ಟಾಟಾ ಕಂಪನಿ ಪಾಲಾದ 861.9 ಕೋಟಿ ವೆಚ್ಚದ ಸಂಸತ್ತಿನ ಹೊಸ ಕಟ್ಟಡ ನಿರ್ಮಾಣ ಟೆಂಡರ್‌ !

ಹೊಸ ಸಂಸತ್ ಕಟ್ಟಡ ನಿರ್ಮಾಣ ಟೆಂಡರ್‌ ಟಾಟಾ ಪ್ರಾಜೆಕ್ಟ್‌ ಕಂಪನಿಯ ಪಾಲಾಗೆ ಒಲಿದಿದೆ. ಸಂಸತ್‌ನ ಹೊಸ ಕಟ್ಟಡವನ್ನು ₹ 861.90 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಟಾಟಾ ಕಂಪನಿ ಬಿಡ್‌ ಸಲ್ಲಿಸಿದ್ದು, ಲಾರ್ಸೆನ್ ಮತ್ತು ಟೌಬ್ರೊ ಕಂಪನಿಗಳನ್ನು ಸೋಲಿಸಿ ಟೆಂಡರ್‌ಅನ್ನು ಪಡೆದುಕೊಂಡಿದೆ.

ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಲೋಕೋಪಯೋಗಿ ಇಲಾಖೆ ಇಂದು ಆರ್ಥಿಕ ಬಿಡ್‌ಗಳನ್ನು ತೆರೆದಿದ್ದು, ಟಾಟಾ ಕಂಪನಿಗೆ ಟೆಂಡರ್ ನೀಡಿದೆ.

ಕಟ್ಟಡ ನಿರ್ಮಾಣ ಯೋಜನೆಯು ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಸರ್ಕಾರಿ ನಾಗರಿಕ ಸಂಸ್ಥೆ ₹ 940 ಕೋಟಿ ವೆಚ್ಚವನ್ನು ಅಂದಾಜು ಮಾಡಿತ್ತು. ಅದರಂತೆ ಟಾಟಾ ಕಂಪನಿ 861.9 ಕೋಟಿಗೆ ಟೆಂಡಲ್‌ ಪಡೆದುಕೊಂಡಿದೆ.

ಹೊಸ ಕಟ್ಟಡವನ್ನು ತ್ರಿಕೋನದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ.

ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲಾದ ಪ್ರಸ್ತುತ ಸಂಸತ್ತಿನ ಕಟ್ಟಡವು ವೃತ್ತಾಕಾರವಾಗಿದೆ.


ಇದನ್ನೂ ಓದಿ: ಸಂಸದರ ವೇತನದಲ್ಲಿ 30% ಕಟ್; 2 ವರ್ಷ ಪ್ರದೇಶಾಭಿವೃದ್ಧಿ ಬಂದ್‌: ಲೋಕಸಭೆ ಅನುಮೋದನೆ!

 

Leave a Reply

Your email address will not be published. Required fields are marked *