ರಾಜ್ಯಸಭೆಯಲ್ಲಿ ಕನ್ನಡದಲ್ಲಿ ಪ್ರಾಮಾಣವಚನ ಸ್ವೀಕರಿಸಿದ ಹೆಚ್‌ಡಿಡಿ; ಹಿಂದಿ ಹೇರಿಕೆ ಸಹಿಸಲ್ಲ ಎಂದ ಸುಮಲತಾ!

ರಾಜ್ಯಸಭೆಗೆ ಆಯ್ಕೆಯಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾನುವಾರ ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿಯೇ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು.

ದೇವೇಗೌಡರು 1996 ರ ನಂತರ ಮೇಲ್ಮನೆಯ ಸದಸ್ಯರಾಗಿ ಇದೇ ಮೊದಲ ಬಾರಿಗೆ ಆಯ್ಕೆ ಯಾಗಿದ್ದಾರೆ.

ಪ್ರಮಾಣ ವಚನ ಸ್ವೀಕರಿಸುವಂತೆ ತಿಳಿಸಿದೆ ರಾಜ್ಯಸಭಾ ಅಧ್ಯಕ್ಷ, ವೆಂಕಯ್ಯ ನಾಯ್ಡು ಅವರು, “ನಮ್ಮ ಮನೆಗೆ ಉತ್ತಮ ಸೇರ್ಪಡೆ. ಮಾಜಿ ಪ್ರಧಾನಿ ಮತ್ತು ನಮ್ಮ ದೇಶದ ಹಿರಿಯ-ನಾಯಕರಲ್ಲಿ ಒಬ್ಬರು ನಮ್ಮ ಸದನಕ್ಕೆ ಬಂದಿದ್ದಾರೆ” ಎಂದು ಹೇಳಿದರು.

ಹಿಂದಿ ಹೇರಿಕೆ ಒಪ್ಪುದಿಲ್ಲ ಎಂದ ಸಂಸದೆ ಸುಮಲತಾ:

ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಲೋಕಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಶೂನ್ಯ ವೇಳೆಯಲ್ಲಿ  ಮಾತನಾಡಿದ ಸುಮಲತಾ, “ಹಿಂದಿ ಭಾಷೆಯನ್ನು ಗೌರವಿಸುತ್ತೇವೆ. ಆದರೆ ನಮ್ಮ ಮಾತೃಭಾಷೆಯಾದ ಕನ್ನಡಕ್ಕೂ ಆದ್ಯತೆ ನೀಡಬೇಕು. ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧದ ನಡುವೆಯೂ ಸರ್ಕಾರಿ ಅಧಿಕಾರಿಗಳು ಹಿಂದಿಯಲ್ಲೇ ಮಾತನಾಡಬೇಕು: ಅಮಿತ್ ಶಾ ಒತ್ತಾಯ

ಭಾರತವು ಒಕ್ಕೂಟ ವ್ಯವಸ್ಥೆ, ಇಲ್ಲಿನ ಭಾಷಾ ವೈವಿಧ್ಯತೆಯಿಂದಾಗಿ ಇಡೀ ವಿಶ್ವದಲ್ಲೇ ಒಂದು ಗುಣಮಟ್ಟದ ದೇಶವಾಗಿದೆ. ಕರ್ನಾಟಕವು ಬಹುತ್ವದ ಪರಂಪರೆ ಮತ್ತು ಸಂಪ್ರದಾಯವನ್ನು ಮೈಗೂಡಿಸಿಕೊಂಡಿದ್ದು, ಅದನ್ನು ನಾವೆಲ್ಲರೂ ಗೌರವಿಸುತ್ತಿದ್ದೇವೆ ಎಂದು ಹೇಳಿದರು.

ಕನ್ನಡವು ಸಾವಿರಾರು ವರ್ಷಗಳ ಅತ್ಯಂತ ಪುರಾತನ ಭಾಷೆಯಾಗಿದ್ದು, ಕನ್ನಡಕ್ಕೆ `ಶಾಸ್ತ್ರೀಯ ಭಾಷೆ’ ಸ್ಥಾನಮಾನದ ಗೌರವವನ್ನು ನೀಡಿದೆ. ದೇಶದ ಗಡಿಯಾಚೆಗೆ ನಮ್ಮ ಸಂಪ್ರದಾಯ ಮತ್ತು ಪ್ರಾದೇಶಿಕ ಭಾಷೆ ವಿಸ್ತರಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಭಾರತದ ಲಕ್ಷಾಂತರ ಮಂದಿಯ ಪರವಾಗಿ ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಹಿಂದಿ ಭಾಷೆ ಸಂವಹನಕ್ಕೆ ಪ್ರಮುಖ ಭಾಷೆಯಾಗಿದ್ದರೂ ಇದರ ಜೊತೆಗೆ ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ನೀಡಬೇಕು. ಹಿಂದಿ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ, ನಮ್ಮ ಮಾತೃಭಾಷೆ ಕನ್ನಡಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಕನ್ನಡದಲ್ಲೇ `ನಾವು ಕನ್ನಡಿಗರು, ಭಾರತೀಯರು’ ಎಂದ ಸಂಸದೆ, ಈ ವಿಷಯವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರಕಾರ ನೀತಿ-ನಿರೂಪಣೆಯಲ್ಲಿ, ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯ ಆಸ್ಥೆ ವಹಿಸಬೇಕು ಎಂದರು.


ಇದನ್ನೂ ಓದಿ: ಹಿಂದುಳಿದವರನ್ನು ಹೊರಗಿಟ್ಟಿದ್ದ 2000 ವರ್ಷಗಳ ಹಿಂದಿನ ಶಿಕ್ಷಣ ಪದ್ದತಿಯ ಸವಕಲು NEP: ಮಲ್ಲಿಕಾರ್ಜುನ ಖರ್ಗೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights