ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣ ಹೈಟೆಕ್‌ ಕ್ಲಾಸ್‌ರೂಂಗಳನ್ನು ಹೋಂದಿರುವ ಏಕೈಕ ರಾಜ್ಯ ಕೇರಳ: ಪಿಣರಾಯಿ ವಿಜಯನ್‌

ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಕ್ಲಾಸ್‌ರೂಂಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕೇರಳ ಪಡೆದುಕೊಂಡಿದೆ. ರಾಜ್ಯದ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಿಸಿದ್ದಾರೆ.

“ಇದು ನಮ್ಮ ರಾಜ್ಯದ ಸಾಧನೆಯಾಗಿದ್ದು ಅದು ಮುಂದಿನ ಪೀಳಿಗೆಗೆ ಪ್ರಯೋಜನವನ್ನು ನೀಡುತ್ತದೆ. ಎಲ್‌ಡಿಎಫ್(ಕಮ್ಯುನಿಷ್ಟ್ ಮಿತ್ರ ಕೂಟ) ಸರ್ಕಾರ ಈ ಯೋಜನೆಯನ್ನು ಮುನ್ನಡೆಸಿದೆ” ಎಂದು ಮುಖ್ಯಮಂತ್ರಿ ಕೇರಳವನ್ನು ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಡಿಜಿಟಲ್ ಆಗಿ ಮಾರ್ಪಡಿಸಿದ ಮೊದಲ ರಾಜ್ಯವೆಂದು ಘೋಷಿಸಿದರು.

“ಕಳೆದ 5 ವರ್ಷಗಳಲ್ಲಿ 5 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಸೇರಿದ್ದಾರೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಜನರ ಧೋರಣೆ ಬದಲಾಗಿದೆ. ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ಶಾಲೆಗಳನ್ನು ಅಂತರರಾಷ್ಟ್ರೀಯ ಮಾನದಂಡಗಳಂತೆ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಹಳ್ಳಿಯ ಶಾಲೆಯು ವಿಶ್ವದ ಯಾವುದೇ ಭಾಗದ ಅತ್ಯುತ್ತಮ ಶಾಲೆಯಂತೆಯೇ ಇರಬೇಕು” ಎಂದು ಅವರು ಹೇಳಿದ್ದಾರೆ.

ರಾಜ್ಯದ ಎಲ್ಲ ಮಕ್ಕಳು ಹೊಸ ತಂತ್ರಜ್ಞಾನಗಳ ಮೂಲಕ ಶಿಕ್ಷಣವನ್ನು ಪಡೆಯಬಹುದು ಎಂದು ಮುಖ್ಯಮಂತ್ರಿ ಪಿಣರಾಯಿ ಹೇಳಿದ್ದಾರೆ. “ಇದು ಹೆಮ್ಮೆಯ ಸಾಧನೆಯಾಗಿದ್ದು, ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರ ದೃಡ ನಿರ್ಧಾರವಾಗಿತ್ತು. ಪ್ರವಾಹಗಳು ಮತ್ತು ಭೀಕರ ಸಾಂಕ್ರಾಮಿಕ ರೋಗಗಳ ಹೊರತಾಗಿಯೂ, ನಾವು ಆ ಗುರಿಯನ್ನು ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ, ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಉನ್ನತ ಎತ್ತರಕ್ಕೆ ಏರಬಹುದು” ಎಂದು ಅವರು ಹೇಳಿದ್ದಾರೆ.

ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ ಒದಗಿಸಿದ ಹಣವನ್ನು ಬಳಸಿಕೊಂಡು ಸ್ಮಾರ್ಟ್ ಕ್ಲಾಸ್‌ರೂಮ್ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಕೈಟ್ ಸಂಸ್ಥೆ ಜಾರಿಗೆ ತಂದಿದೆ.

ಯೋಜನೆಯಲ್ಲಿ 16,027 ಶಾಲೆಗಳಲ್ಲಿ 3,74,274 ಡಿಜಿಟಲ್ ಉಪಕರಣಗಳನ್ನು ವಿತರಿಸಲಾಗಿದ್ದು, ಮೊದಲ ಹಂತದಲ್ಲಿ 4752 ಪ್ರೌಡ ಶಾಲೆಗಳು ಮತ್ತು ಹೈಯರ್ ಸೆಕೆಂಡರಿ ಶಾಲೆಗಳಲ್ಲಿ 45,000 ಹೈಟೆಕ್ ತರಗತಿ ಕೊಠಡಿಗಳು ಅಸ್ತಿತ್ವಕ್ಕೆ ಬಂದವು. ಏIIಈಃ ನೆರವಿನ ಹೊರತಾಗಿ, ಶಾಸಕರಿಗಾಗಿ ಮೀಸಲಿಟ್ಟ ಅನುದಾನಗಳನ್ನು ಬಳಸಿ 11,275 ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳಲ್ಲಿ 45,000 ಹೈಟೆಕ್ ತರಗತಿ ಕೊಠಡಿಗಳು ಮತ್ತು ಲ್ಯಾಬ್‌ಗಳಿಗೆ ಸಿದ್ಧಪಡಿಸಲಾಗಿದೆ.


Read Also: ಕೇರಳ: ಕಾಂಗ್ರೆಸ್ ನೇತೃತ್ವದ UDF ಕೂಟ ತೊರೆದು ಕಮ್ಯುನಿಸ್ಟ್‌ ಮೈತ್ರಿ ಸೇರಿದ ಕಾಂಗ್ರೆಸ್ (ಎಂ)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights