ತಮಿಳು ಮಾಜಿ ಸಿಎಂ ಜಯಲಲಿತ ಆಪ್ತೆ ಶಶಿಕಲಾ ಬಿಡುಗಡೆಗೆ ಡೇಟ್‌ ಫಿಕ್ಸ್‌!

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾ ಅವರ ಶಿಕ್ಷೆಯ ಅವಧಿ 2021ರ ಜನವರಿ 27 ರಂದು ಶಿಕ್ಷೆ ಅವಧಿ ಪೂರ್ಣಗೊಳಿಸಿ ಬಿಡುಗಡೆಯಾಗಲಿದ್ದಾರೆಂದು ತಿಳಿದುಬಂದಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಗೆಳತಿಯಾಗಿರುವ ಶಶಿಕಲಾ, ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಮೂರು ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿರುವ ಶಶಿಕಲಾ, ಸನ್ನಡತೆ ಆಧಾರದ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಗಸ್ಟ್‌ 14ರಂದು ಬಿಡುಗಡೆಯಾಗಬಹುದು ಎಂದು ಹೇಳಲಾಗಿತ್ತು.

ಆದರೆ, ಆ ರೀತಿಯ ಯಾವುದೇ ಅವಕಾಶವನ್ನು ಶಶಿಕಲಾ ಅವರಿಗೆ ನೀಡಲಾಗಿಲ್ಲ. ಹಾಗಾಗಿ  2021ರ ಜ.27ಕ್ಕೆ ಬಿಡುಗಡೆ ಸಾಧ್ಯತೆ ಇರುವುದಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಸಲ್ಲಿಸಿದ್ದ ಅರ್ಜಿಗೆ ಜೈಲಿನ ಮುಖ್ಯ ಅಧೀಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ.

ಇದರೊಂದಿಗೆ ಜೈಲು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಬಿಡುಗಡೆಯಾಗಲಿದ್ದಾರೆಂಬುವ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.

2021ರ ಜ.27ಕ್ಕೆ ಶಶಿಕಲಾ ಸಜಾ ಅವಧಿ ಮುಗಿಯಲಿದೆ. ಆದರೆ, ಕೋರ್ಟ್‌ ತೀರ್ಪಿನಂತೆ 10 ಕೋಟಿ ರೂಪಾಯಿ ದಂಡ ಪಾವತಿಸದಿದ್ದರೆ 2021ರ ಫೆ.27ರವರೆಗೆ ಶಿಕ್ಷೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ತಮಿಳು ಮಾಜಿ ಸಿಎಂ ಜಯಲಲಿತಾ ಆಪ್ತೆ, ಭ್ರಷ್ಟಾಚಾರ ಅಪರಾಧಿ ಶಶಿಕಲಾ ಬಿಡುಗಡೆ ಸಾಧ್ಯತೆ!

Leave a Reply

Your email address will not be published. Required fields are marked *