ರಸ್ತೆ ಅಭಿವೃದ್ಧಿ ಹೆಸರಿನಲ್ಲಿ 8 ಕೋಟಿ ಲೂಟಿ! ತನಿಖೆಗೆ ಬಿಬಿಎಂಪಿ ಆಡಳಿತಾಧಿಕಾರಿ ಆದೇಶ!

ಮೊದಲೇ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಮತ್ತೆ ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ 8 ಕೋಟಿ ಹಣವನ್ನು ಬಿಬಿಎಂಪಿ ಅಕಾರಿಗಳು ದುಂದುವೆಚ್ಚ ಮಾಡಲು ಮುಂದಾಗಿದ್ದಾರೆ ಎಂಬ ಆರೋಪದ ಪ್ರಕರಣವನ್ನು ಟಿವಿಸಿಸಿ ತನಿಖೆಗೆ ಬಿಬಿಎಂ ಆಡಳಿಧಿತಾಕಾರಿ ಆದೇಶಿಸಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.177 ಮತ್ತು 178ರ ವ್ಯಾಪ್ತಿಗೆ ಬರುವ 10 ರಸ್ತೆಗಳನ್ನು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈ 10 ರಸ್ತೆಗಳೂ ಮೊದಲೇ ಅತ್ಯಂತ ಸುಸ್ಥಿತಿಯಲ್ಲಿದ್ದವು. ಆದರೆ, ಜಯನಗರ ಕಾರ್ಯಪಾಲಕ ಅಭಿಯಂತರರು (ಎಕ್ಸಿಕೇಟಿವ್‌ ಎಂಜಿನಿಯರ್) ಹಾಗೂ ಜೆಪಿ ನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು (ಅಸಿಸ್ಟಂಟ್‌ ಎಕ್ಸಿಕೇಟಿವ್ ಎಂಜಿನಿಯರ್) ಮತ್ತೆ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಅಲ್ಪಾವಧಿ ಟೆಂಡರ್ ಕರೆದಿದ್ದಾರೆ.

ಸುಸ್ಥಿತಿಯಲ್ಲಿರುವ ರಸ್ತೆಗಳ ಹೆಸರಿನಲ್ಲಿ ಅಭಿಯಂತರರು ಪೂರ್ವ ನಿಗದಿತ ಗುತ್ತಿಗೆದಾರರೊಂದಿಗೆ ಶಾಮೀಲಾಗಿ 8 ಕೋಟಿ ರೂ.ಗಳ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ ಪ್ರಸಾದ್ ಅವರಿಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಆದರೆ ರಮೇಶ್ ನೀಡಿದ ದಾಖಲೆಗಳನ್ನು ಪರಿಶೀಲಿಸಿದ ಆಡಳಿತಾಕಾರಿ ಗೌರವ್ ಗುಪ್ತ ಅವರು ಮೇಲ್ನೋಟಕ್ಕೆ 10 ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಇಡೀ ಪ್ರಕರಣವನ್ನು ಟಿವಿಸಿಸಿ ತನಿಖೆಗೆ ವಹಿಸಿ ಆದೇಶಿಸಿದ್ದಾರೆ.


ಇದನ್ನೂ ಓದಿ: ಮಾಂಸಾಹಾರಿ ಪ್ರಾಣಿಗಳಿಗೆ ಗೋಮಾಂಸ ನೀಡದಂತೆ ಬಿಜೆಪಿ ಪ್ರತಿಭಟನೆ: ಹುಲಿಗಳಿಂದ ವ್ರತ ಮಾಡಿಸಿಯೆಂದು ಟ್ರೋಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights