ಮುಂದಿನ ಸಿಎಂ ಯಾರು? : ಹೈಕಮಾಂಡ್ ಮುಂದೆಯೂ ಸಿದ್ದು ಮೇಲುಗೈ ಸಾಧಿಸುತ್ತಾರಾ..?

ರಾಜ್ಯ ರಾಜಕೀಯದಲ್ಲಿ ಮುಂದಿನ ಸಿಎಂ ಬಗ್ಗೆ ಹಲವಾರು ಹೇಳಿಕೆಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಆಂತರಿಕ ಯುದ್ಧದಲ್ಲಿ ಸೈಲೆಂಟ್ ಆಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮೌನ ಮುರಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿಎಂ ಯಾರು ಆಗುತ್ತಾರೆ ಅನ್ನೋದನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ನಿರ್ಧರಿಸುತ್ತದೆ. ಉಳಿದವರು ಏನೇ ಹೇಳಿದರೂ ಇದೇ ಅಂತಿಮ ಸತ್ಯ. ಬೆಂಬಲಿಗರ ಕೂಗಿದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮುಖ್ಯಮಂತ್ರಿಯಾಗುವ ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದಿದ್ರು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಾರು ಮುಂದಿನ ಸಿಎಂ ಆಗ್ತಾರೆ ಎನ್ನುವುದನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಲಕ್ಷ್ಮಣ ರೇಖೆ ಎಳೆದಿದ್ದಾರೆ.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದಿದ್ದ ಜಮೀರ್ ಹಾಗೂ ಶಾಸಕಿ ಸೌಮ್ಯ ರೆಡ್ಡಿಗೆ ಸಂಕಷ್ಟ ಶುರುವಾಗಿದೆ. ಇದು ಕಾಂಗ್ರೆಸ್ ಸಂಸ್ಕೃತಿಯಲ್ಲಿ ಪಕ್ಷಕ್ಕೆ ಧಕ್ಕೆಯಾದರೆ ಅಂತವರ ವಿರುದ್ಧ ಸುಮೋಟೊ ಪ್ರಕರಣ ದಾಖಲು ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಎಚ್ಚರಿಕೆ ನೀಡಿದ್ದಾರೆ. ಚೋಟಾ ಚೋಟಾ ಲೀಡರ್ಸ್ ಸಿಎಂ ಅಧಿಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಯಾರೆಲ್ಲಾ ಇಂತಹ ಹೇಳಿಕೆ ಕೊಟ್ಟಿದ್ದಾರೋ ಅವರೆಲ್ಲರಿಗೂ ನೋಟೀಸ್ ಕೊಡುತ್ತೇವೆ. ಹೈಕಮಾಂಡ್ ಇದೆಲ್ಲವನ್ನೂ ಗಮನಿಸುತ್ತಿದೆ ಎಮದು ಕೋಳಿವಾಡ ಹೇಳಿದ್ದಾರೆ.

ಇನ್ನೂ ಆರ್ ಆರ್ ನಗರ ಚುನಾವಣೆ ಪ್ರಚಾರದ ವೇಳೆ ಮುನಿರತ್ನ ನೋಟು ಕುಸುಮಾಗೆ ಓಟು ಎನ್ನುವ ಡಿಕೆ ಶಿವಕುಮಾರ್ ಹೇಳಿಕೆಗೆ ಸದ್ಯ ಚುನಾವಣೆ ಆಯೋಗ ನೋಟೀಸ್ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ಬಿಜೆಪಿ ಹಣ ಹಾಗೂ ಸೆಟ್ಅಪ್ ಬಾಕ್ಸ್ ನೀಡುತ್ತಿದೆ. ಇದಕ್ಕೆ ನೀವು ಹೌದು ಎನ್ನುತ್ತಿದ್ದೀರಿ. ಹಾಗಾದ್ರೆ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಸಿಎಂ ಯಡಿಯೂರಪ್ಪ ವಿಮಾನದಲ್ಲಿ ನೆರೆ ಸಮೇಕ್ಷೆ ನಡೆಸಿಲ್ಲ ಎಂದು ಸಿದ್ದು ದೂರಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಚರ್ಚೆ ನಡೆದಿದೆ. ಯಾರಿಗೆ ಪಟ್ಟ ಕಟ್ಟಲಾಗುತ್ತದೆ. ಯಾರಾದೃಷ್ಟವಂತರು ಅನ್ನೋದನ್ನ ನಾವು ನೀವೆಲ್ಲಾ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights