IPL 2020 ಪಂದ್ಯಗಳನ್ನು ಯಾವ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು? ಕನ್ನಡ ಚಾನೆಲ್‌ನಲ್ಲೂ ಪ್ರಸಾರ! ಡೀಟೇಲ್ಸ್‌

2020ರ ಐಪಿಎಲ್‌ ಟೂರ್ನಿ ಇನ್ನು ನಾಲ್ಕು ದಿನಗಳಲ್ಲಿ (ಸೆ9ರಿಂದ) ಆರಂಭವಾಗಿಲಿದೆ. ಕ್ರಿಕೆಟ್‌ ಪ್ರೇಮಿಗಳು ಐಪಿಎಲ್‌ ಆರಂಭಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಕಪ್‌ ನಮ್ದೇ ಎಂದು ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳು  ಆರ್‌ಸಿಬಿಯ ಗೆಲುವಿಗಾಗಿ ಉತ್ಸಾಹದಿಂದ ಕಾಯುತ್ತಿದ್ದಾರೆ.

ಈ ಮಧ್ಯೆ, ಐಪಿಎಲ್‌ ಲೈವ್‌ ಯಾವೆಲ್ಲಾ ಚಾನೆಲ್‌ಗಳಲ್ಲಿ ಬರಬಹುದು ಎಂಬುದು ಕೂಡ ಕ್ರಿಕೆಟ್‌ ಪ್ರೇಮಿಗಳ ಪ್ರಶ್ನೆಯಾಗಿದೆ. ಐಪಿಎಲ್ ಟೂರ್ನಿಯ ನೇರಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ 5 ವರ್ಷಗಳ ಕಾಲಾವಧಿಗಾಗಿ ಬರೋಬ್ಬರಿ 16,347.5 ಕೋಟಿ ರೂಪಾಯಿಗೆ ಪಡೆದುಕೊಂಡಿರುವುದು ತಿಳಿದಿರುವ ವಿಚಾರ.

ಐಪಿಎಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ತನ್ನ ಹಲವು ಚಾನಲ್‌ಗಳಲ್ಲಿ ನೇರಪ್ರಸಾರ ಮಾಡಲಿದೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸಹಿತ ಒಟ್ಟು 8 ಭಾಷೆಗಳಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಕ ವಿವರಣೆಯನ್ನು ನೀಡಲು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಸಿದ್ಧತೆಗಳನ್ನು ನಡೆಸಿಕೊಂಡಿದೆ.

ಅಲ್ಲದೆ ತನ್ನ ನೆಟ್‌ವರ್ಕ್‌ನ ಹಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನಲ್‌ಗಳಲ್ಲೂ ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ. ಪ್ರಮುಖವಾಗಿ ಕನ್ನಡದಲ್ಲಿ ವೀಕ್ಷಕವಿವರಣೆಗಳನ್ನು ನೀಡಲು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಈಗಾಗಲೆ ‘ಸ್ಟಾರ್ ಸ್ಪೋರ್ಟ್ಸ್ ಕನ್ನಡ’ ಎಂಬ ಚಾನಲ್ ಆರಂಭಿಸಿದೆ. ಇದರೊಂದಿಗೆ ‘ಸ್ಟಾರ್ ಸುವರ್ಣ’ದ ಎಸ್‌ಡಿ ಮತ್ತು ಎಚ್‌ಡಿ ಚಾನಲ್‌ಗಳಲ್ಲೂ ಪ್ರತಿ ಭಾನುವಾರದ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಲ್ಲದೆ, ಕನ್ನಡದಲ್ಲಿ ಕಾಮೆಂಟರಿಯನ್ನೂ ಕೇಳಬಹುದಾಗಿದೆ.

ಐಪಿಎಲ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ:

ಕನ್ನಡ: ಸ್ಟಾರ್ ಸ್ಪೋರ್ಟ್ಸ್ ಕನ್ನಡ (ಪ್ರತಿದಿನ), ಸ್ಟಾರ್ ಸುವರ್ಣ-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ತಮಿಳು: ಸ್ಟಾರ್ ಸ್ಪೋರ್ಟ್ಸ್ ತಮಿಳ್ (ಪ್ರತಿದಿನ), ವಿಜಯ್ ಸೂಪರ್-ಎಸ್‌ಡಿ (ಪ್ರತಿ ಭಾನುವಾರ).

ತೆಲುಗು: ಸ್ಟಾರ್ ಸ್ಪೋರ್ಟ್ಸ್ ತೆಲುಗು (ಪ್ರತಿದಿನ), ಮಾ ಮೂವಿಸ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ಮಲಯಾಳಂ: ಏಷ್ಯಾನೆಟ್ ಪ್ಲಸ್-ಎಸ್‌ಡಿ (ಪ್ರತಿ ಭಾನುವಾರ).

ಇಂಗ್ಲಿಷ್: ಸ್ಟಾರ್ ಸ್ಪೋರ್ಟ್ಸ್ 1 (ಎಸ್‌ಡಿ, ಎಚ್‌ಡಿ), ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ (ಎಸ್‌ಡಿ, ಎಚ್‌ಡಿ).

ಬೆಂಗಾಲಿ: ಸ್ಟಾರ್ ಸ್ಪೋರ್ಟ್ಸ್ ಬಾಂಗ್ಲಾ (ಪ್ರತಿದಿನ), ಜಲ್ಶಾ ಮೂವೀಸ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ಮರಾಠಿ: ಸ್ಟಾರ್ ಪ್ರವಾಹ್-ಎಸ್‌ಡಿ, ಎಚ್‌ಡಿ (ಪ್ರತಿ ಭಾನುವಾರ).

ಹಿಂದಿ: ಸ್ಟಾರ್ ಸ್ಪೋರ್ಟ್ಸ್ ಹಿಂದಿ (ಎಚ್‌ಡಿ, ಎಸ್‌ಡಿ), ಸ್ಟಾರ್ ಸ್ಪೋರ್ಟ್ಸ್ ಫಸ್ಟ್​​.

ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್.


ಇದನ್ನೂ ಓದಿ: IPL ಹಂಗಾಮಾ : ನಾವೇ ಈ ಸಲ ಕಪ್‌ ಗೆಲ್ಲೋದು ಯಾಕೆ ಅನ್ನೋದಕ್ಕೆ ಇಲ್ಲಿದೆ ಉತ್ತರ…

Leave a Reply

Your email address will not be published. Required fields are marked *