fact Check: ಹೆಣ್ಣು ಮಕ್ಕಳಿಗೆ ತಿಂಗಳಿಗೆ 2,000 ಕೊಡುವ ಪ್ರಧಾನಿಮಂತ್ರಿ ಯೋಜನೆ ಸುಳ್ಳು

‘ಪ್ರಧಾನಮಂತ್ರಿ ಕನ್ಯಾ ಆಶಿರ್ವಾದ ಯೋಜನೆ’ ಎಂಬ ಹೆಸರಿನಲ್ಲಿ, ದೇಶದ ಪ್ರತಿ ಹೆಣ್ಣು ಮಕ್ಕಳಿಗೂ ತಿಂಗಳಿಗೆ 2000 ರೂ ಸಹಾಯಧನ ನೀಡಲು ಯೋಜನೆಯನ್ನು ಭಾರತ ಸರ್ಕಾರವು ಆರಂಭಿಸಿದೆ ಎಂದು ಹೇಳುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ‘ಪ್ರಧಾನಮಂತ್ರಿ ಕನ್ಯಾ ಆಶಿರ್ವಾದ ಯೋಜನೆ’ ಅಡಿಯಲ್ಲಿ ಭಾರತ ಸರ್ಕಾರವು ದೇಶದ ಪ್ರತಿ ಬಾಲಕಿಗೆ 2000 ರೂ. ವಿತರಿಸುತ್ತಿದೆ.

ಸತ್ಯ: ಭಾರತ ಸರ್ಕಾರದ ಯೋಜನೆಗಳಲ್ಲಿ ‘ಪ್ರಧಾನಮಂತ್ರಿ ಕನ್ಯಾ ಆಶಿರ್ವಾದ ಯೋಜನೆ’ ಎಂಬ ಹೆಸರಿನಲ್ಲಿ ಯಾವುದೇ ಯೋಜನೆ ಇಲ್ಲ. ಇಂತಹ ಯೋಜನೆಯ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ(ಪಿಐಬಿ) ಕೂಡ ಇಂತಹ ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಎಲ್ಲಾ ಯೋಜನೆಗಳ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕಾಣಬಹುದು. ಆದರೆ, ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಯಾವುದೇ ವಿಭಾಗದಲ್ಲಿಯೂ ‘ಪಿಎಂ ಕನ್ಯಾ ಆಶಿರ್ವಾದ ಯೋಜನೆ’ ಹೆಸರಿನ ಯೋಜನೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಈ ಯೋಜನೆಯ ಕುರಿತಾದ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ಈ ಎಲ್ಲಾ ಪೋಸ್ಟ್‌ಗಳು ನಕಲಿ ಮತ್ತು ಭಾರತ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೇಶದ ಪ್ರತಿ ಹೆಣ್ಣು ಮಗುವಿಗೆ 2,000 ರೂ. ಸಿಗುತ್ತದೆ ಎಂದು ಹೇಳಲಾಗಿರುವ ‘ಪಿಎಂ ಕನ್ಯಾ ಆಶಿರ್ವಾದ ಯೋಜನೆ’ ಹೆಸರಿನ ನಕಲಿ ಯೋಜನೆಯ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: Fact Check: ಬಾಂಗ್ಲಾದೇಶದ ಮುಸ್ಲಿಮರು ನಡೆಸಿದ ಪ್ರತಿಭಟನೆಯನ್ನು ಪಶ್ಚಿಮ ಬಂಗಾಳದ್ದು ಎಂದು ಹಂಚಿಕೊಳ್ಳಲಾಗಿದೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights