ಡ್ರೈವಿಂಗ್ ಲೈಸನ್ಸ್ ಪಡೆಯುವುದು ಮತ್ತಷ್ಟು ಸುಲಭ; ಏನು ಮಾಡುಬೇಕು ಗೊತ್ತೇ?

ಕೊರೊನಾ ಸೋಂಕಿನ ಕಾರಣದಿಂದಾಗಿ ಹೆಚ್ಚು ಜನರು ಸೇರಬಹುದಾದ ಕೆಲಸಗಳಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೆ, ಹಲವು ಕೆಲಸಗಳಿಗಾಗಿ ಜನರು ಕಚೇರಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕೆಲವು ಕೆಲಸಗಳನ್ನು ಸುಲಭಗೊಳಿಸುವ ಉದ್ದೇಶದಿಂದ ವಿವಿಧ ಇಲಾಖೆಗಳು ಕೆಲವು ಸೌಲಭ್ಯಗಳನ್ನು ಒದಗಿಸುತ್ತಿವೆ.

ಅದೇ ರೀತಿಯಲ್ಲಿ ಆರ್‌ಟಿಓ ಕೂಡ ವಿವಿಧ ಸೌಲಭ್ಯಗಳನ್ನು ಜಾರಿ ಮಾಡಿದೆ. ಹೊಸದಾಗಿ ಡ್ರೈವಿಂಗ್‌ ಲೈಸನ್ಸ್ ಮಾಡಿಸಿಕೊಳ್ಳಬೇಕಾಗಿರುವವರು ಅರ್ಜಿ ಸಲ್ಲಿಸಲು ಆನ್‌ಲೈನ್ ಸೌಲಭ್ಯ ಕಲ್ಪಸಿದೆ. ಡ್ರೈವಿಂಗ್‌ ಲೈಸೆನ್ಸ್‌ಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಮತ್ತು ಚಾಲನಾ ಪರೀಕ್ಷೆಗಾಗಿ ಮಾತ್ರ ಆರ್‌ಟಿಒ ಕಚೇರಿಗೆ ಹೋಗಬೇಕು. ಆನ್‌ಲೈನ್‌ನಲ್ಲಿ ಕೇಳುವ ದಾಖಲೆಗಳನ್ನು ಒದಗಿಸಿದರೆ ಸಾಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಾಲನ ಪರವಾನಿಗೆಗೆ ಅಂತಲೇ ಸರ್ಕಾರದ ಅಧಿಕೃತ ವೆಬ್‌ಸೈಟ್ https://sarathi.parivahan.gov.in/ ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ವೈಯಕ್ತಿಕ ದಾಖಲೆ ಹಾಗೂ ಡ್ರೈವಿಂಗ್ ಲೈಸನ್ಸ್‌ಗೆ ಬೇಕಾಗುವ ದಾಖಲೆಗಳು ಹಾಗು ಲೈಸನ್ಸ್ ಶುಲ್ಕವನ್ನು ನೀಡಿ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಪರೀಕ್ಷಾ ದಿನಾಂಕವನ್ನು ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದ ನಂತರ ಡ್ರೈವಿಂಗ್ ಲೈಸೆನ್ಸ್‌ ಸಿಗಲಿದೆ.


ಇದನ್ನೂ ಓದಿ: ಜೋಕ್‌ಗಳಿಗೆ ಪ್ರೇರಣೆ ನೀಡಿದ ಜನರು ಕಾಯ್ದುಕೊಂಡ ಸಾಮಾಜಿಕ ದೂರ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights