ಅನರ್ಹ ಶಾಸಕರಿಗೆ ಸಿಗಲಿಲ್ಲ ರಿಲೀಫ್ : ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್

ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟಗೊಂಡಿದ್ದು, ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಹೌದು… ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪು ಹೊರಬಂದಿದ್ದು, ಸ್ಪೀಕರ್ ಆದೇಶಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಜೊತೆಗೆ 17 ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇದೆ ಎಂದು ಸುಪ್ರೀಕೋರ್ಟ್ ತಿಳಿಸಿದೆ. ಪ್ರಜಾಪ್ರಭುತ್ವದಲ್ಲಿ ಕುದುರೆ ವ್ಯಾಪಾರ ಮಾರಕ. ಜೊತೆಗೆ ಉಪಚುನಾವಣೆಗೆ ನಿರ್ಬಂಧ ವಿಧಿಸಿದ್ದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.

ಈ ಬಗ್ಗೆ ಮಾತನಾಡಿದ ಅನರ್ಹ ಶಾಸಕರ ಪರ ವಕೀಲರು ಸಂದೀಪ್ ಪಾಟೀಲ್, ಸ್ಪೀಕರ್ ವಿಧಿಸಿದ್ದ ಕಾಲಮಿತಿಯನ್ನು ಸುರ್ಪೀಕೋರ್ಟ್ ತಳ್ಳಿ ಹಾಕಿದ್ದು, ಸರ್ಕಾರದ ಯಾವುದೇ ಹುದ್ದೆಯನ್ನು ಅನರ್ಹರು ಹೊಂದುವಂತಿಲ್ಲ. ಡಿಸೆಂಬರ್ 5 ರಂದು ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ.  ಆದರೆ ಮರು ಆಯ್ಕೆಯಾಗುವವರೆಗೂ ಮಂತ್ರಿಯಾಗುವಂತಿಲ್ಲ ಎಂದು ಕೋರ್ಟ್ ಹೇಳಿದೆ ಎಂದರು.

ಈ ವೇಳೆ ಅನರ್ಹರಿಗೆ ಹೈಕೋರ್ಟ್ ಗೆ ಹೋಗದೇ ನೇರವಾಗಿ ಸುಪ್ರೀಂಕೋರ್ಟ್ ಗೆ ಯಾಕೆ ಬಂದ್ರಿ ಎಂದು ಕೂಡ ಸುಪ್ರಿಂಕೋರ್ಟ್ ಪ್ರಶ್ನಿಸಿದೆ ಎನ್ನಲಾಗಿದೆ. ಈ ಆದೇಶ ಅನರ್ಹರಿಗೆ ನಿರೀಕ್ಷೆಯಂತಿಲ್ಲವಾದರೂ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಕ್ಕಿದ್ದೇ ಒಂದು ಮಟ್ಟಕ್ಕೆ ರಿಲೀಫ್ ಕೊಟ್ಟಂತಾಗಿದೆ.

ಆದರೆ ಪ್ರಥಾಪ್ ಗೌಡ ಪಾಟೀಲ್ ಹಾಗೂ ಮುನಿರತ್ನ ಅವರಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. 2 ಕ್ಷೇತ್ರಗಳಿಗೆ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಸ್ಥಾನವೂ ಇಲ್ಲ. ಚುನಾವಣೆಯೂ ಇಲ್ಲ ಎನ್ನುವಂತಾಗಿದೆ.

 

Leave a Reply