ಅಮಾವಾಸ್ಸೆಯ ಸಂಜೆ ತಂತಾನೆ ತೂಗಿದ ಎರಡು ಜೋಕಾಲಿಗಳು…! ವಿಡಿಯೋ ನೋಡಿ..

ಆಲಮಟ್ಟಿಯಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ನಿನ್ನೆ ಅಮಾವಾಸ್ಸೆಯ ಸಂಜೆ ತಂತಾನೆ ತೂಗಿದ ಎರಡು ಜೋಕಾಲಿಗಳನ್ನು ಸ್ಥಳೀಯ ವ್ಯಾಪಾರಿ ಕಂಡು ಆತಂಕಗೊಂಡಿದ್ದಾರೆ.

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ರಾಕ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ.  ನಿನ್ನೆ ಸಂಜೆ 6.30ರ ಸುಮಾರಿಗೆ ರಾಕ್ ಗಾರ್ಡನ್ ನಲ್ಲಿ ಎರಡು ಜೋಕಾಲಿಗಳು ತೂಗಾಡಿದೆ.

ಒಟ್ಟು ಎಂಟು ಜೋಕಾಲಿಗಳು ಇರುವ ರಾಕ್ ಗಾರ್ಡನ್ ನಲ್ಲಿ ಯಾರೊಬ್ಬರೂ ತೂಗಿದಾಗ ಮಾತ್ರ ತೂಗಾಡುವ ಜೋಕಾಲಿ, ಸಂಜೆ 2 ರಿಂದ 3 ನಿಮಿಷ ತಂತಾನೇ ತೂಗಿವೆ. ಎಂಟರಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತೂಗಿದ್ದು ಕಂಡು ವ್ಯಾಪಾರಿ ಹೌಹಾರಿದ್ದಾನೆ.

ಗಾಳಿಗೆ ಜೋಕಾಲಿಗಳು ತೂಗಿದರೆ ಎಲ್ಲವೂ ಅಲುಗಾಡಬೇಕಿತ್ತು ಎಂಬುದು ಗಮನಾರ್ಹ. ರಾಕ್ ಗಾರ್ಡನ್ ಬಳಿ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ ರಿಂದ ಈ ದೃಷ್ಯ ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿದೆ.

ನಿನ್ನೆ ಸಂಜೆ ಅಂಗಡಿ ಬಂದ್ ಮಾಡಿ ಮನೆಗೆ ತೆರಳುವಾಗ ಜೋಕಾಲಿಗಳು ತೂಗುತ್ತಿರುವುದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ವ್ಯಾಪಾರಿ ಮಂಜುಾಥ, ನಂತರ ಭಯಬಿದ್ದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕಬ್ಬಿಣ ಸರಳಿನಿಂದ ತಯಾರಾದ ಮಣಭಾರದ ಜೋಕಾಲಿಗಳು, ಮನುಷ್ಯರು ಇಲ್ಲದೆ ತೂಗಿದ ವಿಡಿಯೋ ಈಗ ವೈರಲ್ ಆಗಿದೆ.

ನಿನ್ನೆ ಅಮವಾಸ್ಯೆ ಹಿನ್ನೆಲೆ ನಿಗೂಢ ಶಕ್ತಿಗಳ ಆಟ ಎಂಬ ಶಂಕೆ ಇದ್ದರೂ,  ಕೆಲವರು ಯಾರೂ ಹೀಗೆ ಜೋಕಾಲಿಗಳನ್ನು ತೂಗಿ ಬಳಿಕ ವಿಡಿಯೋ ಮಾಡಿರಬಹುದು ಎಂಬ ಬಗ್ಗೆಯೂ ಬಿಸಿಬಿಸಿ ಚರ್ಚೆಯಾಗುತ್ತಿದೆ.

Leave a Reply