ಬಿಹಾರವು ಬಂಧನದಲ್ಲಿದೆ: ಭಾರತದ ಬದಲಾವಣೆಯ ಪರ್ವ ಬಿಹಾರದಿಂದ ಆರಂಭವಾಗಲಿದೆ: ಸೋನಿಯಾ ಗಾಂಧಿ

ಬಿಹಾರದಲ್ಲಿನ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಹಾರ ಸರ್ಕಾರಕ್ಕೆ ಅಧಿಕಾರ ಮತ್ತು ಅಹಂಕಾರ ಹೆಚ್ಚಾಗಿದೆ. ಬಿಹಾರ ರಾಜ್ಯ ಸರ್ಕಾರ ಹಾದಿ ತಪ್ಪಿದೆ. ಸರ್ಕಾರದ ಮೇಲೆ ಸಾರ್ವಜನಿಕರು ಸಿಟ್ಟಾಗಿದ್ದು, ಅವರು ಕಾಂಗ್ರೆಸ್‌ ಮತ್ತು ಮಹಾಘಟ್‌ಬಂಧನ್‌ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರ ದರ್ಪ ಮತ್ತು ಅಹಂಕಾರದಿಂದಾಗಿ ಬಿಹಾರ ಸರ್ಕಾರ ಹಾದಿ ತಪ್ಪಿದೆ. ಅಧಿಕಾರದಲ್ಲಿರುವವರ ನಡೆ ಮತ್ತು ನುಡಿ ಒಳ್ಳೆಯ ಹಾದಿಯಲ್ಲಿಲ್ಲ. ಕಾರ್ಮಿಕರು ಅಸಹಾಯಕರಾಗಿದ್ದಾರೆ. ರೈತರು ಆತಂಕದಲ್ಲಿದ್ದಾರೆ. ಯುವಕರು ನಿರಾಶೆಗೊಂಡಿದ್ದಾರೆ.

“ಆರ್ಥಿಕತೆ ದುರ್ಬಲಗೊಂಡಿದ್ದು, ಜನರ ಜೀವನ ಮಟ್ಟ ಕುಸಿದಿದೆ. ಮಣ್ಣಿನ ಮಕ್ಕಳು ಇಂದು ತೀವ್ರ ತೊಂದರೆಯಲ್ಲಿದ್ದಾರೆ. ದಲಿತರು ಮತ್ತು ಬಹುಸಂಖ್ಯಾತರ ಸ್ಥಿತಿ ಕೆಟ್ಟ ಪರಿಸ್ಥಿತಿಯಲ್ಲಿದೆ. ಸಮಾಜದ ಹಿಂದುಳಿದ ವರ್ಗಗಳೂ ಈ ಅವಸ್ಥೆಗೆ ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯದ ಜನರ ಧ್ವನಿ ಬಿಜೆಪಿ ಮತ್ತು ಎನ್‌ಡಿಎ ವಿರುದ್ದವಿದ್ದು, ಕಾಂಗ್ರೆಸ್‌ ಮತ್ತು ಮಹಾಘಟ್‌ಬಂಧನ್‌ ಜೊತೆಗಿದ್ದಾರೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ದೆಹಲಿ ಮತ್ತು ಬಿಹಾರ ಸರ್ಕಾರಗಳ – ರಾಕ್ಷಸೀಕರಣ, ವ್ಯಾಪಾರ-ವಹಿವಾಟು ಕುಸಿತ, ಆರ್ಥಿಕ ದರೋಡೆಕೋರತನ, ರೈತ ವಿರೋಧಿ ಕೃಷಿ ನೀತಿಗಳು, ನಿರುದ್ಯೋಗದಿಂದಾಗಿ ಜನರು ಬಂಧಿತರಾಗಿದ್ದಾರೆ. ಆದ್ದರಿಂದ, ಬಂಧಿತ ಸರ್ಕಾರದ ವಿರುದ್ಧ, ಬಿಹಾರದ ಜನರು ಹೊಸ ಬಿಹಾರ ರಚನೆಗೆ ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

“ಈಗ ಬಿಹಾರದಲ್ಲಿ ಬದಲಾಣೆಯ ಗಾಳಿ ಆರಂಭವಾಗಿದೆ. ಬದಲಾವಣೆಯ ಉತ್ಸಾಹ, ಶಕ್ತಿ, ಹೊಸ ಆಲೋಚನೆ ಚಿಗುರೊಡೆದಿದೆ. ನಿರುದ್ಯೋಗ, ವಲಸೆ, ಹಣದುಬ್ಬರ, ಹಸಿವಿನಿಂದಾಗಿ ಅವರ ಕಾಲುಗಳಲ್ಲಿ ಗುಳ್ಳೆಗಳು ಮತ್ತು ಕಣ್ಣೀರು ತರಿಸಿವೆ. ಹೊಸದನ್ನು ಬರೆಯುವ ಸಮಯ ಬಂದಿದೆ” ಎಂದು ಅವರು ಹೇಳಿದರು.

“ಹೇಳಲಾಗದ ಪದಗಳನ್ನು ಕಣ್ಣೀರಿನೊಂದಿಗೆ ಹೇಳಬೇಕಾಗಿದೆ. ಭಯ ಮತ್ತು ಅಪರಾಧದ ಆಧಾರದ ಮೇಲೆ ನೀತಿ ಮತ್ತು ಸರ್ಕಾರಗಳನ್ನು ರಚಿಸಲಾಗುವುದಿಲ್ಲ. ಬಿಹಾರವು ಭಾರತದ ಕನ್ನಡಿಯಾಗಿದೆ. ಬಿಹಾರದ ಚುನಾವಣೆ ಭಾರತಕ್ಕೆ ಹೊಸ ಭರವಸೆಯಾಗಲಿದೆ. ಉತ್ಸಾಹ ಮತ್ತು ಭಾವೋದ್ರೇಕದ ಸಂಕೇತವಾಗಿದೆ” ಎಂದು ಸೋನಿಯಾಗಾಂಧಿ ಹೇಳಿದ್ದಾರೆ.

ರೈತರು, ಯುವಕರು, ಕಾರ್ಮಿಕರು, ಬಿಹಾರದ ಸಹೋದರ ಸಹೋದರಿಯರು ಬಿಹಾರದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಇದ್ದಾರೆ. ಬಿಹಾರವು ತನ್ನ ಗ್ರಾಮಗಳು, ಪಟ್ಟಣಗಳು, ನಗರಗಳು, ಹೊಲಗಳು ಮತ್ತು ಕೊಟ್ಟಿಗೆಗಳಲ್ಲಿ ಹೊಸ ವೈಭವ ಮತ್ತು ಭವಿಷ್ಯಕ್ಕಾಗಿ ಹೊಸ ಬದಲಾವಣೆಗಳಿಗೆ ಸಿದ್ಧವಾಗಿದೆ  ಎಂದು ಅವರು ಹೇಳಿದ್ದಾರೆ.

ನಿರುದ್ಯೋಗ, ಕೃಷಿ ಉಳಿಯುವಿಕೆ, ಅಹಾರ ಭದ್ರತೆ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಪ್ರಶ್ನೆಗಳು ಎದ್ದಿವೆ. ಸರ್ವಾಧಿಕಾರಿ ಧೋರಣೆಯಿಂದ ಪ್ರಶ್ನೆಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಪ್ರಶ್ನೆಗಳಿಗೆ ಆಡಳಿತ ಬೆಲೆತೆರಬೇಕಾಗಿದೆ ಎಂದು ಅವರು ಹೇಳಿದ್ದಾರೆ.

“ಕತ್ತಲೆಯಿಂದ ಬೆಳಕಿನೆಡೆಗೆ, ಸುಳ್ಳಿನಿಂದ ಸತ್ಯದೆಡೆಗೆ ಮರ್ತಮಾನದಿಂದ ಭವಿಷ್ಯದೆಡೆಗೆ ಸಾಗುವ ಕಾಲ ಬಂದಿದೆ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮತ ಎಣಿಕೆ ನವೆಂಬರ್ 10 ರಂದು ನಡೆಯಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights