ವಾಯುಮಾಲಿನ್ಯದಲ್ಲಿ ಭಾರತವೇ ನಂ.1 : ಅಕಾಲಿಕ ಮರಣಕ್ಕೂ ಅಶುದ್ಧ ಗಾಳಿಯೇ ಕಾರಣ!

ಭಾರತದಲ್ಲಿ ವಾಯುಮಾಲಿನ್ಯ ಎಂದರೆ ನೆನಪಿಗೆ ಬರುವುದು ರಾಷ್ಟ್ರ ರಾಜಧಾನಿ ದೆಹಲಿ. ಅಂತೆಯೇ ವಿಶ್ವದಲ್ಲಿ ವಾಯುಮಾಲಿನ್ಯ ಎಂದರೆ ಭಾರತ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಜಗತ್ತಿನಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ದೇಶದಲ್ಲಿ ಅಕಾಲಿಕ ಮರಣಕ್ಕೂ ಇದೇ ಕಾರಣ ಎಂದು ಸ್ಟೇಟ್‌ ಆಫ್‌ ಗ್ಲೋಬಲ್‌ ಏರ್ 2020 (ಎಸ್‌ಒಜಿಎ) ಹೇಳಿದೆ.

2019ರಲ್ಲಿ ಜಾಗತಿಕ ವಾಯುಮಾಲಿನ್ಯ ಪ್ರಮಾಣ ಗಮನಿಸಿದರೆ, ಮಾಲಿನ್ಯದ ಕಾರಣದಿಂದಾಗಿ ಭಾರತೀಯರು ಹೆಚ್ಚು ಬಾಧಿತರಾಗಿದ್ದಾರೆ ಎಂದು ಎಸ್‌ಒಜಿಎ ವರದಿಯಲ್ಲಿ ಹೇಳಿದೆ.

ದೇಶದಲ್ಲಿ 2010ರಿಂದ ಪ್ರತಿವರ್ಷ 2.5 ಪಾಟಿಕಲ್ಸ್‌ ಮ್ಯಾಟರ್‌ (ಪಿಎಂ) ಮಾಲಿನ್ಯ ಕಣದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ನೇಪಾಳ, ಕತಾರ್‌, ನೈಜಿರಿಯಾದ ಹೋಲಿಕೆಯಲ್ಲಿ ಭಾರತೀಯರು ಅತಿಹೆಚ್ಚು ಪ್ರಮಾಣದ ಮಾಲಿನ್ಯ ಕಣಗಳನ್ನು ಉಸಿರಾಡುತ್ತಿದ್ದಾರೆ.

ಇದನ್ನು ಓದಿ: ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 94ನೇ ಸ್ಥಾನ; ಪಾಕಿಸ್ಥಾನ, ನೇಪಾಳಕ್ಕಿಂತ ಹಿಂದುಳಿದ ಭಾರತ

ಹೆಚ್ಚು ಜನದಟ್ಟಣೆ ಹೊಂದಿರುವ ವಿಶ್ವದ 20 ರಾಷ್ಟ್ರಗಳ ಪೈಕಿ 14ರಲ್ಲಿ ವಾಯುಮಾಲಿನ್ಯ ಇಳಿಕೆಯಾಗುತ್ತಿದೆ. ಆದರೆ, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಜಪಾನ್‌, ನೈಜರ್‌ನಲ್ಲಿ ಮಾತ್ರ ವಾಯುಮಾಲಿನ್ಯ ಅಧಿಕ ಪ್ರಮಾಣದಲ್ಲಿ ದಾಖಲಾಗಿದೆ ಎಂದು ವರದಿ ಎಚ್ಚರಿಸಿದೆ.

ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿರುವ 87 ಅಂಶಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ ವಾಯುಮಾಲಿನ್ಯ ನಾಲ್ಕನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಕ್ತದೊತ್ತಡ, ತಂಬಾಕು ಸೇವನೆ ಇದೆ.

ಆದರೆ, ಭಾರತದಲ್ಲಿ ಅಕಾಲಿಕ ಮರಣಕ್ಕೆ ವಾಯುಮಾಲಿನ್ಯವೇ ಪ್ರಮುಖ ಕಾರಣ ಎಂದು ವರದಿ ಹೇಳಿದೆ.


ಇದನ್ನೂ ಓದಿ: GDP:ಏಷ್ಯಾ ರಾಷ್ಟ್ರಗಳಲ್ಲಿ ಭಾರತದ್ದೇ ಅತ್ಯಂತ ಕಳೆಪೆ; 11ನೇ ಸ್ಥಾನಕ್ಕೆ ಕುಸಿದ ಭಾರತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights