ವಿಶ್ವದ ಜನಪ್ರಿಯ ಕ್ರಿಕೆಟ್‌ ತಂಡ ಟೀಮ್ ಇಂಡಿಯಾ; ಪಾಪುಲರ್ ಆಟಗಾರ ಯಾರು ಗೊತ್ತೇ?

ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾ ಮತ್ತು ಆಟಗಾರರ ಜನಪ್ರಿಯತೆಗೆ ಮಿತಿಇಲ್ಲ. ಈಗ ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ಅಧ್ಯಯನವೊಂದರ ವರದಿ ಪ್ರಕಾರ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಪ್ರಿಯ ಕ್ರಿಕೆಟ್ ​​ ಆಟಗಾರ. ಟೀಮ್​ ಇಂಡಿಯಾ ಅತ್ಯಂತ ಜನಪ್ರಿಯ ಕ್ರಿಕೆಟ್​​ ತಂಡ ಎಂದು ತಿಳಿದುಬಂದಿದೆ.

ಅಧ್ಯಯನದಲ್ಲಿ ದಾಖಲಾಗಿರುವ ಪ್ರಕಾರ ಕಳೆದ ವರ್ಷ ಜನವರಿಯಿಂದ ಈ ಜೂನ್​ ತನಕ ವಿರಾಟ್​ ಕೊಹ್ಲಿಯನ್ನು ಆನ್ಲೈನ್​ನಲ್ಲಿ ತಿಂಗಳಿಗೆ 16.2 ಲಕ್ಷದಷ್ಟು ಬಾರಿ ಹುಡುಕಲಾಗಿದೆ. ಇದೇ ಅವಧಿಯಲ್ಲಿ ಟೀಮ್​ ಇಂಡಿಯಾವನ್ನು ತಿಂಗಳಿಗೆ  ಸರಾಸರಿ 2.4 ಲಕ್ಷ ಬಾರಿ ಹುಡುಕಲಾಗಿದೆ.

ಟೀಮ್​ ಇಂಡಿಯಾದ ಓಪನರ್​ ರೋಹಿತ್​ ಶರ್ಮಾ, ಮಾಜಿ ನಾಯಕ ಎಂ.ಎಸ್​.ಧೋನಿ, ಹಾರ್ದಿಕ್​ ಪಾಂಡ್ಯಾ, ಸಚಿನ್​ ತೆಂಡುಲ್ಕರ್​ ಮತ್ತು ಶ್ರೇಯಸ್​ ಅಯ್ಯರ್​ ಕೂಡ ಕ್ರಿಕೆಟಿಗರ ವಲಯದಲ್ಲಿ ಅತೀ ಹೆಚ್ಚು ಬಾರಿ ಸರ್ಚ್​ಗೆ ಒಳಗಾಗಿದ್ದಾರೆ. ಟೀಮ್​ ಇಂಡಿಯಾದ ಬಹುತೇಕ ಆಟಗಾರರು ಆನ್​ಲೈನ್​ನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕ್ರಿಕೆಟ್​ ತಂಡಗಳ ಪೈಕಿ ಟೀಮ್​ ಇಂಡಿಯಾಕ್ಕೆ ಸರ್ಚಿಂಗ್​ನಲ್ಲಿ ಅಗ್ರಸ್ಥಾನವಾದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.


ಇದನ್ನೂ ಓದಿ: IPL ಟೂರ್ನಿಗೂ ಮುನ್ನವೇ RCBಯಲ್ಲಿ ಎರಡು ಗುಂಪು! ಕಾರಣವೇನು ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights