ಅಯೋಧ್ಯೆ ತೀರ್ಪು ಏನೆ ಬಂದರು ಅದನ್ನ ಸ್ವೀಕರಿಸುವ ಮನೋಭಾವ ಇರಬೇಕು – ಶಾಸಕ ತನ್ವೀರ್ ಸೇಠ್

ಐತಿಹಾಸಿಕ ಅಯೋಧ್ಯೆ ತೀರ್ಪು ಇಂದು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೇ ಇರಲು ತೀರ್ಪು ಏನೆ ಬಂದರು ಅದನ್ನ ಸ್ವೀಕರಿಸುವ ಮನೋಭಾವ ಇರಬೇಕು ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ನಾವು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಕೆಲ ವ್ಯಕ್ತಿಗಳು ಮಾಡುವ ಹಿಂಸಾತ್ಮಕ ಕೆಲಸ ಬಿಡಬೇಕು. ಸಂವಿಧಾನದ ಆಶಯದಂತೆ ನಾವು ನಡೆಯಬೇಕು. ನಾವೆಲ್ಲ ಭಾರತೀಯರು, ಭಾರತ ಕಟ್ಟುವ ಸಂಕಲ್ಪ ತೊಡಬೇಕು. ನನ್ನ ಎಲ್ಲ ಸಮುದಾಯದವ್ರಿಗೆ ಈ ಮೂಲಕ ಮನವಿ ಮಾಡುತ್ತೇನೆ ಎಂದರು.

ಜೊತೆಗೆ ನಿಮ್ಮ ಭಾವನೆ ಏನೇ ಇದ್ದರು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಡಬೇಡಿ. ಅದನ್ನ ಲಿಖಿತ ಹಾಗೂ ಮನವಿ ಮಾಡಿಕೊಳ್ಳೋ ಅವಕಾಶ ಇರುತ್ತೆ. ಹಿಂಸೆ, ತೊಂದರೆ ಕೋಡೋದು, ವದಂತಿ ಹಬ್ಬಿಸೋದು ಬೇಡ. ನಮ್ಮ ನಿರೀಕ್ಷೆಗೆ ತಕ್ಕಂತೆ ಎಲ್ಲವು ಆಗೋದಿಲ್ಲ. ಭಗವಂತ ಕೊಡುವ ತೀರ್ಪು ಗೌರವಿಸೋಣ. ನಮ್ಮ ಅಕ್ಕ ಪಕ್ಕದ ನಿವಾಸಿಗಳು ಎಲ್ಲರು ಪ್ರೀತಿ ಇಂದ ಇರೋಣ. ನಮಗೆ ಸೌಹಾರ್ದ ಪ್ರೀತಿ ವಿಶ್ವಾಸ ಮುಖ್ಯ ಎಂದಿದ್ದಾರೆ.

Leave a Reply

Your email address will not be published.