Fact Check: ಲಂಡನ್‌ ಮ್ಯೂಸಿಯಂನಲ್ಲಿದೆಯಾ ಛತ್ರಪತಿ ಶಿವಾಜಿ ಚಿತ್ರ?

ಲಂಡನ್ ಮ್ಯೂಸಿಯಂನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂಲ ಚಿತ್ರವೆಂದು ಹೇಳಿಕೊಂಡು ಫೋಟೋ ಒಂದನ್ನು ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಲಂಡನ್ ಮ್ಯೂಸಿಯಂನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅವರ ಮೂಲ ಚಿತ್ರ.

ನಿಜಾಂಶ: ಲಂಡನ್ ಮ್ಯೂಸಿಯಂನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಚಿತ್ರ ಇದೆ ಎಂಬುದು ನಿಜವಾಗಿದ್ದರೂ, ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರ ಅದಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಫೋಟೋದ ಕಲಾಕೃತಿಗಾಗಿ ‘ದಿ ಬ್ರಿಟಿಷ್ ಮ್ಯೂಸಿಯಂ’ ವೆಬ್‌ಸೈಟ್‌ನಲ್ಲಿ ಹುಡುಕಿದಾಗ, ಈ ಚಿತ್ರವನ್ನು ಹೋಲುವ ಕಲಾಕೃತಿ ಸಿಗಲಿಲ್ಲ. ಲಂಡನ್ ಮ್ಯೂಸಿಯಂನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಕಲಾಕೃತಿ ಇದೆ ಎಂಬುದು ನಿಜ. ಆದಾಗ್ಯೂ, ಫೋಸ್ಟ್‌ ನಲ್ಲಿ ಪ್ರತಿಪಾದಿಸಲಾಗಿರುವ ಕಲಾಕೃತಿ ಲಂಡನ್ ಮ್ಯೂಸಿಯಂನಲ್ಲಿ ಇಲ್ಲ. ‘ದಿ ಬ್ರಿಟಿಷ್ ಮ್ಯೂಸಿಯಂ’ ವೆಬ್‌ಸೈಟ್‌ನ ‘ಪೋರ್ಟ್ರೇಟ್ ಆಫ್ ಇಂಡಿಯನ್ ಪ್ರಿನ್ಸಸ್’ ಚಿತ್ರಸಮುಚ್ಚಯದೊಳಗೆ ಛತ್ರಪತಿ ಶಿವಾಜಿ ಚಿತ್ರಕಲೆ ಇದೆ. ಅದನ್ನು ಇಲ್ಲಿ ನೋಡಬಹುದು.

ಪೋಸ್ಟ್ ನಲ್ಲಿ ಹಂಚಿಕೊಂಡ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘ಭಾರತ್‌ ಜ್ಞಾನ್‌’ ಬ್ಲಾಗ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ವೈರಲ್‌ ಅಗಿರುವ ಚಿತ್ರದ ರೀತಿಯ ಫೋಟೋ ಕಂಡುಬಂದಿದೆ. ಫೋಟೋದ ವಿವರಣೆಯಲ್ಲಿ, ಇತಿಹಾಸಕಾರ ವಿ ಎಸ್ ಬೆಂಡ್ರೆ ಕಂಡುಹಿಡಿದ ಶಿವಾಜಿ ಮಹಾರಾಜರ ಏಕೈಕ ಲೈವ್ ಸ್ಕೆಚ್ ಎಂದು ಉಲ್ಲೇಖಿಸಲಾಗಿದೆ.

ಆದರೆ, ನಮ್ಮ ಅಧ್ಯಯನದ ಪ್ರಕಾರ, ಈ ವರ್ಣಚಿತ್ರವನ್ನು ವಿ ಎಸ್ ಬೆಂಡ್ರೆ ಕಂಡುಹಿಡಿದಿಲ್ಲ ಎಂದು ತಿಳಿದುಬಂದಿದೆ. ವಾಸುದೇವ್ ಸೀತಾರಾಮ್ ಬೆಂಡ್ರೆ ಅವರು ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸಕಾರರಾಗಿದ್ದು, ಸಂಭಾಜಿ ಮಹಾರಾಜ್, ತುಕಾರಾಂ ಮಹಾರಾಜ್ ಮತ್ತು ಶಿವಾಜಿ ಮಹಾರಾಜ್ ಅವರ ಬಗೆಗಿನ ಸಂಶೋಧನೆ ಮತ್ತು ಅಧ್ಯಯನಗಳಿಗೆ ಹೆಸರುವಾಸಿಯಾಗಿದ್ದಾರೆ. ಶಿವಾಜಿ ಮಹಾರಾಜರ ನಿಜ ಚಿತ್ರವನ್ನು ಪತ್ತೆಹಚ್ಚಿದ ವ್ಯಕ್ತಿ ಅವರು. ಕ್ರಿ.ಶ 1664 ರಲ್ಲಿ, ಸೂರತ್‌ನ ಡಚ್ ಗವರ್ನರ್ ವಾನ್ ವ್ಯಾಲೆಂಟಿನ್ ಅವರು ಶಿವಾಜಿ ಮಹಾರಾಜ್ ಮತ್ತು ಇತರ ರಾಜಕುಮಾರರ ವರ್ಣಚಿತ್ರಗಳನ್ನು ಬಿಡಿಸಲು ಕಲಾವಿದರಿಗೆ ಕೆಲಸ ನೀಡಿದ್ದರು. ವಾಸುದೇವ್ ಸೀತಾರಾಮ್ ಬೆಂಡ್ರೆ ಅವರು ಯುರೋಪಿನಲ್ಲಿ ನಡೆಸಿದ ಸಂಶೋಧನೆಯ ಸಮಯದಲ್ಲಿ, ಈ ವರ್ಣಚಿತ್ರಗಳನ್ನು ಕಂಡುಕೊಂಡಿದ್ದು, 1933 ರಲ್ಲಿ ಮೊದಲ ಬಾರಿಗೆ ಅವನ್ನು ಪ್ರಕಟಿಸಿದರು. ಈ ಚಿತ್ರವನ್ನು ಪ್ರಕಟಿಸುವವರೆಗೆ, ಹೆಚ್ಚಿನ ಜನರು ಮುಸ್ಲಿಂ ಸರ್ದಾರ್ ಅವರ ಚಿತ್ರವನ್ನು ಶಿವಾಜಿಯವರ ಚಿತ್ರ ಎಂದೇ ತಿಳಿದಿದ್ದರು. ವಾಸುದೇವ್ ಸೀತಾರಾಮ್ ಬೆಂಡ್ರೆ ಅವರು ಪ್ರಕಟಿಸಿದ ಫೋಟೋವನ್ನು ಇನ್ನೂ ಅನೇಕ ತಾಣಗಳಲ್ಲಿ ಶಿವಾಜಿ ಮಹಾರಾಜರ ಮೂಲ ಚಿತ್ರವೆಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿರುವ ಚಿತ್ರವು ಲಂಡನ್ ಮ್ಯೂಸಿಯಂನಲ್ಲಿರುವ ಶಿವಾಜಿಯ ಕಲಾಕೃತಿಯಲ್ಲ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: ಸಂವಿಧಾನ ಬದಲಿಸುತ್ತೇವೆನ್ನುವ ಬಿಜೆಪಿ ಕನ್ನಡಕ್ಕಾಗಿ ತಿದ್ದುಪಡಿ ತರಲಿ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights