ಆರ್‌ಸಿಬಿ ತಂಡದಲ್ಲಿ ಸ್ತ್ರೀಶಕ್ತಿ: ಐಪಿಎಲ್ ಇತಿಹಾಸದಲ್ಲೇ ಹೆಮ್ಮಯ ಮೊದಲ ಪ್ರಯೋಗ!

ಐಪಿಎಲ್ ‌ನಲ್ಲಿ ಯಾರೂ ಮಾಡದ ಮಹಿಳಾ ಸಬಲೀಕರಣವನ್ನ ಆರ್‌ಸಿಬಿ ಮಾಡಿದೆ. ಯೆಸ್, ಆರ್‌ಸಿಬಿಯ ಸಪೋರ್ಟಿಂಗ್ ಸ್ಟಾಫ್‌ ಟೀಮ್‌ನಲ್ಲಿ ಮಹಿಳ ಮಸಾಜ್‌ ಥೆರಪಿಸ್ಟ್ ಒಬ್ಬರು ಇದ್ದಾರೆ.  ಇವರೇ ಆ ಮಸಾಜ್ ಥೆರಪಿಸ್ಟ್ ಇವರ ಹೆಸರು ನವನೀತಾ ಗೌತಮ್. ಹೆಸರು ಕೇಳಿದ್ರೆ ಭಾರತೀಯರು ಅನ್ನಿಸದೇ ಇರೋದಿಲ್ಲ. ಆದ್ರೆ, ಈಕೆ ದೂರದ ಕೆನಡಾ ದೇಶದವರು. ಈ ನವನೀತಾ ಗೌತಮ್ ಸ್ಪೋರ್ಟ್ಸ್ ವಿಷ್ಯದಲ್ಲೆ ಮೂರು ಡಿಗ್ರಿ ಪಡೆದಿದ್ದಾರೆ. ಅಲ್ಲದೇ ಸಾಕಷ್ಟು ಕ್ರೀಡಾಕೂಟಗಳಲ್ಲಿ ವಿಶೇಷ ಮಸಾಜ್ ಥೆರಪಿಸ್ಟ್ ಆಗಿ ಕಾರ್ಯ ನಿರ್ಹವಸಿದ್ದಾರೆ.

ಸದ್ಯ ಆರ್‌ಸಿಬಿ ತಂಡದೊಂದಿಗೆ ದುಬೈನಲ್ಲಿರೋ ನವನೀತಾ ಗೌತಮ್ ತಂಡದ ಫಿಟ್ನೆಸ್ ಕೋಚ್ ಶಂಕರ್ ಬಾಸು ಹಾಗೂ ತಂಡದ ಫಿಸಿಯೋ ಈವನ್ ಸ್ಪೀಚ್ಲಿ ಜೊತೆಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಆಟಗಾರರ ಸ್ಥಿತಿಗತಿಗಳನ್ನು ಅರಿತು ಸೂಕ್ತವಾದ ಮಸಾಜ್‌ ನೀಡುವುದರ ಜೊತೆಗೆ ಆಟಗಾರರು ಇಂಜುರಿ ಫ್ರೀಯಾಗುವಂತೆ ಮಾಡೋದು ಇವರ ಕೆಲಸವಾಗಿದೆ.

ನವನೀತಾ ಗೌತಮ್‌ ಬಗ್ಗೆ ವಿರಾಟ್ ಕೊಹ್ಲಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದೊಂದು ವಿಶೇಷ ಅನುಭವ ಅಂದಿರೋ ವಿರಾಟ್, ನವನೀತಾ ಗೌತಮ್ ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ. ಈ ಹಿಂದೆ 2011ರಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಕಮ್‌ಬ್ಯಾಕ್ ಮಾಡುವಾಗ ಕೂಡ ನವನೀತಾ ಗೌತಮ್ ಅವರೇ, ಯುವಿಗೆ ಮಸಾಜ್ ಅಂದ್ ಫಿಟ್ನೆಸ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಸೋ ಈ ಮಹಿಳಾ ಶಕ್ತಿಯೊಂದಿಗೆ ಆರ್‌ಸಿಬಿ ಆಟಗಾರರು ಮತ್ತಷ್ಟು ಉತ್ತೇಜನದಿಂದ ಮೈದಾನಕ್ಕಳಿಯಲಿ. ಇಂಜುರಿ ಫ್ರೀಯಾಗಿ ಆಟವಾಡಲಿ ಅಂತ ಹಾರೈಸೋಣ.


ಇದನ್ನೂ ಓದಿ: ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಭಗವಂತ ಕರುಣಿಸಲಿ: ಮೋದಿಗೆ ಹೆಚ್‌ಡಿಕೆ, ಸಿದ್ದು ವಿಭಿನ್ನ ಶುಭಾಷಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights