ತೆಲಂಗಾಣ ಮಳೆ : 50ಕ್ಕೇರಿದ ಸಾವಿನ ಸಂಖ್ಯೆ : 6,000 ಕೋಟಿ ಹಾನಿ..!

ತೆಲಂಗಾಣದಲ್ಲಿ ವರುಣನ ಅರ್ಭಟ ಜೋರಾಗಿದ್ದು ಅಪಾರ ಆಸ್ತಿ-ಪಾಸ್ತಿ ಹಾನಿಗೊಳಗಾಗಿದೆ. ಬಹುತೇಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಬೀದಿಪಾಲಾಗಿದ್ದಾರೆ. ರಸ್ತೆಗಳು ನದಿಗಳಂತಾಗಿ ಸಂಚಾರ ವ್ಯವಸ್ಥೆ ಬಹುತೇಕ ಸ್ಥಗಿತಗೊಂಡಿದೆ.

ಮಂಗಳವಾರ ಹೈದರಾಬಾದ್‌ನ ಹಾದಿಗಳು ಮತ್ತು ರಸ್ತೆಗಳು ನದಿಗಳಾಗಿ ಮಾರ್ಪಟ್ಟಾಗ ಕುಟುಂಬವೊಂದರ ಒಂಬತ್ತು ಸದಸ್ಯರು ಕೊಚ್ಚಿ ಹೋಗಿದ್ದಾರೆ. ಇವರ ಪೈಕಿ ಮೂರು ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಗು ಸೇರಿದಂತೆ ಇತರ ಐದು ಮಂದಿಗೆ ಶೋಧ ನಡೆಯುತ್ತಿದೆ. ಇವರಲ್ಲಿ ಬದುಕುಳಿದವರು 55 ವರ್ಷದ ಮೊಹಮ್ಮದ್ ಅಬ್ದುಲ್ ತಾಹಿರ್ ಖುರೇಷಿ ಮಾತ್ರ. ಗ್ರೇಟರ್ ಹೈದರಾಬಾದ್ ಪ್ರದೇಶದಲ್ಲಿ ಮಾತ್ರ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ.

ಎರಡು ದಿನಗಳ ನಂತರ ತೆಲಂಗಾಣದಲ್ಲಿ ಮಳೆಗೆ ಕನಿಷ್ಠ 50 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುಮಾರು 6,000 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಹಾನಿಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಭೆ ನಡೆಸಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ತಕ್ಷಣವೇ 3 1,350 ಕೋಟಿ ಬಿಡುಗಡೆ ಮಾಡುವಂತೆ ಪ್ರಧಾನಿ ನಾಗೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ರಾಜ್ಯ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮಾತನಾಡಿ, ಮುಳುಗಿದ ಪ್ರದೇಶಗಳಿಂದ ನೀರನ್ನು ಹೊರಹಾಕಲು ಮತ್ತು ಸಾಮಾನ್ಯ ಸಂಚಾರವನ್ನು ಪುನಃಸ್ಥಾಪಿಸಲು ಪರಿಹಾರ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

64 ಪರಿಹಾರ ಶಿಬಿರಗಳಲ್ಲಿ ಸುಮಾರು 44,000 ಜನರನ್ನು ಇರಿಸಲಾಗಿದ್ದು 45,000 ಆಹಾರ ಪ್ಯಾಕೆಟ್‌ಗಳನ್ನು ಒದಗಿಸಲಾಗಿದೆ ಎಂದು ಸುದ್ದಿ ಪ್ರಕಟಣೆ ಉಲ್ಲೇಖಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights