2021ರ ವಿಧಾನಸಭಾ ಚುನಾವಣಗೆ ಸ್ಪರ್ಧಿಸುವುದಿಲ್ಲ: ತಮಿಳು ಬಿಜೆಪಿ ಅಧ್ಯಕ್ಷ ಮುರುಗನ್‌

ತಮಿಳುನಾಡಿನಲ್ಲಿ ಮುಂದಿನ ವರ್ಷ ಅಂದರೆ 2021ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್‌ ಮುರುಗನ್ ಹೇಳಿದ್ದಾರೆ.

“ನಾನು 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿಯಲ್ಲಿರುವ ನನ್ನ ಸಹೋದರ ಸಹೋದರಿಯರನ್ನು ವಿಧಾನಸಭೆಗೆ ಕಳುಹಿಸುವ ಕೆಲಸದಲ್ಲಿ ಮಾತ್ರ ನಾನು ತೊಡಗಿಸಿಕೊಳ್ಳುತ್ತೇನೆ. ಅವರ ಗೆಲುವಿಗಾಗಿ ಶ್ರಮಿಸುತ್ತೇನೆ” ಎಂದು ಮುರುಗನ್ ತಿಳಿಸಿದ್ದಾರೆ.

“ಮುರುಗನ್ ಅವರು ಸೂಕ್ತವಲ್ಲದ ಸಮಯದಲ್ಲಿ ಈ ಘೋಷಣೆ ಮಾಡಿದ್ದಾರೆ. ಒಬ್ಬ ನಾಯಕನಾಗಿ ಮುಂದೆ ನಿಂತು ಪಕ್ಷವನ್ನು ಮುನ್ನಡೆಸಬೇಕು. ಹಿಂದಿನಿಂದಲ್ಲ. ರಾಜಕೀಯ ಪಕ್ಷದ ರಾಜ್ಯ ಅಧ್ಯಕ್ಷರು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿರಬೇಕು. ಇದು ಪಕ್ಷದ ಕಾರ್ಯಕರ್ತರಿ ಪ್ರಚೋದನೆಯನ್ನು ನೀಡುತ್ತದೆ. ಆದರೆ ಅವರು ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ರಾಜಕೀಯ ವಿಶ್ಲೇಷಕ ಥಾರಸಿ ಶ್ಯಾಮ್ ಹೇಳಿದ್ದಾರೆ.

ರಾಜ್ಯ ಬಿಜೆಪಿಯು ನವೆಂಬರ್ 6 ರಿಂದ ವೆಟ್ರಿವೆಲ್ ಯಾತ್ರೆ ಆರಂಭಿಸುತ್ತಿದ್ದು, ಮುರುಗನ್ ಅವರ ಆರು ನಿವಾಸಗಳಲ್ಲಿ ಒಂದಾದ ತಿರುಟ್ಟಾನಿಯಿಂದ ಪ್ರಾರಂಭವಾಗಲಿದೆ. ಡಿಸೆಂಬರ್ 6ರಂದು ತಿರುಚೆಂದೂರಿನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಮುರುಗನ್ ಅವರು ಹೇಳಿದ್ದಾರೆ.


ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಜೆಪಿ ಸೇರಿದ ರೌಡಿಶೀಟರ್; ಪೊಲೀಸರನ್ನು ಕಂಡು ಪರಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights