ಕಾಡಾನೆಗಳಿಗೆ ಡಿಕ್ಕಿಹೊಡೆದು ಕೊಂದ ರೈಲು: ಎಂಜಿನ್‌ ಸೀಜ್‌ ಮಾಡಿದ ಅರಣ್ಯ ಅಧಿಕಾರಿಗಳು

ಕಾಡಿನ ಹೆಣ್ಣು ಆನೆ ಮತ್ತು ಅದರ ಮರಿಯನ್ನು ರೈಲು ಅಪಘಾತದಲ್ಲಿ ಕೊಂದಿದ್ದ ರೈಲಿನ ಎಂಜಿನ್‌ಅನ್ನು ಅಸ್ಸಾಂ ಅರಣ್ಯ ಅಧಿಕಾರಿಗಳು ಸೀಜ್‌ ಮಾಡಿ ವಶಪಡಿಸಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಕಾಡು ಪ್ರಾಣಿಗಳನ್ನು ರೈಲು ಅಪಘಾತದಲ್ಲಿ ಕೊಂದ ಘಟನೆಯ ಬಗ್ಗೆ ದೂರು ದಾಖಲಿಸಲಾಗಿದ್ದು, ರೈಲಿನ ಎಂಜಿನ್‌ಅನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 26 ಮತ್ತು ಸೆಪ್ಟೆಂಬರ್ 27 ರ ಮಧ್ಯರಾತ್ರಿಯಲ್ಲಿ ಅಸ್ಸಾಂನ ಹೊಜೈ ಜಿಲ್ಲೆಯ ಲುಮ್ಡಿಂಗ್ನ ಕಾಡಿನ ಬಳಿ ಹೆಣ್ಣು ಆನೆ ಮತ್ತು ಅದರ ಮರಿ ಸರಕು ಸಾಗಾಟದ ರೈಲಿನ ಅಪಘಾತದಿಂದ ಸಾವನ್ನಪ್ಪಿತ್ತು. ರೈಲು ಹಳಿಯನ್ನು ಕ್ರಾಸ್‌ ಮಾಡುವ ಸಂದರ್ಭ ಈ ಘಟನೆ ನಡೆದಿತ್ತು. ಅಪಘಾತದ ಪರಿಣಾಮ ರೈಲು ಒಂದು ವರ್ಷದ ಮರಿ ಆನೆಯನ್ನು ಸುಮಾರು ಒಂದು ಕಿಲೋಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಫಿ ತೋಟದ ರಕ್ಷಣೆಗಾಗಿ ಆನೆಗಳಿಗೆ ಸಾವಿರಾರು ಕೆಜಿ ಹಲಸಿನಹಣ್ಣು ನೀಡುತ್ತಿರುವ ರೈತ!

ಅಪಘಾತದಲ್ಲಿ ಆನೆಗಳನ್ನು ಕೊಂದ ರೈಲಿನ ಎಂಜಿನನ್ನು ಅಸ್ಸಾಂನ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗುವಾಹಟಿಯಲ್ಲಿರುವ ರೈಲು ಶೆಡ್‌ಗೆ ತೆರಳಿದ ಅರಣ್ಯ ಅಧಿಕಾರಿಗಳು ರೈಲಿನ ಎಂಜಿನನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972 ರ ಪ್ರಕಾರ ವಶಪಡಿಸಿಕೊಂಡಿರುವ ಎಂಜಿನನ್ನು ಸಾಕ್ಷ್ಯವಾಗಿ ಬಳಸಲಾಗುವುದು ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

ಅಲ್ಲದೇ ಅಪಘಾತ ಸಂಭವಿಸಿದ ಸ್ಥಳ ಆನೆ ಕಾರಿಡಾರ್‌ ಆಗಿದ್ದು ರೈಲುಗಳು ತಮ್ಮ ವೇಗವನ್ನು ಗಂಟೆಗೆ 40 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸುವಂತೆ ನಿಬಂಧನೆ ಇದೆ. ಇನ್ನು ಅಪಘಾತ ಸಂಭವಿಸುವ ವೇಳೆ ರೈಲು 60 ಕಿ.ಮೀ ವೇಗದಲ್ಲಿ ಇತ್ತು ಎಂದು ಅರಣ್ಯ ಅಧಿಕಾರಿಗಳು ಆರೋಪಿಸಿದ್ದು, ಪೊಲೀಸ್‌ ದೂರು ಕೂಡ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.

ರೈಲು ಅಪಘಾತದಲ್ಲಿ ಆನೆಗಳನ್ನು ಕೊಂಡ ರೈಲಿನ ಪೈಲಟ್ ಮತ್ತು ಅವರ ಸಹಾಯಕನನ್ನು ರೈಲ್ವೇ ಇಲಾಖೆ ಅಮಾನತುಗೊಳಿಸಿದ್ದು, ಆಂತರಿಕ ತನಿಖೆಗೆ ಆದೇಶಿಸಿದೆ.


ಇದನ್ನೂ ಓದಿ: ಗರ್ಭಿಣಿ ಆನೆಯ ಕೊಲೆ : ಬಂಧಿತ ಆರೋಪಿ ಬಿಚ್ಚಿಟ್ಟ ಸತ್ಯ ಹೇಳಿದ್ರೆ ಶಾಕ್ ಆಗ್ತೀರಾ…!


ಇದನ್ನೂ ಓದಿ: ಲಾಕ್‌ಡೌನ್‌ ಎಫೆಕ್ಟ್: ಪರಿಸ್ಥಿತಿ ಸುಧಾರಿಸದಿದ್ದರೆ, ಕರ್ನಾಟಕದ ಸಣ್ಣ-ಮಧ್ಯಮ ಉದ್ಯಮಗಳಿಗಿಲ್ಲ ಅಸ್ಥಿತ್ವ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights