ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಗರಂ ಆದಾ ಸಿ.ಎಂ

ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಸಿ.ಎಂ ಗರಂ ಆಗಿದ್ದಾರೆ.

ಶಿವಮೊಗ್ಗದ ಕುಂಸಿ ಭಾಗದಲ್ಲಿ ಬಡವರು ಮನೆ ಕಟ್ಟಿಕೊಳ್ಳುವವರ ಮರಳು ಸೀಜ್ ಮಾಡಿದ್ದಾರೆ ಎಂಬ ವಿಷಯಕ್ಕೆ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿವೃಷ್ಟಿಯಿಂದ ಬಳಲಿರುವವರು ಮನೆ ಕಟ್ಟಿಕೊಳ್ಳಲು ಮರಳು ತಂದುಕೊಂಡರೆ, ಅಂಥವರಿಗೆ ತಡೆ ಒಡ್ಡಬೇಡಿ. ಅಂಥಹ ದೂರು ಮತ್ತೊಮ್ಮೆ ಕೇಳಿ ಬಂದರೆ, ಕಲಬುರ್ಗಿಯಂತಹ ಜಾಗಕ್ಕೆ ವರ್ಗಾವಣೆ ಮಾಡುತ್ತೇನೆ.

ಜಿಲ್ಲಾ ಎಸ್.ಪಿ. ಶಾಂತಕುಮಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ. ಇಂತಹ ದೂರು ಮತ್ತೊಮ್ಮೆ ಕೇಳಿ ವರ್ಗಾವಣೆಯ ಎಚ್ಚರಿಕೆ ಕೊಟ್ಟಿದ್ದಾರೆ.

ಶಿವಮೊಗ್ಗ ದ ಜಿಲ್ಲಾ ಪಂಚಾಯತ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಯಡಿಯೂರಪ್ಪ ರಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಈಶ್ವರಪ್ಪ ಅವರನ್ನು ನೇಮಕ ಮಾಡಲಾಯಿತು. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಇನ್ನು ಮುಂದೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯುತ್ತಾರೆ ಎಂದ ಯಡಿಯೂರಪ್ಪ ಹೇಳಿದರು.

Leave a Reply