ಬಡಜನರ ಮೇಲೆ ಅಧಿಕಾರಿಗಳ ದರ್ಪ: ಕಟ್ಟಿದ್ದ ಮನೆಗಳನ್ನು ಕೆಡವಿದ ತಹಶೀಲ್ದಾರ್!

ಬಡಜನರ ಮೇಲೆ ಅಧಿಕಾರಗಳು ಹಾಗೂ ಸರ್ಕಾರಗಳ ದಬ್ಬಾಳಿಕೆ ನಡೆಯುತ್ತಲೇ ಇದೆ. ಇಂತಹ ದಬ್ಬಾಳಿಕೆಗಳನ್ನೇ  ಕಾನೂನಾಗಿಸಿಕೊಳ್ಳುವ ಉದ್ದೇಶದಿಂದಲೇ ರಾಜ್ಯದ ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ.

ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಬಹುದಾದಂತ ಪರಿಣಾಮಗಳಿಗೆ ಉದಾಹರಣೆಯಾಗಿ ರಾಜಧಾನಿ ಬೆಂಗಳೂರಿನ ಘಟನೆ ನಡೆದಿದೆ.

ಬೆಂಗಳೂರಿನ ಗೊಟ್ಟಿಗೆರೆ ವಾರ್ಡ್ ನಲ್ಲಿರುವ ಪಿಲ್ಲಿಗಾನಹಳ್ಳಿಯಲ್ಲಿ, ಸ್ಥಳೀಯ ಜನರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆಂದು ಯಾವುದೇ ಮುನ್ಸೂಚನೆ ನೀಡದೆ ತಹಶಿಲ್ದಾರರ ನೇತೃತ್ವದಲ್ಲಿ ಜೆಸಿಬಿ ಮೂಲಕ ಮನೆಗಳನ್ನು ಕೆಡವಿದ್ದಾರೆ.

ಇದನ್ನೂ ಓದಿ: ಜಲಾಶಯ ಯೋಜನೆ: ಪರಿಹಾರವೂ ಇಲ್ಲದೆ ಹಳ್ಳಿ ತೊರೆಯುವಂತೆ ಜನರ ಮೇಲೆ ಅಧಿಕಾರಗಳ ದೌರ್ಜನ್ಯ

ಅಲ್ಲಿನ ಜನರು ತಮ್ಮ‌ ಬಳಿ ಖಾತೆ- ಕಂದಾಯ ಕಟ್ಟಿರುವ, ಜಾಗ ಗ್ರ್ಯಾಂಟ್ ಆಗಿರುವ ದಾಖಲೆಗಳಿವೆ ಎಂದು ಕೇಳಿಕೊಳ್ಳುತ್ತಿದ್ದರೂ, ಅವರಲ್ಲಿರುವ ದಾಖಲೆಗಳೇನು ಎಂದು ಪರಿಶೀಲಿಸದೆ, ಜನರ ಮಾತುಗಳನ್ನು ಆಲಿಸದೇ ಮನೆಗಳನ್ನು ಕೆಡವಿದರು.

ಇದೇ ವೇಳೆಗೆ ಭೇಟಿ ನೀಡಿದ್ದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರು ಅಲ್ಲಿನ ಜನರ ಬಳಿ ಮಾಹಿತಿ ಪಡೆದು ಪೊಲೀಸರು ಹಾಗೂ ತಹಶಿಲ್ದಾರರನ್ನು  “ಮನೆ ಕೆಡವುದರ ಬಗ್ಗೆ ಮುಂಚೆಯೇ ಸೂಚನೆ ನೀಡಿದ್ದೀರಾ” ಪ್ರಶ್ನೆ ಮಾಡಿದ್ದು,  ಏನೇ ಪ್ರಶ್ನೆಗಳಿದ್ದರೂ ತಹಶಿಲ್ದಾರರ ಬಳಿ ಕೇಳಿ” ಎಂದು ಪೊಲೀಸರರು ನುಣುಚಿಕೊಂಡಿದ್ದಾರೆ.

ತಹಶಿಲ್ದಾರರನ್ನು ಪ್ರಶ್ನಿಸಿದ್ದು,  “ಮೊದಲು ಮನೆಗಳು ಡೆಮೋಲಿಶ್ ಆಗಲಿ, ನಂತರ ದಾಖಲೆಗಳನ್ನು ತನ್ನಿ ಪರಿಶೀಲಿಸೋಣ. ಸರ್ಕಾರಿ ಭೂಮಿ ಇದು. ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ದಾಖಲೆಗಳಿದ್ದರೆ ಬರೆದುಕೊಡಲಿ. ಸರ್ಕಾರಿ ಜಾಗದಲ್ಲಿರುವ ಮನೆಗಳನ್ನು ಕೆಡವುದಕ್ಕೆ ಯಾರಿಗೂ ನೋಟಿಸ್ ಕೊಡುವ ಅಗತ್ಯವಿಲ್ಲ” ಅಧಿಕಾರದ ದರ್ಪ ಮೆರೆದಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಬೆಂಗಳೂರಿನ ಪಿಲ್ಲಿಗಾನಹಳ್ಳಿಯಲ್ಲಿ ವಾಸವಿದ್ದ ಬಡಜನರ ಮನೆಗಳನ್ನು ಕೆಡವಿ ಜನರನ್ನು ಬೀದಿ ಪಾಲುಮಾಡಿದ್ದಾರೆ.

ಬೆಂಗಳೂರಿನ ಪಿಲ್ಲಿಗಾನಹಳ್ಳಿಯಲ್ಲಿ ವಾಸವಿದ್ದ ಬಡಜನರ ಮನೆಗಳನ್ನು ಅಲ್ಲಿನ ತಹಶೀಲ್ದಾರ್ ಮತ್ತು ಅಧಿಕಾರಿಗಳು ಕೆಡವಿ ಜನರನ್ನು ಬೀದಿ ಪಾಲುಮಾಡಿದ್ದಾರೆ.

Posted by EnSuddi on Wednesday, September 16, 2020

 

“ಒಂದು ವೇಳೆ ಆ ಜಾಗ ಸರ್ಕಾರಿ ಜಾಗವಲ್ಲದೇ, ಅವರದೇ ಎಂದು ದಾಖಲೆಗಳು ಸಾಬೀತಾದರೆ ಈಗ ಉರುಳಿಸಿರುವ ಮನೆಗಳನ್ನು ಕಟ್ಟು ಕೊಡುತ್ತೀರಾ ಅಥವಾ ನಷ್ಟ ತುಂಬಿ ಕೊಡುತ್ತೀರಾ ಎಂದು ಹೋರಾಟಗಾರರು ಪ್ರಶ್ನಿಸಿದ್ದು, ಯಾವುದೇ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿ, ಬೇಜವಾಬ್ದಾರಿತನದ ಮಾತುಗಳನ್ನಾಡಿ ಕಾಲ್ಕಿತ್ತಿದ್ದಾರೆ.

ಆದರೆ ಅಧಿಕಾರಿಗಳು ಅಧಿಕಾರವಿದೆ ಎಂದು ಯಾರ ಮಾತನ್ನೂ ಕೇಳದೆ ಜನರನ್ನು ಬೀದಿಗೆ ತಳ್ಳುವಂತಹ ಕೃತ್ಯಗಳಿಗೆ ಕೈ ಹಾಕದೇ, ಜನರ ಬಳಿ ಇರುವ ದಾಖಲೆಗಳನ್ನು ಮೊದಲು ಪರಿಶೀಲನೆ ನಡೆಸಿ, ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದು ಅವರ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರು ಹೇಳಿದ್ದಾರೆ.


ಇದನ್ನೂ ಓದಿ: ದೆಹಲಿ ಪೊಲೀಸರು ಅಮಾಯರಿಗೆ ಅಪರಾಧಿ ಪಟ್ಟ ಕಟ್ಟುವ ಷಡ್ಯಂತ್ರ ರೂಪಿಸುತ್ತಿದ್ದಾರೆ: ಪ್ರಶಾಂತ್ ಭೂಷಣ್

Leave a Reply

Your email address will not be published. Required fields are marked *