ಸ್ಕಿಪ್ಪಿಂಗ್ ಹಗ್ಗಗಳಿಂದ ಸ್ಟಂಟ್..! : ನಾಲ್ಕು ಜನರ ಅದ್ಬುತ ಸಾಹಸಕ್ಕೆ ಜೈ ಎಂದ ನೆಟ್ಟಿಗರು!

ವೈರಲ್ ವೀಡಿಯೊದಲ್ಲಿ ಸ್ಕಿಪ್ಪಿಂಗ್ ಹಗ್ಗಗಳಿಂದ ನಾಲ್ಕು ಹುಡುಗರು ನಂಬಲಾಗದ ಸಾಹಸಗಳನ್ನು ಮಾಡಿ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡಿದ್ದಾರೆ.

ಹೌದು… ನಾಲ್ಕು ಹುಡುಗರ ಗುಂಪು ಹಲವಾರು ಸ್ಕಿಪ್ಪಿಂಗ್ ಹಗ್ಗಗಳಿಂದ ವಿವಿಧ ಸ್ಟಂಟ್ ಪ್ರದರ್ಶಿಸಿದೆ. ಅವರ ಸ್ಟಂಟ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂದಹಾಗೆ ಅಂತರರಾಷ್ಟ್ರೀಯ ಮಟ್ಟದ ಜಂಪ್ ರೋಪ್ ಅಥ್ಲೀಟ್ ಜೊರಾವರ್ ಸಿಂಗ್ ತನ್ನ ಮೂವರು ಸ್ನೇಹಿತರೊಂದಿಗೆ ಈ ಅದ್ಬುತವಾದ ಸ್ಟಂಟ್ ಮಾಡಿದ್ದಾರೆ.

ಕ್ಲಿಪ್ನಲ್ಲಿ ನಾಲ್ಕು ಹುಡುಗರಲ್ಲಿ ಇಬ್ಬರ ಇನ್ನಿಬ್ಬರ ಹೆಗಲ ಮೇಲೆ ಕುಳಿತು ಸ್ಕಿಪ್ಪಿಂಗ್ ಹಗ್ಗಗಳೊಂದಿಗೆ ವಿಭಿನ್ನ  ಸಾಹಸಗಳನ್ನು ಮಾಡಿದರು. ಇಬ್ಬರು ಹುಡುಗರು ಇತರ ಇಬ್ಬರ ಹೆಗಲ ಮೇಲೆ ಕುಳಿತುಕೊಂಡು ನೇರವಾಗಿ ಸ್ಕಿಪ್ಪಿಂಗ್ ಮಾಡುತ್ತಾರೆ.

“ಪಿರಮಿಡ್ ವ್ಹೀಲ್ ಫ್ರೀಸ್ಟೈಲ್ ಜಂಪ್ ರೋಪ್. ಆರು ವರ್ಷಗಳ ಸಮರ್ಪಿತ ಶ್ರಮದಿಂದ, ಅದ್ಭುತ ಜಂಪ್ ರೋಪ್ # ಪ್ರತಿಭೆಯನ್ನು ಈಗ ನಮ್ಮಿಂದ ಪ್ರದರ್ಶಿಸಲಾಗುತ್ತಿದೆ” ಎಂದು ಜೊರಾವರ್ ಸಿಂಗ್ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

ವೀಡಿಯೊವನ್ನು ಇಲ್ಲಿ ನೋಡಿ:

ಜೊರಾವರ್ ಅವರ ಸ್ಟಂಟ್ ನಿಂದಾಗಿ ಅಂತರ್ಜಾಲ ಪ್ರಭಾವಿತವಾಗಿದೆ ಮತ್ತು ಕಾಮೆಂಟ್ಗಳ ವಿಭಾಗ  ಮೆಚ್ಚುಗೆಯ ಮಾತುಗಳಿಂದ ತುಂಬಿದೆ.

“ಸರ್, ನೀವು ನಿಜವಾಗಿಯೂ ಅದ್ಭುತವಾಗಿದ್ದೀರಿ” ಎಂದು ಬಳಕೆದಾರರು ಹೇಳಿದರು. ಇತರರು ಥಂಬ್ಸ್-ಅಪ್ ಎಮೋಟಿಕಾನ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಕಾಮೆಂಟ್ “ನಂಬಲಾಗುತ್ತಿಲ್ಲ” ಎಂದು ಬರೆಯಲಾಗಿದೆ.

ಕಾಮೆಂಟ್ಗಳನ್ನು ಇಲ್ಲಿ ನೋಡಿ:

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights