ನಟ ಸುಶಾಂತ್‌ ಸಿಂಗ್‌ ನೆನಪಿಗಾಗಿ 1 ಲಕ್ಷ ಗಿಡ ನಡುವ ಅಭಿಯಾನ ಆರಂಭಿಸಿದ್ದಾರೆ ಅಭಿಮಾನಿಗಳು!

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಅವರ ಸಾವು ಹಲವು ವಿವಾದಗಳಿಗೆ ಕಾರಣವಾಗಿದೆ. ಈ ವಿಚಾರವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಪೊಲೀಸರ ವಶದಲ್ಲಿದ್ದಾರೆ. ಈ ನಡುವೆ ಅವರ ನೆನಪಿಗಾಗಿ ಅಭಿಯಾನಿಗಳು ಒಂದು ಲಕ್ಷ ಗಿಡಗಳನ್ನು ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಹಲವರನ್ನು ಗಿಡ-ನೆಡಲು ಉತ್ತೇಜಿಸಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಸಾಮಾಜಿಕ ಜಾಲತಾಣದಲ್ಲಿ #Plants4SSR ಹೆಸರಲ್ಲಿ ಗಿಡ ನೆಡುವ ಅಭಿಯಾನ ನಡೆಸಲಾಗಿದ್ದು, ಸುಶಾಂತ್ ಸಿಂಗ್ ಹೆಸರಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ಅವರ ಅಭಿಮಾನಿಗಳು ನೆಟ್ಟಿದ್ದಾರೆ. ಇದಕ್ಕೆ ನಟನ ಅಭಿಮಾನಿಗಳು ಸೇರಿದಂತೆ, ಸ್ನೇಹಿತರು, ಕುಟುಂಬ ವರ್ಗ, ಮಾಜಿ ಪ್ರೇಯಸಿ ಸೇರಿ ಹಲವರು ಸಾಥ್ ನೀಡಿದ್ದಾರೆ.

ಸುಶಾಂತ್ ಸಿಂಗ್ ಒಂದು ಸಾವಿರ ಮರಗಳನ್ನು ನೆಡುವ ಕನಸು ಕಂಡಿದ್ದರು. ಆದರೆ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಮೂಲಕ ಕನಸನ್ನು ಸಾಕಾರಗೊಳಿಸಿದ ಎಲ್ಲರಿಗೂ ಧನ್ಯವಾದ ಎಂದು ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

https://twitter.com/shwetasinghkirt/status/1305337850427142144?ref_src=twsrc%5Etfw%7Ctwcamp%5Etweetembed%7Ctwterm%5E1305337850427142144%7Ctwgr%5Eshare_3&ref_url=https%3A%2F%2Fnaanugauri.com%2F1-lakh-plants-planting-from-actor-sushant-singh-fans%2F

ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕೂಡ ಸುಶಾಂತ್ ಹೆಸರಲ್ಲಿ ಗಿಡ ನೆಟ್ಟಿದ್ದು, ಅವನ ಕನಸನ್ನು ಈಡೇರಿಸುವ ಮೂಲಕ ಅವನನ್ನು ನೆನಪಿಟ್ಟುಕೊಳ್ಳುವ ದಾರಿ ಇದು ಎಂದಿದ್ದಾರೆ. ಜೊತೆಗೆ ಶ್ವೇತಾ ಸಿಂಗ್ ಕೀರ್ತಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.

https://twitter.com/anky1912/status/1304992116435636225?ref_src=twsrc%5Etfw%7Ctwcamp%5Etweetembed%7Ctwterm%5E1304992116435636225%7Ctwgr%5Eshare_3&ref_url=https%3A%2F%2Fnaanugauri.com%2F1-lakh-plants-planting-from-actor-sushant-singh-fans%2F

ಇವರುಗಳ ಜೊತೆಗೆ ಅನೇಕ ಅಭಿಮಾನಿಗಳು ಸುಶಾಂತ್ ಹೆಸರಲ್ಲಿ ಗಿಡಗಳನ್ನು ನೆಟ್ಟಿದ್ದಾರೆ.

https://twitter.com/DishaSr28503946/status/1306106649686339584?ref_src=twsrc%5Etfw%7Ctwcamp%5Etweetembed%7Ctwterm%5E1306106649686339584%7Ctwgr%5Eshare_3&ref_url=https%3A%2F%2Fnaanugauri.com%2F1-lakh-plants-planting-from-actor-sushant-singh-fans%2F

ನಟರಾದ ಅರ್ಜುನ್ ಬಿಜಲಾನಿ ಮತ್ತು ಮಹೇಶ್ ಶೆಟ್ಟಿ ಕೂಡ #Plants4SSR ಅಭಿಯಾನದಲ್ಲಿ ಭಾಗಿಯಾಗಿದ್ದು, ಗಿಡಗಳನ್ನು ನೆಟ್ಟಿದ್ದಾರೆ.

ಒಂದೆಡೆ ಸುಶಾಂತ್ ಹೆಸರಲ್ಲಿ ಮಾಧ್ಯಮಗಳು, ರಾಜಕೀಯ ಪಕ್ಷಗಳು ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿವೆ. ಆದರೆ ಕೆಲವು ಕಡೆ ಮಾತ್ರ ಅವರ ಹೆಸರಲ್ಲಿ ಕೆಲ ಉತ್ತಮ ಕೆಲಸ ಮಾಡುತ್ತಿರುವುದೇ ಸಮಾಧಾನದ ಸಂಗತಿ.


Read Also: ಬರ, ಪ್ರವಾಹ, ಏರಿಳಿತದ ಬೆಲೆ: ಹಣಕ್ಕಾಗಿ ಗಾಂಜಾ ಬೆಳೆಯುತ್ತಿರುವ ರೈತರು! ದಾಖಲಾದ ಕೇಸ್‌ಗಳು ಎಷ್ಟು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights