ಡ್ರಗ್ಸ್‌ ಮಾಫಿಯಾ: ಐಂದ್ರಿತಾ, ದಿಗಂತ್‌ಗೂ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್‌!

ಸ್ಯಾಂಡಲ್ವುಡ್ ಡ್ರಗ್ಸ್ ಪುರಾಣ ಇನ್ನಷ್ಟು ವಿಸ್ತಾರಗೊಳ್ಳುತ್ತಿದ್ದು, ಕನ್ನಡದ ಇಬ್ಬರು ಹೆಸರಾಂತ ಕಲಾವಿದರನ್ನು ವಿಚಾರಣೆಗೆ ಕರೆಯಲಾಗಿದೆ.

ಮಾದಕ ಜಾಲದ ವಿಸ್ತೃತ ತನಿಖೆ ಕೈಗೊಂಡಿರುವ ಅಪರಾಧ ವಿಭಾಗದ ಪೊಲಿಸರು ಕನ್ನಡ ಚಿತ್ರರಂಗದ ತಾರೆಗಳಾಗಿರುವ ಜೋಡಿ ದಿಗಂತ್ ಮತ್ತು ಐಂದ್ರಿತಾ ಅವರನ್ನು ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಐಂದ್ರಿತಾ ದಂಪತಿಯನ್ನು ಬುಧವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕರೆಯಲಾಗಿದೆ.

ಮಾದಕ ಜಾಲದಲ್ಲಿ ಸಕ್ರಿಯನಾಗಿರುವ ವ್ಯಕ್ತಿ ಜೊತೆ ಐಂದ್ರಿತಾ ಮೋಜುಕೂಟಗಳಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ತಾನು ಚಿತ್ರವೊಂದರ ಪ್ರಚಾರಕ್ಕೆಂದು ಕೊಲಂಬೋಗೆ ತೆರಳಿದ್ದಾಗ ಅಲ್ಲಿ ಈ ವ್ಯಕ್ತಿಯೂ ಇದ್ದಿರಬಹುದು. ನನಗೂ ಆತನಿಗೂ ಯಾವುದೇ ಪರಿಚಯವಿಲ್ಲ ಎಂದು ಐಂದ್ರಿತಾ ಹೇಳಿದ್ದಾರೆ.

ಈ ಮಧ್ಯೆ ಈಗಾಗಲೇ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ ವಿಚಾರಣೆ ಮುಂದುವರಿದಿದೆ. ರಾಗಿಣಿ ನ್ಯಾಯಾಂಗ ಬಂಧನದಲ್ಲಿದ್ದರೇ ಸಂಜನಾ ಪೊಲೀಸರ ವಶದಲ್ಲಿದ್ದಾರೆ.


ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ : ವಿವೇಕ್ ಒಬೆರಾಯ್ ಹೆಂಡತಿಯ ಸೋದರ ಆದಿತ್ಯ ಆಳ್ವಾ ಮನೆ ಮೇಲೆ ಪೊಲೀಸರು ದಾಳಿ!

Leave a Reply

Your email address will not be published. Required fields are marked *