ಆಗಸ್ಟ್ 19ಕ್ಕೆ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…?

ಕಡೆಗೂ ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್‍ಗೆ ಪ್ರಧಾನಿ ನರೇಂದ್ರ ಮೋದಿ ಲಿಮಿಟ್ ಹಾಕಿದ್ದಾರೆ.

ಆಗಸ್ಟ್ 19ಕ್ಕೆ ಸಚಿವ ಸಂಪುಟ ರಚನೆಗೆ ಬಿಎಸ್‍ವೈ ಅವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಇಲ್ಲ. ಬರೀ 16 ಮಂದಿ ಮಾತ್ರ ಬಿಎಸ್‍ವೈ ಸಂಪುಟ ಸೇರಲು ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಆಗಸ್ಟ್ 19 ರಂದು ಸೋಮವಾರ ಬಿಎಸ್‍ವೈ ಟೀಂ ಪ್ರಮಾಣ ವಚನ ಸ್ವೀಕಾರ ಮಾಡಲಿದೆ. ದೆಹಲಿಯಲ್ಲಿ ಸಂಪುಟಕ್ಕೆ ಯಾರು ಸೇರಬೇಕು ಅನ್ನೋದು ಡಿಸೈಡ್ ಆಗುತ್ತದೆ. ಪಟ್ಟಿ ತನ್ನಿ 16 ಶಾಸಕರಿಗೆ ಮಾತ್ರ ಸಚಿವರ ಭಾಗ್ಯ ಎಂದು ಹೈಕಮಾಂಡ್ ಹೇಳಿದ್ದು, ಇದೀಗ ಬಿಎಸ್‍ವೈ ಸಂಪುಟದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಲಿಂಗಾಯತರಿಗೆ ಹೆಚ್ಚು ಸ್ಥಾನ ಸಿಕ್ಕಿ ಬಿಡುತ್ತಾ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಅನರ್ಹ ಶಾಸಕರನ್ನ ಕೈಬಿಡುವುದು ಬೇಡ ಎಂಬ ಸಂದೇಶ ಈಗಾಗಲೇ ರವಾನೆಯಾಗಿದೆ. ಈ ಮೂಲಕ 17 ಸಚಿವ ಸ್ಥಾನ ಉಳಿಸಿಕೊಂಡರೆ ಅನರ್ಹರಿಗೆ ವಿಶ್ವಾಸ ತುಂಬಿದಂತೆ ಆಗುತ್ತದೆ. ಹೀಗಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಬೇಡ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನಲಾಗಿದೆ.

 

Leave a Reply