IPL 2020: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಆಟ- ರೈನಾ, ಭಜ್ಜಿ ಬಚ್ಚಿಟ್ಟಿದ್ದಾರಾ ಭಯಾನಕ ಸೀಕ್ರೆಟ್..?

ಒಂದು ಚಿಕ್ಕ ಎಚ್ಚರಿಕೆ ತೆಗೆದುಕೊಂಡು ಮುಂದುವರಿಯಬಹುದಾಗಿದ್ದ  ಸಣ್ಣ ವೈರಸ್ (ಕೊವುಡ್ 19) ಅನ್ನು ದೊಡ್ಡದಾಗಿ ಚಿತ್ರ ತನ್ನೆಲ್ಲ ಯಂತ್ರಾಂಗ ಉಪಯೋಗಿಸಿ ಜೊತೆಗೆ ಗೋದಿ ಮೀಡಿಯಾವನ್ನು ಬಳಸಿಕೊಂಡು, ದೇಶದ ಅರ್ಥವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿ, ವಲಸೆ ಕಾರ್ಮಿಕರನ್ನು ರಸ್ತೆಗಳಲ್ಲಿ ಬಿಟ್ಟ ಪ್ರಥಮ ಸೇವಕರ ತಂಡ ತನ್ನ ಇಮೇಜ್ ಕಾಪಾಡಿಕೊಳ್ಳುವತ್ತ ಮಾತ್ರ ತನ್ನ ಚಿತ್ತ ಹರಿಸಿದ್ದು  ಈ ಶತಮಾವದ ದೊಡ್ಡ ದುರಂತ…

ಇನ್ನೊಂದೆಡೆ ಕುಸಿದ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ, ಅಪಾಯದ ಮಟ್ಟ ತಲುಪುತ್ತಿರುವ ಅಪರಾಧಗಳ ಸಂಖ್ಯೆ ಇವುಗಳ ಮಧ್ಯೆ ಹಸಿದವನ ಆರ್ತನಾದಕ್ಕೆ ತಮ್ಮ ಕಿವಿಗಳನ್ನು ಮುಚ್ಚಿ ಕುಳಿತಿರುವ ಮಧ್ಯಮ, ನವ ಮಾಧ್ಯಮ ವರ್ಗದ ಜೊತೆ ಹುಸಿ ದೇಶಪ್ರೇಮದ ಅಮಲಿನಲ್ಲಿ ತೇಲುತ್ತಿರುವ ಯುವಜನಾಂಗ ಲಾಕ್ ಡೌನ್ ನಿಂದಾಗಿ ಮನರಂಜನೆಯಿಂದ ವಂಚಿತವಾಗಿದೆ.. ಅದಕ್ಕಾಗಿ ಗೋಧಿ ಮೀಡಿಯಾ ಉಣಬಡಿಸುವ ಕಳಪೆ ಕಾರ್ಯಕ್ರಮಗಳನ್ನು ಬಾಯಿಚಪ್ಪರಿಸಿ ನೋಡುತ್ತಾ ಭ್ರಷ್ಟ ಮೀಡಿಯಾಗಳ ಟಿಆರ್ಪಿ ಹೆಚ್ಚಿಸುತ್ತಾ ಕಾಲಹರಣ ಮಾಡುತ್ತಿದೆ…

Modi government says it has no data on Covid-19 migrant job loss — Quartz  India

ಹಿಗೆ ಕಂಗೆಟ್ಟ ಕುಳಿತ್ತಿದ್ದ ಸಮಾಜಕ್ಕೆ ಮನರಂಜನೆ ನೀಡಲು ಬರುತ್ತಿದೆ ಚುಟುಕು ಕ್ರಿಕೆಟ್ ಐಪಿಎಲ್… ಮೊದ ಮೊದಲು ಕೊರೊನಾಕ್ಕೆ ಭಯಪಟ್ಟು ಮನೆಯಲ್ಲಿ ಬೆಚ್ಚಗೆ ಕುಳಿತವರು ಈಗ ಗಲ್ಲಿ ಗಲ್ಲಿಯಲ್ಲಿ ಬೇಕಾ ಬಿಟ್ಟಿಯಾಗಿದ್ದಾರೆ. ಲೈಫ್ ನಾರ್ಮಲ್ ಆಗ್ತಾ ಇದೆ… ಕಳೆದ 6 ತಿಂಗಳುಗಳಿಂದ ಕಂಪ್ಲೀಟ್ ಆಗಿ ಬಂದ್ ಆಗಿದ್ದ ಕ್ರಿಕೆಟ್ ಮತ್ತೆ ಶುರುವಾಗಿದೆ. ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಕ್ರಿಕೆಟ್ ಪ್ರೀಯರಿಗೆ ರಸದೌತಣ ನೀಡಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾ ಭಯಕ್ಕೆ ಬೆಚ್ಚಿ ಬಿದ್ದು ದೂರಹೋಗಿತ್ತು. ಆದ್ರೆ ಈಗ ಹಠಮಾರಿ ಬಿಸಿಸಿಐ ನಿಂತುಹೋಗಿರುವ ಅಂತರಾಷ್ಟ್ರೀಯ ಕ್ರಿಕೆಟ್ ಆಡಿಸುವ ಪ್ರಯತ್ನ ಮಾಡುವ ಬದಲು ಹಣದ ಹೊಳೆ ಹರಿಸುವ ಐಪಿಎಲ್ ನಡೆಸಲು ಸಿದ್ಧವಾಗಿದೆ..!

ಕ್ರಿಕೆಟ್ ಜೊತೆಗೆ ದುಡ್ಡು ಮಾಡುವ ನೀತಿಗೆ ಕೊರೊನಾ ಕಾಲದಲ್ಲೂ ಬಿಸಿಸಿಐ ಅಂಟಿಕೊಂಡಿದೆ ಅನ್ನುವುದು ಕ್ರಿಕೆಟ್ ಎಷ್ಟು ಸತ್ಯವಾಗಿದೆಯೋ ಅಷ್ಟೇ ಸತ್ಯಾ..!

ಬೇಕಿತ್ತಾ ಐಪಿಎಲ್?

ಇಂತಹದ್ದೊಂದು ಪ್ರಶ್ನೆ ಆರಂಭದಲ್ಲೇ ಹುಟ್ಟಿಕೊಂಡಿತ್ತು. ಕ್ರಿಕೆಟ್ನ ಅಪ್ಪಟ ಅಭಿಮಾನಿಗಳು ಐಪಿಎಲ್ ನಡೆಯಲಿ ಅಂತಿದ್ರೆ, ಆಟಗಾರರು ಬೇರೆ ಯಾವ ಟೂರ್ನಿಯಾದರೂ ರದ್ದಾಗಲಿ, ಜೇಬು ತುಂಬುವ ಐಪಿಎಲ್ ಹೇಗಾದ್ರೂ ನಡೆಯಲಿ ಅಂತ ಲೆಕ್ಕಾಚಾರ ಹಾಕುತ್ತಿದ್ದರು. ಇನ್ನು ಕೆಲ ಕ್ರಿಕೆಟಿಗರಿಗೆ ಐಪಿಎಲ್ ಹೊಸ ಭವಿಷ್ಯ ಮತ್ತು ಜೀವನ ನೀಡಲಿದೆ ಅನ್ನುವುದು ಕೂಡ ಸುಳ್ಳಲ್ಲ. ಇದೆಲ್ಲರ ಮಧ್ಯೆ ಐಪಿಎಲ್ ಗಿಂತಾ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಆಡಿಸಲು ಬಿಸಿಸಿಐ ಶ್ರಮ ಪಡಬೇಕಿತ್ತು ಅಂತ ವಾದ ಮಾಡುವ ಮತ್ತೊಂದು ದೊಡ್ಡ ಗ್ಯಾಂಗ್ ಕೂಡ ಇದೆ.

opinion: Will IPL 2020 survive the Coronovirus scare?, Marketing &  Advertising News, ET BrandEquity
ಅಂದಹಾಗೇ ಹಠಮಾರಿ ಬಿಸಿಸಿಐ ಭಾರತದಲ್ಲಿ ಐಪಿಎಲ್ ಸಾಧ್ಯವಿಲ್ಲ ಅಂದಾಗ ಬೇರೆ ದೇಶಗಳ ಆತಿಥ್ಯದ ಕಡೆ ಮುಖ ಮಾಡಿತ್ತು. ಬಿಸಿಸಿಐ ಲಿಸ್ಟ್ನಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ದೇಶಗಳ ಹೆಸರೂ ಇತ್ತು. ಆದ್ರೆ ಸಮಯ ಮತ್ತು ಖರ್ಚಿನ ಲೆಕ್ಕಾಚಾರ ಹೊಂದಾಣಿಕೆ ಮಾಡಿದಾಗ ಯುಎಇಗಿಂತ ಉತ್ತಮ ಸ್ಥಳ ಬೇರೊಂದಿಲ್ಲ ಅನ್ನುವುದನ್ನು ಬಿಸಿಸಿಐ ಲೆಕ್ಕಾಚಾರ ಹಾಕಿದ್ದು ಸುಳ್ಳಲ್ಲ. ಶಾರ್ಜಾ, ದುಬೈ ಮತ್ತು ಅಬುದಾಭಿಯ ಮೈದಾನಗಳಲ್ಲಿ, ಕೋವಿಡ್ ನಿಯಮದಂತೆ ಐಪಿಎಲ್ ಆಟ ಆಡಿಲು ಬಿಸಿಸಿಐ ಟೊಂಕಕಟ್ಟಿಕೊಂಡು ನಿಂತಿದೆ. ಮೊದಲ ಪಂದ್ಯ ಸೆಪ್ಟಂಬರ್19ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ ಮತ್ತ ರನರ್ಸ್ ಅಪ್ ಚನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ..! ಅಲ್ಲಿಂದ ಶುರುವಾಗಲಿದೆ ಬಿಸಿಸಿಐಗೆ ಹಣದ ಹೊಳೆ ಹರಿಸುವ ಚುಟುಕು ಕ್ರಿಕೆಟ್ ಹಂಗಾಮಾ…!

ಖಾಲಿ ಸ್ಟೇಡಿಯಂ, ಸ್ಪಾನ್ಸರ್ ಪ್ರಾಬ್ಲಂ..!

ಐಪಿಎಲ್ ಅಂದ್ರೆ ಫುಲ್ ಹೌಸ್ ಅನ್ನುವುದು ಕಾಮನ್. ಮ್ಯಾಚ್ ಯಾವ ತಂಡಗಳ ನಡುವೆ ಬೇಕಾದರೂ ಇರಲಿ, ಆದ್ರೆ ಅಭಿಮಾನಿಗಳು ಮೈದಾನದ ಕಡೆ ಬರುವುದು ಗ್ಯಾರಂಟಿ. ವೀಕೆಂಡ್ ಮ್ಯಾಚ್ ಗಳಿಗಂತೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಆದ್ರೆ ಈ ಬಾರಿ ಎಲ್ಲಾ ಸೀನ್ಗಳು ಉಲ್ಟಾ ಆಗಿದೆ. ಯುಎಇ ಆಗಲಿ ಅಥವಾ ಜಗತ್ತಿನ ಯಾವುದೇ ಮೈದಾನದಲ್ಲಿ ಕ್ರಿಕೆಟ್ ನಡೆಯಲಿ ಜನ ತುಂಬಿಕೊಂಡು ಮ್ಯಾಚ್ ನಡೆಸುವ ತಾಕತ್ತು ಮತ್ತು ದೈರ್ಯ ಯಾರಿಗೂ ಇಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಖಾಲಿ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಜೊತೆಗೆ ಅಲ್ಲಿಯ ಮೈದಾನಗಳು ದೊಡ್ಡವು ಹೀಗಾಗಿ ಈ ಬಾರಿಯ ಐಪಿಎಲ್ ಲೋ ಸ್ಕೋರಿಂಗ್ ಗೇಮ್ಗಳಾಗಿ ಬಿಟ್ಟರೆ ಅದನ್ನು ಟಿವಿ ಪರದೆಯಲ್ಲಿ ನೋಡುವುದು ಕೂಡ ಕಷ್ಟ ಕಷ್ಟ… ಹೀಗಾಗಿ ಯುಎಇ ಆವೃತ್ತಿಯ ಐಪಿಎಲ್ ಪಂದ್ಯಗಳೆಲ್ಲವೂ ಹೈ ಸ್ಕೋರಿಂಗ್ ಗೇಮ್ಗಳಾಗಿ ಬಿಡಲಿ ಎಂದು ಬಿಸಿಸಿಐ ಪ್ರಾರ್ಥನೆ ಮಾಡುತ್ತಿದೆ. ಇವರ ಪಾರ್ಥನೆಗೆ UAE  ಪಿಷ್ ಕ್ಯೂರೆಟರ್ ಎಷ್ಟು ಸ್ಪಂದಿಸುತ್ತಾರೆ ಅನ್ನುವುದನ್ನು ಕಾದು ನೋಡಬೇಕು…

Ticket fiasco at World T20 as fans are locked out of near-empty stadium in  Nagpur | Cricket | ESPNcricinfo.com

ಇನ್ನು ಇಂಡೋ-ಚೈನಾ ವಾರ್ಗೇಮ್ ಲೆಕ್ಕಾಚಾರ ಬಿಸಿಸಿಐ ಮತ್ತು ಐಪಿಎಲ್ ಮೇಲೆ ದೊಡ್ಡ ಪರಿಣಾ ಬೀರಿದೆ. ಚೀನಾದ ವಿವೊ ಮೊಬೈಲ್ ಐಪಿಎಲ್ಗೆ  ನಾಲ್ಕು ಸಾವಿರ ಕೋಟಿ ಸುರಿದು ಟೈಟಲ್ ಸ್ಪಾನ್ಸರ್ಶಿಪ್ ಪಡೆದುಕೊಂಡಿತ್ತು. ಆದರೆ ಚೀನಾ ವಿರುದ್ಧ ಕೇಂದ್ರ ಸರ್ಕಾರ ತಿರುಗಿ ಬಿದ್ದಿದೆ. ಚೀನಾ ದೇಶದ ನೂರಾರು ಮೋಬೈಲ್ ಆಪ್ ಗಳನ್ನು ನೀಶೆದಿಸಿರುವ ಮೋದಿ ಸರಕಾರ  ಚೀನಾದ ಬಂಸವಾಳ ಹೂಡಿಕೆ ಮೇಲೆ ಕಣ್ಣಿಟ್ಟಿದೆ.  ಹೀಗಾಗಿ ಐಪಿಎಲ್ ಬೋರ್ಡ್ ಮತ್ತು ಬಿಸಿಸಿಐ ಅನಿವಾರ್ಯವಾಗಿ ಹೊಸ ಟೈಟಲ್ ಸ್ಪಾನ್ಸರ್ ಹುಡುಕಿಕೊಂಡಿದೆ. ಈ ಬಾರಿಯ ಐಪಿಎಲ್ಗೆ ಟೈಟಲ್ ಸ್ಪಾನ್ಸರ್ ಡ್ರೀಮ್ 11 ..  ವಿವೋ ಕೊಡುತ್ತಿದ್ದ ಹಣಕ್ಕಿಂತ ಡ್ರೀಮ್ 11  ಸಾಕಷ್ಟು ಕಡಿಮೆ ದುಡ್ಡನ್ನೇ ಬಿಡ್ನಲ್ಲಿ ನಮೂದು ಮಾಡಿತ್ತು. ಹೀಗಾಗಿ ಬಿಸಿಸಿಐಗೆ ಟೈಟಲ್ ಸ್ಪಾನ್ಸರ್ ಶಿಪ್ ನಲ್ಲಿ ಅರ್ದದಷ್ಟು ದುಡ್ಡು ಖೋತಾ ಆಗಿದೆ. ಟಿಕೆಟ್ ಸೇಲ್ನಲ್ಲೂ ಈ ಬಾರಿ ಶೂನ್ಯ ಸಂಪಾದನೆ

ಇದನ್ನು ಓದಿ: ಅಂತೂ IPL 2020 ವೇಳಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ಪಿಚ್‌ಗೆ ಇಳಿಯುವವರಾರು?

ಇರುವುದರಿಂದ ಬಿಸಿಸಿಐಗೆ ಈ ಬಾರಿಯ ಐಪಿಎಲ್ ಕೊಂಚ ಹೊರೆಯಾಗಿ ಕಾಣಿಸಬಹುದು. ಈ ನಡುವೆ ಐಪಿಎಲ್ನ ಅಧಿಕೃತ ಬ್ರಾಡ್ಕಾಸ್ಟರ್ ಸ್ಟಾರ್ ಕೂಡ ಪಂದ್ಯ ಆಯೋಜನೆಯ ಸಮಯದ ಬಗ್ಗೆ ಅಸಮಾಧಾನಗೊಂಡಿದೆ. ದೀಪಾವಳಿಯ ಟೈಮ್ನಲ್ಲಿ ಐಪಿಎಲ್ ಧಮಾಕಾ ನಡೆಸುವಂತೆ ಸ್ಟಾರ್ ಸ್ಪೋರ್ಟ್ಸ್ ಬಿಸಿಸಿಐ ಬಳಿ ಬೇಡಿಕೆ ಇಟ್ಟಿತ್ತು. ಆದ್ರೆ ಬಿಸಿಸಿಐ ಲೆಕ್ಕಾಚಾರವೇ ಬೇರೆ ಆಗಿರುವುದರಿಂದ ಸ್ಟಾರ್ ಬೇಡಿಕೆಗೆ ಮನ್ನಣೆ ಸಿಗಲಿಲ್ಲ. ಒಟ್ಟಾರೆ ಇಷ್ಟೆಲ್ಲಾ ಕೊರತೆಯ ಮಧ್ಯೇಯೂ  IPL ಬಿಸಿಸಿಐಗೆ ಹಣದ ಹೊಳೆ ಹರಿಸುತ್ತದೆ ಅಂದರೆ ಆಶ್ಚರ್ಯವಾಗುವುದಿಲ್ಲವೇ,,,?

ಆಟಗಾರರು ಬಿಚ್ಚಿಟ್ಟಿರುವ ರಹಸ್ಯ ಏನು..?

ಈ ಮಧ್ಯೆ  ಸ್ಟಾರ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಏನೇನೋ ನಡೆಯುತ್ತಿದೆ. ಸಿಎಸ್ಕೆಯೇ ಅತ್ಯಂತ ನಂಬುಗೆಯ ಆಲ್ ರೌಂಡರ್ ಸುರೇಶ್ ರೈನಾರಂತಹ ಆಟಗಾರರು ಸೂಪರ್ ಕಿಂಗ್ಸ್ ತಂಡದಿಂದ ಹೊರ ಬಂದಿದ್ದಾರೆ. ರೈನಾ ವೈಯಕ್ತಿಕ ಕಾರಣಗಳನ್ನು ಅಧಿಕೃತವಾಗಿ ನಿವೃತ್ತಿ ನೀಡಿದ್ದರೂ, ಫ್ರಾಂಚೈಸಿ ಮಾಲೀಕ ಮಾಜಿ ಬಿಸಿಸಿಐನ ಅಧ್ಯಕ್ಷ ಶ್ರೀನಿವಾಸನ್ ಅವರ ಹೇಳಿಕೆಗಳು ಏನೋ ಸಮ್ಥಿಂಗ್ ನಡೆದಿದೆ ಅನ್ನುವ ಗುಮಾನಿ ಹುಟ್ಟುಹಾಕಿದೆ. ರೈನಾ ಮತ್ತು ಸಿಎಸ್ಕೆ ಒಳಗಿರುವ ಗುಟ್ಟೇನು ಅನ್ನುವುದು ಸುಲಭವಾಗಿ ಹೊರಬಾರದು. ಆದ್ರೆ ಸಮಯ ಹಾಗೂ ಹಣೆಬರಹದ ಆಟವನ್ನು ಯಾರೂ ಯೋಚನೆ ಕೂಡ ಮಾಡಲಾಗದು. ಮೇಲ್ನೋಟಕ್ಕೆ ರೈನಾಗೆ ವೈಯಕ್ತಿಕ ಸಮಸ್ಯೆ ಇದೆ ಎಂದೇ ನಂಬೋಣ. ಆದ್ರೆ ವೈಯಕ್ತಿಕ ಸಮಸ್ಯೆ ಹೊರಾಗಿ ಸಮ್ಥಿಂಗ್ ಸ್ಪೆಷಲ್ ಏನು ಅನ್ನುವುದು ಕೂಡ ಗೊತ್ತಾದರೆ ಉತ್ತಮ.

IPL 2020 | Chennai Super Kings not 'looking at anybody' to replace Suresh  Raina, Harbhajan Singh | Cricket News – India TV

ಇನ್ನು ಟರ್ಬನೇಟರ್ ಹರ್ಭಜನ್ ಸಿಂಗ್ ಎಲ್ಲಾ ಆವೃತ್ತಿಯ ಐಪಿಎಲ್ನಲ್ಲೂ ಸ್ಟಾರ್ ಪ್ಲೇಯರ್. ಮುಂಬೈ ತಂಡದಿಂದ ಹೊರಬಿದ್ದ ಹರ್ಭಜನ್ ಸಿಂಗ್ಗೆ ಆಶ್ರಯ ಕೊಟ್ಟಿದ್ದು ಚೆನ್ನೈ ಸೂಪರ್ ಕಿಂಗ್ಸ್.ಆದ್ರೆ ಈ ಬಾರಿ ಭಜ್ಜಿ ಕೂಡ ಐಪಿಎಲ್ ಆಡುತ್ತಿಲ್ಲ. ಟರ್ಬನೇಟರ್ ಅಮ್ಮನ ಆರೋಗ್ಯದ ನೆಪ ಹೇಳಿ ಐಪಿಎಲ್ನಿಂದ ದೂರ ಇದ್ದಾರೆ. ಆದ್ರೆ ಟರ್ಬನೇಟರ್ ಶೀಘ್ರದಲ್ಲೇ ಸತ್ಯ ಒಂದನ್ನು ಹೊರಗೆ ಹಾಕ್ತಿನಿ ಅಂತ ಹೇಳಿರುವುದು ಕುತೂಹಲ ಮೂಡಿಸಿದೆ.

ಇಲ್ಲಿ ತನಕ ನಡೆದ 12 ಆವೃತ್ತಿಗಳ ಐಪಿಎಲ್ ಟೂರ್ನಿ ಅತ್ಯದ್ಭುತ ಯಶಸ್ಸು ಕಂಡಿದೆ. ನೂರಾರು ಕ್ರಿಕೆಟಿಗರ ಹಣೆ ಬರಹ ಬದಲಿಸಿದೆ. ಸಾವಿರಾರು ಜನರ ಹೊಟ್ಟೆಯನ್ನೂ ತುಂಬಿಸಿದೆ.

ಮ್ಯಾಚ್ ನೋಡಿದವರಿಗೂ ಮಜಾ ಕೊಟ್ಟಿದೆ. ಟಿವಿಯಲ್ಲಿ ಆಟ ನೋಡಿದವರೂ ಆನಂದಿಸಿದ್ದಾರೆ. ಐಪಿಎಲ್ ಜಸ್ಟ್ ಕ್ರಿಕೆಟ್ ಆಗಿ ಉಳಿದಿಲ್ಲ. ಇದು ಲೈಫ್ ಸ್ಟೈಲ್ ಕೂಡ ಬದಲಿಸಿದೆ. ಇಂತಹ ದುಡ್ಡಿನ ಚೀಲ ಈಗ ಬಚ್ಚಿಟ್ಟುಕೊಂಡಿರುವ ಸತ್ಯಗಳನ್ನು ಹೊರಗೆ ಹಾಕುತ್ತಾ ಅನ್ನುವ ಕುತೂಹಲವಂತೂ ಇದ್ದೆ ಇದೆ.


ಇದನ್ನು ಓದಿ: IPL 2020 ಪಂದ್ಯಗಳನ್ನು ಯಾವ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು? ಕನ್ನಡ ಚಾನೆಲ್‌ನಲ್ಲೂ ಪ್ರಸಾರ! ಡೀಟೇಲ್ಸ್‌

Leave a Reply

Your email address will not be published. Required fields are marked *