ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಮೆಜಾರಿಟಿ ಇಲ್ಲ, ಭೂಸುಧಾರಣೆ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ: ಸಿದ್ದರಾಮಯ್ಯ

ರೈತರ ಹಕ್ಕುಗಳ ಜೊತೆಗೆ ಅವರ ಭೂಮಿಯನ್ನೂ ಕಸಿದುಕೊಳ್ಳಲು ಮುಂದಾಗಿರುವರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ತೀವ್ರವಾಗಿ ವಿರೋಧಿಸುತ್ತೇವೆ. ಅಲ್ಲದೆ, ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆಅಗತ್ಯ ಮೆಜಾರಿಟಿಇಲ್ಲ. ಹಾಗಾಗಿ ವಿಧಾನ ಪರಿಷತ್‌ನಲ್ಲಿ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ, ಅಂಗೀಕಾರ ಸಾಧ್ಯವೇಇಲ್ಲಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸುಗ್ರೀವಾಜ್ಞೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತ, ದಲಿತ, ಕಾರ್ಮಿಕರಐಕ್ಯ ಹೋರಾಟ ಮತ್ತುಜನತಾಅಧಿವೇಶನವನ್ನು ಬೆಂಬಲಿಸಿ ಹೋರಾಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು.

ದೇಶದಲ್ಲಿರುವ ಕೃಷಿಕರು ಮತ್ತು ಕಾರ್ಮಿಕರಿಗೂ ಭೂಮಿಗೂ ತಲೆತಲಾಂತರದ ಸಂಭAಧವಿದೆ. ಸಮಾಜದಲ್ಲಿ ಇವತ್ತು ನಾವು ಕರೆಯುವ ಪ್ರೈಮರಿ, ಸೆಕೆಂಡರಿ ಸೆಕ್ಟರ್‌ಗಳು ಇರಲಿಲ್ಲ, ಕೈಗಾರಿಕೆಗಳು ಸರ್ವಿಸ್ ಸೆಂಕ್ಟರ್‌ಗಳು ಇರಲಿಲ್ಲ. ಕೃಷಿಯೇ ಮೂಲ ಆಧಾರವಾಗಿತ್ತು. ರಾಜರು, ಪಾಳೆಗಾರರ ಕಾಲದಲ್ಲೂ ಕೃಷಿಯೇ ಮೂಲ  ಆಧಾರವಾಗಿತ್ತು. ಕಾಲಾನಂತರ ಸೇವಾ ವಲಯ ಬಂದವು.ಅದರೂ ಈಗಲೂ ಕೈಗಾರಿಕಾ ವಲಯದ ಆದಾಯಗಳು ಕಡಿಮೆಯಾಗಿವೆ. ದೇಶಕ್ಕೆ ಸೇವಾ ವಲಯದ ಆದಾಯ 20% ಇದೆ. ಕೃಷಿ ವಲಯದಆದಾಯ 27-28%ಇದೆಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲ್ಲಿ ಪಾಲೇಗಾರರು, ಇನಾಮುದಾರರ ಒಡೆತನವಿರುತ್ತಿತ್ತು. ಅವರು ರೈತರು, ಕೃಷಿ ಕೂಲಿ ಕಾರ್ಮಿಕರ ಶ್ರಮದ ಲಾಭವನ್ನು ಲಾಭವನ್ನು ಅನುಭವಿಸುತ್ತಿದ್ದರು. ಈಗ, ಸರ್ಕಾರ ರೈತರ ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ಕೊಟ್ಟು ರೈತರನ್ನು ಗುಲಾಮರನ್ನಾಗಿಸಲು ಮುಂದಾಗಿದೆ ಎಂದು ಅವರು ಅರೋಪಿಸಿದ್ದಾರೆ.

ರೈತರಿಗೆ ಭೂಮಿ ನೀಡುವ ಉದ್ದೇಶದಿಂದ 1961 ರಲ್ಲಿ ಭೂಮಿ ಮರುಹಂಚಿಕೆ ಕಾಯ್ದೆ ಜಾರಿ ಮಾಡಲಾಗಿತ್ತು. ಅದಕ್ಕೆ 1974ರಲ್ಲಿ ದೇವರಾಜ್ ಅರಸು ತಿದ್ದುಪಡಿ ತಂದು ಉಳುವವನೇ ಭೂಮಿಯ ಒಡೆಯಎಂದು ಘೋಷಿಸಿದರು. ಅನುಚ್ಛೇದ 63ರ ಪ್ರಕಾರಒಬ್ಬರಿಗೆ 10,20,30 ಯೂನಿಟ್ ಇರಬೇಕು ಅದಕ್ಕಿಂತ ಜಾಸ್ತಿ ಇರಬಾರದು ಎಂದು ಹೇಳಲಾಗಿತ್ತು. ಆದರೆ, ಈಗ ಅದನ್ನು ಡಬಲ್ ಮಾಡುವುದಲ್ಲದೆ, ಯಾರು ಹೇಗೆ ಬೇಕಾದರೂ ರೈತರ ಭೂಮಿಯನ್ನು ಕಸಿದುಕೊಳ್ಳವಂತಹ ತಿದ್ದುಪಡಿತಂದಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸುಮಾರು ನಡೆಯುತ್ತಿದೆ. ನರೇಂದ್ರ ಮೋದಿಯವರ ಆಡಳಿತವು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ. ಅವರು ನಮ್ಮ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ನಮ್ಮ ದನಿಯನ್ನು ದಮನಿಸಲು ಇವರಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಈ ಮಸೂದೆ ಅಂಗೀಕಾರವಾಗಲು ಬಿಡಬಾರದು, ಮಂಡನೆ ಮಾಡಲು ಅವಕಾಶ ನೀಡಬಾದರು. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಮೆಜಾರಿಟಿಗಿಂತ ಕಾಂಗ್ರೆಸ್‌, ಜೆಡಿಎಸ್‌ ಬಲ ಹೆಚ್ಚಿದೆ. ಎರಡೂ ಪಕ್ಷಗಳು ಜೊತೆಗೂಡಿ ಮಸೂದೆ ಅಂಗೀಕಾರಕ್ಕೆ ಅವಕಾಶ ಕೊಡದಂತೆ ಪ್ರತಿಭಟನೆ ನಡೆಸಲು ಹೇಳುತ್ತೇವೆ. ಈ ಮಸೂದೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights