ಒಂದೇ ದಿನ ರಾಜ್ಯದಲ್ಲಿ 8,191 ಕೊರೊನಾ ಕೇಸ್ : 87 ಸೋಂಕಿತರು ಸಾವು…!

ರಾಜ್ಯದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುವ ಲಕ್ಷಣಗಳೇ ಕಾಣ ಸಿಗುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಜನರ ನೆಮ್ಮದಿ ಹಾಳು ಮಾಡಿದೆ. ಅಷ್ಟೇ ಅಲ್ಲ ಸಾವಿನ ಸಂಖ್ಯೆ ಕೂಡ ಪ್ರತಿನಿತ್ಯ ಅಧಿಕವಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 8,191 ಮಂದಿಗೆ ಕೊರೊನಾ ತಗುಲಿದ್ದು, 87 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 10,421 ಮಂದಿ ಆಸ್ಪತ್ರೆ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.

ರಾಜ್ಯದಲ್ಲಿ ಈವರೆಗೆ ಒಟ್ಟು 7,26,106ಕ್ಕೆ ಏರಿಕೆಯಾಗಿದ್ದು, 1,13,459 ಸಕ್ರಿಯ ಪ್ರಕರಣಗಳಿವೆ. 6,02,505 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇವರಲ್ಲಿ 919 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 61.37.221 ಪರೀಕ್ಷೆ ಮಾಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights