ತಮಿಳುನಾಡಿನಲ್ಲೂ ಕೊರೊನಾ ಲಸಿಕೆ ಉಚಿತ: ಬಿಜೆಪಿಗೆ ಪಳನಿಸ್ವಾಮಿ ಟಾಂಗ್‌!

ಬಿಹಾರ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಬಿಹಾರ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಭರವಸೆ ನೀಡಿದ್ದು, ತೀವ್ರ ಟೀಕೆಗೆ ಒಳಗಾಗಿದೆ. ಈ ಬೆನ್ನಲ್ಲೇ, ಬಿಜೆಪಿ ವಿರುದ್ಧ “ನಾನೂ ಘೋಷಿಸಿದ್ದೇನೆ (me too)” ಎಂದು ವಿರೋಧ ಪಕ್ಷಗಳು ಟ್ರೋಲ್‌ ಮಾಡುತ್ತಿದ್ದು, ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿಯವರು ತಮ್ಮ ರಾಜ್ಯದಲ್ಲೂ ಲಸಿಕೆ ಉಚಿತವಾಗಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.

“ಒಮ್ಮೆ COVID-19 ಲಸಿಕೆ ಸಿದ್ಧವಾದರೆ, ಅದನ್ನು ರಾಜ್ಯದ ಎಲ್ಲ ಜನರಿಗೆ ಉಚಿತವಾಗಿ ನೀಡಲಾಗುವುದು” ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಿಸಿದ್ದಾರೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ ಬಗ್ಗೆ ಬರೆದುಕೊಂಡಿರುವುದು ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ “ಭಾರತ ಸರ್ಕಾರವು ಕೊರೊನಾ ಸೋಂಕನ್ನು ಬಳಸಿಕೊಂಡು ಚುನಾವಣಾ ತಂತ್ರ ಎಣೆಯುತ್ತಿದೆ. ಸುಳ್ಳು ಭರವಸೆಗಳ ಸರಮಾಲೆ ಎಣೆಯುತ್ತಿರುವ ನೀವು, ಮೊದಲಿಗೆ ಲಸಿಕೆಯನ್ನು ಯಾವಾಗ ಪಡೆಯುತ್ತೀರಿ ಎಂದು ತಿಳಿಯಲು ರಾಜ್ಯವಾರು ಚುನಾವಣಾ ವೇಳಾಪಟ್ಟಿಯನ್ನು ಗಮನಿಸಿ” ಎಂದು ಟ್ವೀಟ್‌ ಮಾಡಿದ್ದಾರೆ.

“ಬಿಜೆಪಿ ಅಲ್ಲದ ಆಡಳಿತದ ರಾಜ್ಯಗಳ ಬಗ್ಗೆ ಏನು? ಬಿಜೆಪಿಗೆ ಮತ ಹಾಕದ ಭಾರತೀಯರಿಗೆ ಉಚಿತ ಕೋವಿಡ್ ಲಸಿಕೆ ಸಿಗುವುದಿಲ್ಲವೇ?” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ‘ಉಚಿತ ಕೊರೊನಾ ಲಸಿಕೆ ದೇಶಕ್ಕೆ ಸೇರಿದೆ ಬಿಜೆಪಿ ರಾಜಕೀಯಕ್ಕಲ್ಲ’ – ಬಿಜೆಪಿ ಪ್ರಣಾಳಿಕೆ ವಿರುದ್ಧ ಆರ್‌ಜೆಡಿ ಕಿಡಿ!

ಕೊರೊನಾಗೆ ಇನ್ನೂ ಲಸಿಕೆ ಸಿದ್ದವಾಗಿಲ್ಲ. ಹಲವಾರು ಹಲವಾರು ವೈದ್ಯಕೀಯ ಪರೀಕ್ಷೆಗಳು ವಿದೇಶಗಳಲ್ಲಿ ನಡೆಯುತ್ತಿವೆ. ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಎರಡು ಸಂಸ್ಥೆಗಳು ಲಸಿಕೆಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದ್ದಾರೆ.


ಇದನ್ನೂ ಓದಿ: “ಬಿಹಾರದಲ್ಲಿ ಮಾತ್ರ ಉಚಿತ ಲಸಿಕೆ?”: ಮತದಾನದ ಭರವಸೆಯ ಭರದಲ್ಲಿ ಎಡವಿತಾ ಬಿಜೆಪಿ…?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights