ಶರತ್ ಮಡಿವಾಳ ಸಾವನ್ನು ಮುಚ್ಚಿಟ್ಟಿದ್ದು ಅಕ್ಷಮ್ಯ ಅಪರಾಧ : ಮುತಾಲಿಕ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮಾತನಾಡಿದ್ದಾರೆ. ‘ ಮುಖ್ಯಮಂತ್ರಿ ಪೊಲೀಸರಿಗೆ ಬಂಧಿಸಿ ಅಂತ ಹೇಳಬಾರದು, ಸಿಎಂ ಯಾಕೆ ಪೊಲೀಸ್ ಇಲಾಖೆಯಲ್ಲಿ ಕೈ ಹಾಕಬೇಕು..? ಇಲ್ಲಿ ಪ್ರಭಾವ ಬೀರುವುದು ಹಿಂದೂ ವಿರೋಧಿ ವ್ಯವಸ್ಥೆ, ಹಿಂದುತ್ವವನ್ನು  ಇವತ್ತು ಕರ್ನಾಟಕದಲ್ಲಿ ನಾಶ ಮಾಡುವ ವ್ಯವಸ್ಥಿತ ಸಂಚು ಇದೆ. ಸಿಎಂ ಇದರಲ್ಲಿ ಮೂಗು ತೂರಿಸಬಾರದಿತ್ತು. ಸಿಎಂ ಕಾರ್ಯಕ್ರಮಕ್ಕಾಗಿ  ಶರತ್ ಮಡಿವಾಳ ಸಾವನ್ನು ಮುಚ್ಚಿಟ್ಟಿದ್ದು ಅಕ್ಷಮ್ಯ ಅಪರಾಧ. ಕೇರಳದ ಹವ್ಯಾಸವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಸರಿಸುತ್ತಿರುವುದು ಅಪಾಯಕಾರಿ. ಇದು ರಾಜ್ಯ ಸರ್ಕಾರದ ವೈಫಲ್ಯ. ವಜ್ರದೇಹಿ ಸ್ವಾಮೀಜಿ ಹತ್ತಿರ ಮಾಹಿತಿ ಇದ್ದರೆ ಪೊಲೀಸರಿಗೆ ನೀಡುವುದು ಸ್ವಾಮೀಜಿಗೆ ಬಿಟ್ಟ ವಿಚಾರ. ಸ್ವಾಮೀಜಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಏನಾದರೂ ಸುಳಿವು ಸಿಕ್ಕಿರಬಹುದು.  ಪ್ರತಿಯೊಂದನ್ನು ಎನ್ಐಎ ಅಥವಾ ಸಿಬಿಐಗೆ ಕೊಡಬೇಕು ಅನ್ನುವುದಕ್ಕಿಂತ ಕರ್ನಾಟಕದ ಪೊಲೀಸರು ಸಮರ್ಥರಿದ್ದಾರೆ, ದ.ಕ. ಜಿಲ್ಲೆಯಲ್ಲಿ ಭಯದ ವಾತಾವರಣ ಇದೆ ಎನ್ನುವಂತಹ ತಪ್ಪು ಅಭಿಪ್ರಾಯ ಇಡೀ ಕರ್ನಾಟಕದಲ್ಲಿ ಇದೆ ‘ ಎಂದಿದ್ದಾರೆ.

‘ ಯಡಿಯೂರಪ್ಪ, ನಳೀನ್ ಕುಮಾರ್ ಕಟೀಲ್ ಸಾಕಷ್ಟು ಸಲ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲ್ಲ. ಆದರೆ ನಮ್ಮಂತಹ ಹಿಂದೂ ಮುಖಂಡರ ಮೇಲೆ ಕ್ರಮ ತೆಗೆದುಕೊಳ್ಳುತ್ತಿರುವುದು ಸೇಡಿನ ಕ್ರಮ ಮತ್ತು ಹಿಂದೂ ಸಂಘಟನೆಗಳನ್ನು ನಾಶ ಮಾಡುವ ಷಡ್ಯಂತ್ರ. ನಮ್ಮನ್ನು ಟಾರ್ಗೆಟ್ ಮಾಡಲಾಗ್ತಿದೆ. ಕಾನೂನು ಎಲ್ಲರಿಗೂ ಸಮಾನವಾಗಿರಲಿ, ಅದರೆ ತಾರತಮ್ಯ ಬೇಡ. ಪ್ರಚೋದನಾಕಾರಿ ಯಾವುದು ಅಂತ ಸರ್ಕಾರ ವ್ಯಾಖ್ಯಾನ ಕೊಡಲಿ. ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಅವರು ಮೈಕ್ ಮೂಲಕ ಹೇಳುವುದನ್ನು ಸರ್ಕಾರ ವೀಡಿಯೋ ಮಾಡಿ ಅಧ್ಯಯನ ಮಾಡಿದರೆ ಪ್ರಚೋದನಾಕಾರಿ ಯಾವುದು ಅಂತಾ ಗೊತ್ತಾಗುತ್ತದೆ ‘ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

3 thoughts on “ಶರತ್ ಮಡಿವಾಳ ಸಾವನ್ನು ಮುಚ್ಚಿಟ್ಟಿದ್ದು ಅಕ್ಷಮ್ಯ ಅಪರಾಧ : ಮುತಾಲಿಕ್

 • ಜುಲೈ 18, 2017 at 9:53 ಅಪರಾಹ್ನ
  Permalink

  I am no longer sure where you’re getting your info, but good topic. I needs to spend a while finding out much more or working out more. Thanks for excellent info I used to be searching for this info for my mission.

  Reply
 • ಜುಲೈ 18, 2017 at 9:53 ಅಪರಾಹ್ನ
  Permalink

  An outstanding share! I’ve just forwarded this onto a friend who was doing a little research on this. And he in fact bought me lunch because I found it for him… lol. So let me reword this…. Thank YOU for the meal!! But yeah, thanx for spending time to discuss this subject here on your website.

  Reply
 • ಜುಲೈ 18, 2017 at 9:54 ಅಪರಾಹ್ನ
  Permalink

  Hi, i feel that i noticed you visited my web site thus i came to return the favor?.I am trying to find things to enhance my web site!I assume its ok to make use of some of your ideas!!

  Reply

ನಿಮ್ಮದೊಂದು ಉತ್ತರ

ನಿಮ್ಮ ಇ-ಮೇಲ್ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com