ಮಹಿಳಾ ನಾಯಕಿಯರು ಮುಖ್ಯಭೂಮಿಕೆಯಲ್ಲಿ ಹೋರಾಡಬೇಕು: ಡಿ.ಕೆ ಶಿವಕುಮಾರ್

ಮಹಿಳಾ ನಾಯಕಿಯರು ಪುರುಷ ನಾಯಕರ ಎದುರು ಮುಖ್ಯಭೂಮಿಕೆಯಲ್ಲಿ ಸರಿಸಮನಾಗಿ ಹೋರಾಟ ಮಾಡಬೇಕು. ನೀವು ಬರೀ ಮಹಿಳೆಯರ ಜತೆ ಸ್ಪರ್ಧೆ ಮಾಡುವ ಮನೋಭಾವವನ್ನು ಬಿಟ್ಟುಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಕ್ಷದ ಮಹಿಳಾ ನಾಯಕಿಯರಿಗೆ ಕರೆ ನೀಡಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ತೃತೀಯ ಲಿಂಗಿಗಳು ಹಾಗೂ ಮಾನವ ಹಕ್ಕು ಹೋರಾಟಗಾರ್ತಿ ಡಾ.ಅಕೈ ಪದ್ಮಶಾಲಿ ಅವರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಮಹಿಳಾ ನಾಯಕಿಯರು ಸಮಾಜದ ಮುಖ್ಯಭೂಮಿಕೆಯಲ್ಲಿ ಪುರುಷರ ಜತೆಗೂಡಿ ಹೋರಾಟ ಮಾಡಬೇಕು. ನಿಮ್ಮಲ್ಲಿರುವ ಗೊಂದಲದ ಆಲೋಚನೆಯನ್ನು ಬಿಟ್ಟು ಹೋರಾಟ ಮಾಡಲು ಮುಂದಾಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯ ಅಧಿವೇಶನ: ಚರ್ಚೆಯೇ ಇಲ್ಲದೆ ಅಂಗೀಕರಿಸುತ್ತವಾ 19 ಸುಗ್ರೀವಾಜ್ಞೆಗಳು, 40 ವಿದೇಯಕಗಳು

‘ಅಕೈ ಪದ್ಮಶಾಲಿ ಅವರು ಪಕ್ಷದ ಸಿದ್ಧಾಂತ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಪಕ್ಷ ನೀಡಿರುವ ಕೊಡುಗೆಯ ಪ್ರೇರಣೆಯಿಂದ ಕಾಂಗ್ರೆಸ್‌ ಸೇರಲು ಮುಂದೆ ಬಂದಿದ್ದಾರೆ. ಇವರನ್ನು ಮುಖ್ಯವೇದಿಕೆಯಲ್ಲಿ ದುಡಿಯಲು ಅವಕಾಶ ಮಾಡಿಕೊಡಬೇಕು.  ಅವರು ಕೇವಲ ಒಬ್ಬರು ಬಂದಿಲ್ಲ. ಅವರ ಸಮುದಾಯದ ಶಕ್ತಿಯನ್ನು ತಂದಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಅಕೈ ಪದ್ಮಶಾಲಿ ಕಾಂಗ್ರೆಸ್ ಸೇರ್ಪಡೆ – EESANJE / ಈ ಸಂಜೆ

‘ಯಾರು ತಳಮಟ್ಟದಲ್ಲಿ ಜನರ ಮಧ್ಯೆ ಇದ್ದು, ಅವರ ಕಷ್ಟಕ್ಕೆ ಸ್ಪಂಧಿಸಿ ಧ್ವನಿಯಾಗುತ್ತಾರೋ ಅವರನ್ನು ಮಾತ್ರ ನಾನು ನಾಯಕರು ಎಂದು ಪರಿಗಣಿಸುತ್ತೇನೆ. ಏಕಾಂಗಿ ಯೋಧರೆಲ್ಲ ನಾಯಕರಾಗಲು ಸಾಧ್ಯವಿಲ್ಲ. ನನ್ನ ಮುಂದೆ ಸುತ್ತಾಡುವವರನ್ನು ನಾಯಕರೆಂದು ಒಪ್ಪುವುದಿಲ್ಲ. ಶಿಫಾರಸ್ಸಿನ ಮೇಲೆ ಹುದ್ದೆ ಪಡೆದವರು ಆ ಹುದ್ದೆಯಲ್ಲಿ ಇರುವವರೆಗೂ ಮಾತ್ರ ನಾಯಕರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಂಘಟನೆಗಳ ಐಕ್ಯ ಹೋರಾಟ: ಬೆಂಗಳೂರಿ‌ನಲ್ಲಿ ಜನತಾ ಅಧಿವೇಶನ

‘ಕಾಂಗ್ರೆಸ್ ಪಕ್ಷ ತೃತೀಯ ಲಿಂಗದವರಿಗೆ ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದೆ. ಅವರ ವಿಚಾರಧಾರೆಯನ್ನು ಒಪ್ಪಿ ನಾವು ಅವರಿಗೆ ಕಾರ್ಯಕ್ರಮ ನೀಡಿದ್ದೆವು. ಮುಂದಿನ ದಿನಗಳಲ್ಲೂ ಆ ನೊಂದ ಜನರಿಗೆ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಲು ಕೆಲಸ ಮಾಡುತ್ತೇವೆ. ನಾವು ಅವರ ಸ್ಥಾನದಲ್ಲಿ ನಿಂತು ಯೋಚಿಸಬೇಕು. ಅವರಿಗೆ ಸಮಾನತೆ ನೀಡುವುದು ನಮ್ಮ ಧರ್ಮ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ವ್ಯಾಪಕ ಚರ್ಚೆ ಮಾಡಿ ಅವರ ಜತೆ ಪಕ್ಷ ನಿಲ್ಲಬೇಕು ಎಂದು ನಿರ್ಧರಿಸಿದ್ದಾರೆ. ಅಕೈ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಆ ಸಮುದಾಯದ ಒಳಿತಿಗಾಗಿ ಪಕ್ಷ ಶ್ರಮಿಸಲಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ, ಜಯಮಾಲ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಸೌಮ್ಯ ರೆಡ್ಡಿ ಹಾಗೂ ಇತರರು ಇದ್ದರು.


ಇದನ್ನೂ ಓದಿ: ಶಿರಾದಲ್ಲಿ ದೇವೇಗೌಡ, ಕುಮಾರಸ್ವಾಮಿಯೇ ಸ್ಪರ್ಧಿಸಿದರೂ ಗೆಲವು ಜಯಚಂದ್ರರದ್ದೇ: ಕೆಎನ್‌ ರಾಜಣ್ಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights