ಅಮೆರಿಕನ್ ಪ್ರವಾಸಿಗರಿಗೆ ಪ್ರ‍್ಯಾಂಕ್ ಮಾಡಿದ ರಾಣಿ…!

ತಮ್ಮಲ್ಲಿರುವ ಹಾಸ್ಯ ಪ್ರಜ್ಞೆಯನ್ನು ಜಗಜ್ಜಾಹೀರು ಮಾಡಿದ ರಾಣಿ ಎಲಿಝಬೆತ್‌ II, ಇತ್ತೀಚೆಗೆ ಸ್ಕಾಟ್ಲೆಂಡ್‌ನ ಬಾಲ್ಮೊರಲ್ ಕೋಟೆಯನ್ನು ನೋಡಲು ಬಂದಿದ್ದ ಅಮೆರಿಕನ್ ಪ್ರವಾಸಿಗರಿಗೆ ಪ್ರ‍್ಯಾಂಕ್ ಮಾಡಿದ್ದಾರೆ.

ಉಣ್ಣೆಯ ಉಡುಪು ಹಾಗೂ ಹೆಡ್‌ಸ್ಕಾರ್ಫ್‌ ಧರಿಸಿ ತಮ್ಮ ಭದ್ರತಾ ಅಧಿಕಾರಿಯೊಬ್ಬರ ಜತೆಗೆ ಅಲ್ಲೇ ಅಡ್ಡಾಡುತ್ತಿದ್ದ 93 ವರ್ಷದ ರಾಣಿಯನ್ನು ಗುರುತು ಹಿಡಿಯದ ಪ್ರವಾಸಿಗರು ಆಕೆಯೊಂದಿಗೆ ಸಂವಾದಕ್ಕಿಳಿದು, ಈ ಕೋಟೆಯಲ್ಲಿ ರಾಣಿ ವಾಸಿಸುತ್ತಾರೆಯೇ ಎಂದಿದ್ದಲ್ಲದೇ ರಾಣಿಯನ್ನು ಕಂಡಿದ್ದೀರಾ ಎಂದು ಖುದ್ದು ಆಕೆಯನ್ನೇ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಣಿ, ಇಲ್ಲವೆಂದಿದ್ದಲ್ಲದೇ, ತಮ್ಮ ಭದ್ರತಾ ಅಧಿಕಾರಿ ಆಕೆಯನ್ನು ಕಂಡಿದ್ದಾಗಿ ತಿಳಿಸಿದ್ದಾರೆ. ಬಾಲ್ಮೋರಲ್ ಕೋಟೆಯಲ್ಲಿ ಬಿಡುವಿನ ವೇಳೆಯನ್ನು ಆನಂದಿಸಲು ಬರುವ ರಾಣಿ, ಸಾಮಾನ್ಯರಂತೆ ಕಾಣಿಸಿಕೊಳ್ಳುತ್ತಿರುತ್ತಾರೆ.

 

Leave a Reply

Your email address will not be published.