾಮಾ : ನಾವೇ ಈ ಸಲ ಕಪ್‌ ಗೆಲ್ಲೋದು ಯಾಕೆ ಅನ್ನೋದಕ್ಕೆ ಇಲ್ಲಿದೆ ಉತ್ತರ…

ಈ ಬಾರಿಯ IPL ನಲ್ಲಿ ಹೇಗಿದೆ ನಮ್ಮ ಆರ್‌ಸಿಬಿ ತಯಾರಿ. ಕಪ್‌ ಗೆಲ್ಲೋಕೆ ಯಾವೆಲ್ಲಾ ತಯಾರಿ ಮಾಡಿಕೊಂಡಿದೆ. ನಾವೇ ಈ ಸಲ ಕಪ್‌ ಗೆಲ್ಲೋದು ಯಾಕೆ ಅನ್ನೋದಕ್ಕೆ ಇಲ್ಲಿದೆ ಉತ್ತರ…

2020 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ವೇಳೆ ಯಾವ್ಯಾವ ತಂಡಗಳು ಬಲಿಷ್ಠ ಆಗಿವೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಮುಂಚೆಯಿಂದಲೂ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆದರೆ, ಈ ಬಾರಿ ಬಲಿಷ್ಠವಾಗಿ ಕಾಣುತ್ತಿರುವುದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. 13ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿ ಮಾಡಿತ್ತು. ಹೀಗೆ ವೀಕ್ ಆಗಿದ್ದ ಜಾಗವನ್ನು ಫಿಲ್ಅಪ್ ಮಾಡಿದೆ. ಕಳೆದ 12 ಸೀಸನ್’ಗಿಂತಲೂ ಈ ಬಾರಿ ಆರ್​ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ.

13ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆಲ್ಲುವ ಹಠಕ್ಕೆ ಬಿದ್ದಿರುವ ನಾಯಕ ವಿರಾಟ್ ಕೊಹ್ಲಿ ಪಡೆ, ಉತ್ತಮ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಬಾರಿ ಆರ್​ಸಿಬಿ ವೀಕ್ನೆಸ್ ಬೌಲಿಂಗ್ ಆಗಿತ್ತು. ಇದಕ್ಕಾಗಿ ಈ ಸಲದ ಬಿಡ್​ನಲ್ಲಿ ಡೇಲ್ ಸ್ಟೈನ್, ಕೇನ್ ರಿಚರ್ಡಸನ್, ಕ್ರಿಸ್ ಮೊರೀಸ್, ಇಸುರು ಉದಾನ ಹೀಗೆ ಪ್ರಮುಖ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಈಗ ಆರ್​ಸಿಬಿ ಇನ್ನಷ್ಟು ಸ್ಟ್ರಾಂಗ್ ಆಗಿದೆ. ಕಳೆದ 12 ಸೀಸನ್​ನಲ್ಲಿ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಸಿಕ್ಕಿಲ್ಲ.ಈ ಹಿಂದೆ ಫೈನಲ್ ಪ್ರವೇಶಿಸಿದರೂ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಈ ಸಲ ಸ್ಟಾರ್ ಆಟಗಾರರು ಆರ್​ಸಿಬಿ ತಂಡದಲ್ಲಿದ್ದಾರೆ. ಈ ಬಾರಿಯಾದರೂ ಬೆಂಗಳೂರಿಗೆ ಐಪಿಎಲ್ ಕಪ್ ಒಲಿಯುತ್ತಾ ಎಂಬುದು ಕಾದು ನೋಡಬೇಕಿದೆ.

ಹಾಗಾದ್ರೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಉತ್ತಮ ಪ್ರದರ್ಶನಕ್ಕೆ ಯಾರೆಲ್ಲಾ ಕಾರಣರಾಗಲಿದ್ದಾರೆ, ನೋಡೋಣ ಬನ್ನಿ.ಕಳೆದ ಕೆಲವು ಸೀಸನ್​ನಿಂದ ಆರ್​ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿರುವ ಪಾರ್ಥಿವ್ ಪಟೇಲ್ ಅವರು ತಮ್ಮ ಜವಾಬ್ದಾರಿಯನ್ನು ಈ ಬಾರಿಯ ನಿಭಾಯಿಸಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ತಮ್ಮ ಫೇವರಿಟ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. 4ನೇ ಕ್ರಮಾಂಕ ಮಿ. 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಅವರಿಗೆ ಹೇಳಿ ಮಾಡಿಸಿದಂತಿದೆ.

ಆಲ್ರೌಂಡರ್ ಶಿವಂ ದುಬೆ ಮೇಲೆ ಈ ಸಲ ಬಾರೀ ನಿರೀಕ್ಷಿಯಿದ್ದು, 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆರ್​ಸಿಬಿ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಖರೀದಿಸಿದ್ದ ಕ್ರಿಸ್ ಮೊರೀಸ್ ಪಾತ್ರವೂ ಪ್ರತಿ ಪಂದ್ಯದಲ್ಲಿ ಮುಖ್ಯವಾಗಲಿದೆ. ತಂಡದಲ್ಲಿ ಸ್ಪಿನ್ನರ್ ಆಗಿ ಯಜುವೇಂದ್ರ ಚಹಾಲ್ ಹಾಗೂ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಹೆಚ್ಚಿದೆ. ಬೌಲರ್​ಗಳ ಪೈಕಿ ಡೇಲ್ ಸ್ಟೈನ್ ಅಥವಾ ಕೇನ್ ರಿಚರ್ಡಸನ್ ಆಯ್ಕೆ ಒಂದುಕಡೆಯಲ್ಲಿದ್ದರೆ, ನವ್​ದೀಪ್​ ಸೈನಿ ಹಾಗೂ ಉಮೇಶ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ.

Leave a Reply

Your email address will not be published. Required fields are marked *