ಜಮೀರ್ ವಿರುದ್ಧ ಸಾಕ್ಷ್ಯ ಇದ್ದರೆ ಅವರನ್ನು ಗಲ್ಲಿಗೇರಿಸಿ: ಸಿದ್ದರಾಮಯ್ಯ

ಡ್ರಗ್ಸ್‌ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.  ದೊಡ್ಡವರು, ಸಣ್ಣವರು ಎನ್ನದೇ ಯಾರೇ ಇದ್ದರೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಡ್ರಗ್ಸ್‌ ಜಾಲದಲ್ಲಿ ಜಮೀರ್ ಅಹ್ಮದ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದು, ಸಂಬರಗಿ ಹೇಳಿದ ಮಾತ್ರಕ್ಕೆ ತನಿಖೆ ಮಾಡೋದಲ್ಲ ರಾಜಕೀಯವಾಗಿ ಮುಗಿಸಲು ಯಾರೂ ಯಾರ ಮೇಲೆಯೂ ಆರೋಪ ಮಾಡಬಾರದು. ಜಮೀರ್ ವಿರುದ್ಧ ಸಾಕ್ಷಗಳು ಇದ್ದರೆ ಅವರನ್ನು ಗಲಿಗೇರಿಸಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಅವರೇ ಹೇಳಿದ್ದಾರೆ. ಸಾಕ್ಷ್ಯ ಇದ್ದರೆ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಮೀರ್ ಪರವಾಗಿ ಮಾತನಾಡುತ್ತಿರುವ ಸಿದ್ದರಾಮಯ್ಯ, ಜೀಮೀರ್ ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದು, ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಳ್ಳಿತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: ಮುಖ್ಯಮಂತ್ರಿ ಬಿಎಸ್‌ವೈ ಖುರ್ಚಿಗಿಲ್ಲ ಸಂಚಕಾರ: ಆರ್. ಅಶೋಕ್‌

Leave a Reply

Your email address will not be published. Required fields are marked *