ಸಿರಾದಲ್ಲಿ ಕಮಲ ಅರಳಿಸಲು ತಂತ್ರ: ಜಾತಿ ರಾಜಕಾರಣಕ್ಕಿಳಿದ ಬಿಜೆಪಿ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಶಿರಾದಲ್ಲಿ ಕಮಲ ಅರಳಿಸಲು ತಂತ್ರ ಎಣೆಯುತ್ತಿದೆ. ಈಗಾಗಲೇ ಶಿರಾ ಉಪಚುನಾವಣೆಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ್ದು, ಚುನಾವಣಾ ಪ್ರಚಾರ ಗರಿಗೆದರಿದೆ. ಆದರೆ, ಇನ್ನೂ ಅಭ್ಯರ್ಥಿಯನ್ನೇ ಆಯ್ಕೆ ಮಾಡದ ಬಿಜೆಪಿ, ಜಾತಿ ಲೆಕ್ಕಾಚಾರದ ತಂತ್ರದೊಂದಿಗೆ ಕಣಕ್ಕಿಳಿಯಲು ಸಿದ್ದತೆ ನಡೆಸಿಕೊಂಡಿದೆ.

ಶಿರಾದಲ್ಲಿ ಪ್ರಭಲವಾಗಿರುವ ಕುಂಚಿಟಿಗ ಒಕ್ಕಲಿಗರು ಮತ್ತು ಗೊಲ್ಲ ಸಮುದಾಯವನ್ನು ಸೆಳೆಯುವ ಕಾರ್ಯತಂತ್ರವನ್ನು ಬಿಜೆಪಿ ಸರ್ಕಾರ ಎಣೆಯುತ್ತಿದೆ. ಶಿರಾ ಕ್ಷೇತ್ರದಲ್ಲಿ  ಗೊಲ್ಲ ಸಮುದಾಯದ ಸುಮಾರು 40 ಸಾವಿರ ಮತಗಳಿವೆ. ಅಲ್ಲದೆ, 50 ಸಾವಿರ ಕುಂಚಿಟಿಗ ಒಕ್ಕಲಿಗರ ಮತಗಳಿವೆ.  ಶಿರಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಘೋಷಣೆ ಮಾಡಿದೆ.

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದಿಳಿದಿರುವ ಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ಕಾಡು ಗೊಲ್ಲ ಅಭಿವೃದ್ದಿ ನಿಗಮವನ್ನು ರಚಿಸಿರುವ ಬಿಜೆಪಿ ಸರ್ಕಾರ, ನಿಗಮಕ್ಕೆ 50 ಕೋಟಿ ರೂ ಅನುದಾನವನ್ನೂ ಬಿಡುಗಡೆ ಮಾಡಿದೆ. ಈ ಮೂಲಕ ಗೊಲ್ಲ ಸಮುದಾಯದ ಓಟುಗಳನ್ನು ಸೆಳೆಯುವ ಕಸರತ್ತು ನಡೆಸುತ್ತಿದೆ.

Read Also: ಸಚಿವ ಶ್ರೀ ರಾಮುಲು ಇಂದ ಆರೋಗ್ಯ ಇಲಾಖೆ ಕಸಿದುಕೊಂಡ ಬಿಎಸ್‌ವೈ! ಸಂಪುಟದಲ್ಲಿ ನಡೀತ್ತಿದ್ಯಾ ಸರ್ಜರಿ

ಕಳೆದ ಬಾರಿ ಕುಂಚಿಟಿಗರ ಮತದ ಬಹುಪಾಲು ಜೆಡಿಎಸ್ ನ ಸತ್ಯನಾರಾಯಣ್​​ಗೆ ಒಲಿದಿತ್ತು. ಹಾಗಾಗಿ ಸತ್ಯನಾರಾಯಣ್ ಗೆದ್ದಿದ್ದರು. ಈ ಬಾರಿ ಕುಂಚಿಟಿಗರನ್ನು ಸೆಳೆಯಲು ಯತ್ನಿಸುತ್ತಿರುವ ಬಿಜೆಪಿ, ಜನರಲ್ ಕೆಟಗೆರಿಯಲ್ಲಿರುವ ಕುಂಚಿಟಿಗರನ್ನು  ಓಬಿಸಿ ಕ್ಯಾಟಗರಿಗೆ ಸೇರಿಸಲು ಮುಂದಾಗಿದೆ. ಈ ಓಬಿಸಿ ಕ್ಯಾಟಗರಿಗೆ ಸೇರಿಸುವ ಬಗ್ಗೆ ಹೇಳಿಕೆ ನೀಡಿರುವ ಸಂಸದ ಪ್ರತಾಪ್‌ ಸಿಂಹ, ಕುಂಚಿಟಿಗರನ್ನು ಓಬಿಸಿ ಕ್ಯಾಟಗರಿಗೆ ಸೇರಿಸುವುದರಿಂದ ಐಎಎಸ್. ಐಎಫ್ ಎಸ್ ಓದುವ ಕುಂಚಿಟಿಗ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಪ್ರಸ್ತಾಪಸಿದ್ದಾರೆ. ಆದರೂ, ಕುಂಚಿಗರ ಮತಗಳ ಬಹುಪಾಲು ಜೆಡಿಎಸ್‌ ತೆಕ್ಕೆಗೆ ಬೀಳುವುದು ಸಹಜವಾಗಿದೆ.

ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಂಡ್ಯದ ಕೆಆರ್‌ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡರನ್ನು ಮುಂದಿಟ್ಟುಕೊಂಡು ತನ್ನ ಖಾತೆ ತೆರೆದಿರುವ ಬಿಜೆಪಿ, ಶಿರಾದಲ್ಲಿಯೂ ಮೊದಲ ಬಾರಿಗೆ  ಕಮಲ ಅರಳಿಸಲು ಯತ್ನಿಸುತ್ತಿದೆ.


Read Also: ಜಾಲತಾಣಿಗರಿಂದ ಅಜಿತ್‌ ಹನುಮಕ್ಕನವರ್‌ ಟ್ರೋಲ್‌; ಟ್ರೆಂಡಿಂಗ್‌ನಲ್ಲಿ “ಏಜೆಂಟ್‌ ಅಜಿತ್”

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights