Modi Birthday: ಪಕೋಡ ಮಾರಿ ಎಂದಿದ್ದ ಮೋದಿ ಹುಟ್ಟಿದ ದಿನಕ್ಕೆ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ!

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು “ರಾಷ್ಟ್ರೀಯ ನಿರುದ್ಯೋಗ ದಿನ”ವನ್ನಾಗಿ ಆಚರಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಟ್ರೆಂಡಿಂಗ್ ಆಗಿತ್ತು. ಇಂದು ಮೋದಿಯವರ ಜನ್ಮದಿನ. ನಿರೀಕ್ಷೆಗೂ ಮೀರಿ ನೆಟ್ಟಿಗರು ಈ ಅಭಿಯಾನದಲ್ಲಿ ಪಾಲ್ಗೊಂಡು #NationalUnemploymentDay ಎಂಬ ಹ್ಯಾಶ್‌ಟ್ಯಾಗ್ ಬಳಸಿ ಲಕ್ಷಾಂತರ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

ಭಾತರದಲ್ಲಿ ಕಳೆದ 45 ವರ್ಷಗಳ ಇತಿಹಾಸದಲ್ಲಿ ಈ ಪ್ರಮಾಣದ ನಿರುದ್ಯೋಗದ ಸಮಸ್ಯೆ ಸಂಭವಿಸಿರಲಿಲ್ಲ ಎಂದು ಹಲವು ತಜ್ಞರ ಅಭಿಪ್ರಾಯ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಘೋಷಿಸಿ ಪ್ರಧಾನಿ ಮೋದಿ 2014 ರಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಆದರೆ ಇಂದು ‘ಉದ್ಯೋಗ ಸೃಷ್ಟಿಯಾಗುವುದು ಬೇಡ, ಇರುವ ಉದ್ಯೋಗ ಉಳಿಸಿಕೊಂಡರೆ ಸಾಕು’ ಎಂಬಂತಾಗಿದೆ.

ಟವಿ9 ನಲ್ಲಿ ಪಕೋಡಾ ಪ್ರೊಟೆಸ್ಟ್ ಬಗ್ಗೆ ವಿಶೇಷ ಕಾರ್ಯಕ್ರಮದ ತುಣುಕು ನೋಡಿ.#ಉದ್ಯೋಗಕ್ಕಾಗಿ_ಯುವಜನರು

Posted by Muttu Raju on Tuesday, January 30, 2018

ಇದರ ಫಲವಾಗಿಯೇ ಇತ್ತೀಚಿನ ದಿನಗಳಲ್ಲಿ ಮೋದಿಯವರನ್ನು ಯುವಜನತೆ ತಿರಸ್ಕರಿಸುತ್ತಿರುವ ಕುರುಹುಗಳು ಹೆಚ್ಚಾಗಿ ಕಾಣುತ್ತಿದೆ. ಕಳೆದ ತಿಂಗಳಿನಲ್ಲಿ ಮೋದಿಯವರ ಮನ್‌ಕಿಬಾತ್‌ನಿಂದ ಆರಂಭವಾದ ಈ ತಿರಸ್ಕಾರ ಇಂದು ಅವರ ಹುಟ್ಟುಹಬ್ಬವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ”ವನ್ನಾಗಿ ಆಚರಿಸಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಟ್ವಿಟ್ಟರ್‌ನಲ್ಲಿ #NationalUnemploymentDay ಮತ್ತು #HappyBirthdayPMModi ಟ್ರೆಂಡಿಂಗ್ ಆಗುತ್ತಿದ್ದು, ಈ ವರದಿ ಬರೆಯುವ ವೇಳೆಗೆ, ಒಟ್ಟಾರೆ ಇಂದಿನ ದಿನವನ್ನು ನಿರುದ್ಯೋಗ ದಿನವೆಂದು ವಿವಿಧ ಭಾಷೆಗಳಲ್ಲಿ, ವಿವಿಧ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಸುಮಾರು 50 ಲಕ್ಷಕ್ಕೂ ಹೆಚ್ಚಿನ ಟ್ವೀಟ್‌ಗಳನ್ನು ಮಾಡಿದ್ದಾರೆ. ಹಿಂದಿಯಲ್ಲಿ #राष्ट्रीय_बेरोजगार_दिवस ‘ರಾಷ್ಟ್ರೀಯ ಬೇರೋಜ್ಗಾರ್ ದಿವಸ್’ ಎಂದೂ ಟ್ರೆಂಡಿಂಗ್ ಆಗುತ್ತಿದೆ. ಭಾರತದ ಎಲ್ಲಾ ಭಾಷಗಳಲ್ಲಿಯೂ ‘ರಾಷ್ಟ್ರೀಯ ನಿರುದ್ಯೋಗ ದಿನ’ ಟ್ರೆಂಡಿಂಗ್ ಆರಂಭವಾಗಿದೆ.

 

ಫೇಸ್‌ಬುಕ್‌ನಲ್ಲಿಯೂ ಈ ಹ್ಯಾಶ್‌ಟ್ಯಾಗ್ ಬಳಸಿ ಟ್ರೆಂಡ್ ಮಾಡಲಾಗುತ್ತಿದೆ.

And with lots of pain we are celebrating this.#NationalUnemploymentDay

Posted by Sarovar Benkikere on Wednesday, September 16, 2020

ಇಂದಿನ ಪ್ರತಿಭಟನೆಯ ಸ್ವರೂಪಗಳು ಬದಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೇ ಪ್ರತಿಭಟಿಸುವ ಕಾಲ ಬಂದಿದೆ. ಸಂಘಟಿತ ಅಥವಾ ಅಸಂಘಟಿತವಾಗಿ ಕೆಲವು ಜನರು ತಮ್ಮ ಸಮಸ್ಯೆಯನ್ನು ಸರ್ಕಾರಕ್ಕೆ ಸತಲುಪಿಸುವ ಸಲುವಾಗಿ, ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ, ಬೆಂಬಲ ಪಡೆಯುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಆಡಳಿತದ ವಿರುದ್ಧ ಯುವಜನತೆ ತಿರುಗಿಬಿದ್ದಿರುವುದಕ್ಕೆ ಇಂದಿನ ಈ ಟ್ರೆಂಡಿಂಗ್ ಸಾಕ್ಷಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights