ಪ್ರಧಾನಿಗೆ 70 ವರ್ಷ: ಮೋದಿಯ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತಾ?

ಪ್ರಧಾನಿ ನರೇಂದ್ರ ಮೋದಿಯವರು ಇಂದು 70ನೇ ವರ್ಷದ ಹುಟ್ಟು ಹಬ್ಬ ಆಚರಸಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯ ರಾಜಕೀಯ ನಿಮಯದ ಪ್ರಕಾರ ಮೋದಿಯವರ ರಾಜಕೀಯ ಭವಿಷ್ಯವು ಇಲ್ಲಿಗೆ ಮುಗಿಯಲಿದೆಯೇ. ಮೋದಿ ರಾಜಕೀಯದಿಂದ ನಿವೃತ್ತಿ ಹೊಂದಬೇಕಾದ ಸಮಯ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ ಆಂತರಿಕ ನಿಯಮಗಳ ಪ್ರಕಾರ 70 ವ‍ರ್ಷ ತುಂಬಿದವರು ರಾಜಕೀಯದಲ್ಲಿ ಮುಂದುವರೆಯುವಂತಿಲ್ಲ. ಅವರ ರಾಜಕೀಯ ಜೀವನ 70 ವರ್ಷಗಳಿಗೆ ಮುಗಿಯಲಿದೆ. ಮತ್ತಾವುದೇ ಚುನಾವಣೆಗಳಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸುವಂತಿಲ್ಲ ಎಂಬ ನಿಯಮವಿದೆ.

ಹಾಗಾಗಿ, ಪ್ರಧಾನಿ ಮೋದಿಯವರು ಇಂದು  70ನೇ ವಯಸ್ಸಿಗೆ ಕಾಲಿಟ್ಟಿದ್ದು, ಅವರ ರಾಜಕೀಯ ಜೀವನ ಅಂತ್ಯವಾಗುವುದೇ ಎಂಬ ಪ್ರಶ್ನೆ ಉಧ್ಭವಿಸಿದೆ. ಸದ್ಯ ಪ್ರಧಾನಿ ಹುದ್ದೆಯಲ್ಲಿರುವ ಮೋದಿಯವರು 2024ರವರೆಗೆ ಅಧಿಕಾರದಲ್ಲಿರಬಹುದಾದ ಅವಕಾಶವಿದ್ದು, ನಂತರದ ಚುನಾವಣೆಗಳಲ್ಲಿ ಮೋದಿಯವರು ಸ್ಪರ್ಧಿಸಲು ಬಿಜೆಪಿ ನಿಯಮಗಳ ಪ್ರಕಾರ ಅವಕಾಶವಿಲ್ಲ ಎನ್ನಲಾಗುತ್ತಿದೆ.

ಹಾಗಾಗಿ, ಮೋದಿಯವರ 70 ವರ್ಷದ ಹುಟ್ಟು ಹಬ್ಬದ ಸಂಭ್ರಮ ಮೋದಿಯವರ ಬೆಂಬಲಿಗರಿಗೆ ಸಂತೋಷದ ಜೊತೆಗೆ ಬ್ಯಾಡ್‌ ನ್ಯೂಸ್‌ ಕೂಡ ನೀಡಬಹುದಾದ ಸಾಧ್ಯತೆಗಳಿವೆ.

ಅಷ್ಟೇ ಅಲ್ಲದೆ, ಬಿಜೆಪಿಯಲ್ಲಿ ಮೋದಿಯವರ ನಂತರ, ಅವರ ಸ್ಥಾನವನ್ನು ತುಂಬ ಬಹುದಾದವರು ಯಾರು ಎಂಬ ಪ್ರಶ್ನೆಯೂ ಎದುರಾಗಿದೆ.

ಇಂದು ಬಿಜೆಪಿಗರು ಸೇವಾ ಸಪ್ತಾಹವನ್ನು ಆಚರಿಸುತ್ತಿದ್ದು, ದೇಶದ ಯುವಜನರು ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಿಸುತ್ತಿದ್ದಾರೆ.


ಇದನ್ನೂ ಓದಿ: Modi Birthday: ಪಕೋಡ ಮಾರಿ ಎಂದಿದ್ದ ಮೋದಿ ಹುಟ್ಟಿದ ದಿನಕ್ಕೆ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights